ಕನ್ನಡದ ಹೆಸರು : | ಬಾಗೆ ಮಾರ, ಸಿರೀಸ |
ಸಾಮಾನ್ಯ ಹೆಸರು : | ಫ್ಲಿಯಾ ಮರ, ಮಹಿಳೆಯ ನಾಲಿಗೆ ಮರ |
ಕುಟುಂಬದ ಹೆಸರು : | ಫ್ಯಾಬೇಸಿ |
ವೈಜ್ಞಾನಿಕ ಹೆಸರು : | ಅಲ್ಬಿಜಿಯಾ ಲೆಬ್ಬೆಕ್ (ಎಲ್.) ಬೆಂತ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಏಪ್ರಿಲ್-ಮೇ |
ಹಣ್ಣಾಗುವ ಅವಧಿ: | ಡಿಸೆಂಬರ್ - ಜನವರಿ |
ಮೂಲ: | ಇಂಡೋಮಲಯ, ನ್ಯೂ ಗುನಿಯಾ, ಉತ್ತರ ಆಸ್ಟ್ರೇಲಿಯಾ |
ಇದು ಸ್ರಾವರೋಧಕವಾಗಿದ್ದು, ಕೆಲವು ಸಮುದಾಯಗಳಲ್ಲಿ ರಕ್ತಕುರು, ಕೆಮ್ಮು, ಕಣ್ಣಿನ ಸಮಸ್ಯೆ, ಜ್ವರ, ಜಿಂಜಿವೈಟಿಸ್, ಶ್ವಾಸಕೋಶದ ತೊಂದರೆಗಳು, ಎದೆಭಾಗದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ, ಇದನ್ನು ಟಾನಿಕ್ ಆಗಿ ಬಳಸಲಾಗುತ್ತದೆ ಮತ್ತು ಕಿಬ್ಬೊಟ್ಟೆಯ ಗೆಡ್ಡೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ತೊಗಟೆಯನ್ನು ಉರಿಯೂತದ ಚಿಕಿತ್ಸೆಯಲ್ಲಿ ಔಷಧಿಯಾಗಿ ಬಳಸಲಾಗುತ್ತದೆ..
. 30 ಮೀ ಎತ್ತರದವರೆಗಿರುವ, ಮಧ್ಯಮ ಗಾತ್ರದ ಮರ. ಬೈಪಿನ್ನೇಟ್ ಕಾಂಪೌಂಡ್ ಎಲೆಗಳು ಅಕ್ಷದ ಮೇಲೆ ರೋಮರಹಿತವಾಗಿರುತ್ತವೆ ಅಥವಾ ಸ್ವಲ್ಪ ಕೂದಲಿರುತ್ತವೆ; 2-4 ಜೋಡಿಗಳಲ್ಲಿ (ಉಪಪರ್ಣಗಳು)ಪಿನ್ನಾಗಳು, ಪ್ರತಿಯೊಂದೂ 2-11 ಜೋಡಿ ಓರೆಯಾದ ಆಯತಾಕಾರದ ಚಿಗುರೆಲೆಗಳನ್ನು ಹೊಂದಿದ್ದು, ಚಿಕ್ಕ ಕಾಂಡವನ್ನು ಹೊಂದಿರುತ್ತದೆ. ಹೂವುಗಳ ಬಣ್ಣ ಬಿಳಿಯಾಗಿರುತ್ತದೆ, ಹೆಚ್ಚು ಪರಿಮಳಯುಕ್ತವಾಗಿರುತ್ತವೆ, ಮುಕುಟ ದಳ(ಕೊರೊಲಾ)ದ ಮೇಲೆ ಕೇಸರಗಳು ಬಿಡಿಯಾಗಿರುತ್ತವೆ, ಮೇಲ್ಭಾಗದಲ್ಲಿ ಹಳದಿ-ಹಸಿರು, ಬಿಳಿ ಕೆಳಭಾಗದಲ್ಲಿ ಬಿಳಿಯಾಗಿರುವ 30-40 ಕೇಸರಗಳಿರುತ್ತವೆ. ಬೀಜಕೋಶಗಳು ಪಕ್ವವಾದಾಗ ಮಸುಕಾದ ಒಣಹುಲ್ಲಿನ ಬಣ್ಣದಿಂದ ತಿಳಿ ಕಂದು ಬಣ್ಣಕ್ಕೆ ತಿರುಗುತ್ತದೆ, ಕಿರಿದಾದ-ಆಯತಾಕಾರದ, ಕಾಗದದಂತೆ, ಒರಟಾಗಿ, ಚಪ್ಪಟೆಯಾಗಿರುವ ಇವು ಬೀಜಗಳ ನಡುವೆ ಉಬ್ಬಿದಂತೆ ಅಥವಾ ಅದುಮಿದಂತೆ ಇರುವುದಿಲ್ಲ. ಗುಂಡಗೆ ಅಥವಾ ಮೊಟ್ಟೆಯ ಆಕಾರದಲ್ಲಿರುವ ಕಂದು ಬಣ್ಣದ ಬೀಜಗಳು ಚಪ್ಪಟೆಯಾಗಿರುತ್ತವೆ. ಪ್ರತಿ ಪಾಡ್‌ನಲ್ಲಿ/ಬೀಜಕೋಶದಲ್ಲಿ 6- 12 ಬೀಜಗಳನ್ನು ಅಡ್ಡಲಾಗಿ ಇರುತ್ತವೆ.