ಲಾಗರ್ಸ್ಟ್ರೋಮಿಯಾ ಇಂಡಿಕಾ ಎಲ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಕ್ರೇಪ್ ಮಿರ್ಟ್ಲ್
ಕುಟುಂಬದ ಹೆಸರು : ಲಿಥ್ರೇಸಿ
ವೈಜ್ಞಾನಿಕ ಹೆಸರು : ಲಾಗರ್ಸ್ಟ್ರೋಮಿಯಾ ಇಂಡಿಕಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜೂನ್ - ಸೆಪ್ಟೇಂಬರ್
ಹಣ್ಣಾಗುವ ಅವಧಿ: ಸೆಪ್ಟೆಂಬರ್ - ನವೆಂಬರ್
ಮೂಲ: ಭಾರತದ ಉಪಖಂಡ, ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

ಕಾಂಡದ ತೊಗಟೆಯಲ್ಲಿ ಜ್ವರಶಾಮಕ, ಉತ್ತೇಜಕ ಮತ್ತು ರಕ್ತಸ್ರಾವ ನಿರೋಧಕ (ಸ್ಟೈಪ್ಟಿಕ್) ಗುಣಗಳಿವೆ.ತೊಗಟೆ, ಹೂವು ಮತ್ತು ಎಲೆಗಳನ್ನು ಹೈಡ್ರೋಗೋಗ್ ಮತ್ತು ಒಂದು ಬಲವಾದ ವೀರೇಚಕಗಳೆಂದು ಪರಿಗಣಿಸಲಾಗುತ್ತದೆ. ಹೂವುಗಳಿಂದ ಮಾಡಲಾದ ಪೇಸ್ಟ್ ಅನ್ನು ಕಡಿತ ಮತ್ತು ಗಾಯಗಳ ಮೇಲೆ ಹಚ್ಚಲಾಗುತ್ತದೆ. ಮರದ ಬೇರು ಆಸ್ಟ್ರಿಂಜೆಂಟ್,ಡಿಟಾಕ್ಸಿಕೆಂಟ್ ಮತ್ತು ಮೂತ್ರವರ್ಧಕವಾಗಿದೆ. ಹೂವುಗಳಿಂದ ತಯಾರಿಸಿದ ಕಷಾಯವನ್ನು ಶೀತಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ

ವಿವರಣೆ

10 ಮೀ ಎತ್ತರದವರೆಗೆ ಇರುವ ಡೆಸಿಡುಅಸ್ ಪೊದೆಗಳು ಅಥವಾ ಸಣ್ಣ ಮರಗಳು.ತೊಗಟೆ ತೆಳುವಾಗಿ, ನಯವಾಗಿದ್ದು, ಬಿಳಿ-ಬೂದು ಬಣ್ಣದಲ್ಲಿರುತ್ತದೆ. 4-ಕೋನಗಳು ಅಥವಾ ಸಬ್ ಎಲೇಟ್ ಆದ ಕಿರುಕೊಂಬೆಗಳು, ಮೃದು ತುಪ್ಪಳದಿಂದ ಕೂಡಿದ್ದು, ರೋಮರಹಿತವಾಗಿರುತ್ತವೆ. ಎಲೆಗಳು ಸರಳ, ಸೆಸ್ಸೈಲ್,ಆಲ್ಟರ್ನೇಟ್ , ಒಬ್ಲಾಂಗ್ ಅಥವಾ ಒಬೊವೇಟ್ , ಒಬೊವೇಟ್ –ಒರ್ಬಿಕ್ಯುಲಾರ್ ಆಗಿದ್ದು, ಬೆಳೆದ ನಂತರ ಚರ್ಮದಂತಾಗಿ ರೋಮರಹಿತವಾಗಿರುತ್ತವೆ, ಬುಡ ಕ್ಯೂನಿಯೇಟ್ ಅಥವಾ ಕಿರಿದಾಗಿರುತ್ತದೆ, ತುದಿ ಸಬ್ ಒಬ್ಟ್ಯೂಸ್ ಅಥವಾ ಸಬ್ ಅಕ್ಯೂಟ್ ಆಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಹೂಗೊಂಚಲು ಒಂದು ಪ್ಯಾನಿಕಲ್. ಗುಲಾಬಿ, ಗುಲಾಬಿ ಅಥವಾ ಬಿಳಿ.ಬಣ್ಣದ ದ್ವಿಲಿಂಗಿ ಹೂವುಗಳು, ಹಣ್ಣು 4-6 ಕವಾಟಗಳು, ಪಂಜಗಳಿರುವ, ಸಬ್ಆರ್ಬಿಕ್ಯುಲರ್ ಆದ, ಒಂದು ಡಿಹಿಸೆಂಟ್ ಕ್ಯಾಪ್ಸುಲ್. ಬೀಜಗಳಿಗೆ ರೆಕ್ಕೆಗಳಿರುತ್ತವೆ.