ಅಕೇಶಿಯ ಆರಿಕ್ಯುಲಿಫಾರ್ಮಿಸ್ A. ಕುನ್. ಎಕ್ಸ್ ಬೆಂತ್ .

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಇಯರ್ಲೀಫ್ ಅಕೇಶಿಯ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಅಕೇಶಿಯ ಆರಿಕ್ಯುಲಿಫಾರ್ಮಿಸ್ A. ಕುನ್. ಎಕ್ಸ್ ಬೆಂತ್ .
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ದಿಸೆಂಬರ್ - ಜನವರಿ
ಹಣ್ಣಾಗುವ ಅವಧಿ: ಫೆಬ್ರವರಿ - ಮಾರ್ಚ್
ಮೂಲ: ಆಸ್ಟ್ರೇಲಿಯಾ, ಇಂಡೋನೇಷ್ಯಾ, ಪಪುವಾ ನ್ಯೂಗಿನಿಯಾ

ಉಪಯೋಗಗಳು

ಕಾಗದ, ಪೀಠೋಪಕರಣಗಳು ಮತ್ತು ಉಪಕರಣಗಳ ತಯಾರಿಕೆಗೆ ಇದರ ಮರವನ್ನು ಬಳಸಲಾಗುತ್ತದೆ. ಇದರಲ್ಲಿ ಇರುವ ಟ್ಯಾನಿನ್ ಅನ್ನು ಪ್ರಾಣಿಗಳ ಚರ್ಮ ಸಂಸ್ಕರಣ ಮಾಡಲು ಬಳಸಲಾಗುತ್ತದೆ.

ವಿವರಣೆ

.ಗಾತ್ರದಲ್ಲಿ ಸಾಧಾರಣದಿಂದ ಹೆಚ್ಚು ಗಾತ್ರವಿರುವ, 15-30 ಮೀ ಎತ್ತರವಿರುವ ನಿತ್ಯಹರಿದ್ವರ್ಣ ಮರ. ಇದರ ಎಲೆಗಳು ಆಲ್ಟರ್ನೇಟ್ , ಸರಳವಾಗಿದ್ದು , ಫೈಲೋಡ್ಸ್(ಚಪ್ಪಟೆಯಾದ ಎಲೆ ಕಾಂಡಗಳು) ಆಗಿ ಮಾರ್ಪಾಡಾಗಿರುತ್ತವೆ. ಈ ಬ್ಲೇಡ್‌ನಂತೆ, ಸ್ವಲ್ಪ ಬಾಗಿದಂತಿರುವ ಅವುಗಳ ಉದ್ದ 5-8 ಇಂಚಿರುತ್ತದೆ. ಎಲೆಯ ಅಕ್ಷಗಳಲ್ಲಿ ಹಳದಿ-ಕಿತ್ತಳೆ ಬಣ್ಣದ ಹೂ ಗೊನೆಗಳು ಅಥವಾ ಕಾಂಡದ ತುದಿಗಳಲ್ಲಿ ಸಡಿಲವಾದ ಹೂಗೊನೆಗಳ ಗೊಂಚಲುಗಳಿರುತ್ತವೆ; ಹಲವಾರು ಬಿಡಿಯಾದ ಕೇಸರಗಳಿರುವ ಈ ಹೂವುಗಳು ಮಿಮೋಸಾದ ತರಹ ಇರುತ್ತವೆ.ಹಣ್ಣು ಚಪ್ಪಟೆಯಾಗಿದ್ದು, ಅದರ ಉದ್ದವಾದ (ಒಬ್ಲಾಂಗ್) ಬೀಜಕೋಶ, ಪಕ್ವವಾದ ಮೇಲೆ ತಿರುಚಿರುತ್ತದೆ.