ಲಾಗರ್ಸ್ಟ್ರೋಮಿಯಾ ಡುಪೆರ್ರಿಯಾನಾ ಪಿಯರ್. ಮಾಜಿ ಗಗ್ನೆಪ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಥೋರೆಲ್ಸ್ ಕ್ರೇಪ್ ಮಿರ್ಟ್ಲ್
ಕುಟುಂಬದ ಹೆಸರು : ಲಿಥ್ರೇಸಿ
ವೈಜ್ಞಾನಿಕ ಹೆಸರು : ಲಾಗರ್ಸ್ಟ್ರೋಮಿಯಾ ಡುಪೆರ್ರಿಯಾನಾ ಪಿಯರ್. ಮಾಜಿ ಗಗ್ನೆಪ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜುಲೈ - ಸೆಪ್ಟೆಂಬರ್
ಹಣ್ಣಾಗುವ ಅವಧಿ:
ಮೂಲ: ಕಾಂಬೋಡಿಯಾ, ಥೈಲ್ಯಾಂಡ್, ವಿಯೆಟ್ನಾಂ

ಉಪಯೋಗಗಳು

ವಿವರಣೆ

25-30 ಮೀ ಎತ್ತರವಿರುವ ಡೆಸಿಡುಅಸ್ ಮರಗಳು. ಕೊಂಬೆಗಳು ದುಂಡಗಿದ್ದು ರೋಮರಹಿತವಾಗಿರುತ್ತವೆ. ಎಲೆಗಳು ಸರಳ, ಒಬ್ಲಾಂಗ್ –ಒವೇಟ್ ,ಆಗಿದ್ದು ರೋಮರಹಿತವಾಗಿರುತ್ತವೆ, ಬುಡ ಮೊಂಡು ಅಥವಾ ದುಂಡಗಿರುತ್ತದೆ, ತುದಿ ಇಮಾರ್ಜಿನೇಟ್ , ದುಂಡು ಅಥವಾ ಸ್ವಲ್ಪ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಟರ್ಮಿನಲ್ ಪ್ಯಾನಿಕಲ್. ಉಭಯಲಿಂಗಿ ಹೂವುಗಳು, ನೇರಳೆ ಅಥವಾ ನೀಲಕ ಬಣ್ಣದಲ್ಲಿರುತ್ತವೆ, ದಳಗಳು ಸುಕ್ಕುಗಟ್ಟಿರುತ್ತವೆ. ಹೂವುಗಳು ಬಾಡಿದಾಗ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಹಣ್ಣು, ಅಂಡಾಕಾರದ, 1.3 ಸೆಂ.ಮೀ. ಉದ್ದನೆಯ ಒಂದು ಕ್ಯಾಪ್ಸುಲ್.