ಲಾಗರ್ಸ್ಟ್ರೋಮಿಯಾ ಮೈಕ್ರೋಕಾರ್ಪಾ ವೈಟ್

ಕನ್ನಡದ ಹೆಸರು : ಬಿಳಿನಂದಿ, ಬೆಲಂದರು
ಸಾಮಾನ್ಯ ಹೆಸರು : ಬೆನ್ ಟೀಕ್ ಟ್ರೀ
ಕುಟುಂಬದ ಹೆಸರು : ಲಿಥೇಸಿ
ವೈಜ್ಞಾನಿಕ ಹೆಸರು : ಲಾಗರ್ಸ್ಟ್ರೋಮಿಯಾ ಮೈಕ್ರೋಕಾರ್ಪಾ ವೈಟ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜೂನ್ - ಫೆಬ್ರವರಿ
ಹಣ್ಣಾಗುವ ಅವಧಿ: ಜೂನ್ - ಫೆಬ್ರವರಿ
ಮೂಲ: ಪಶ್ಚಿಮ ಘಟ್ಟಗಳು

ಉಪಯೋಗಗಳು

ಇದು ಇದ್ದಿಲು ಮತ್ತು ಇಂಧನ ಕಟ್ಟಿಗೆಗೆ ತುಂಬಾ ಸೂಕ್ತವಾಗಿದೆ. ತೊಗಟೆ ಮತ್ತು ಎಲೆಗಳಲ್ಲಿ ಟ್ಯಾನಿನ್ ಇರುತ್ತದೆ. ಇದನ್ನು ಚರ್ಮದ ತಯಾರಿಯಲ್ಲಿ ಬಳಸಲಾಗುತ್ತದೆ.

ವಿವರಣೆ

. 25 ಮೀ ವರೆಗೆ ಎತ್ತರವಿರುವ, ಡೆಸಿಡುಅಸ್ ಮರಗಳು. ಬಿಳಿ ಬಣ್ಣದ ತೊಗಟೆ ನಯವಾಗಿದ್ದು, ಸಿಪ್ಪೆ ಸುಲಿಯುವಂತಿರುತ್ತದೆ. ಎಲೆಗಳು ಸರಳವಾಗಿರುತ್ತವೆ, ಆಪೋಸಿಟ್ ಆಗಿರುತ್ತವೆ, ಕೆಲವೊಮ್ಮೆ ಮೇಲಿನ ಎಲೆಗಳು ಆಲ್ಟರ್ನೇಟ್ ಆಗಿರುತ್ತವೆ; ಎಲಿಪ್ಟಿಕ್ ಆಗಿದ್ದು, ರೋಮರಹಿತವಾಗಿರುತ್ತವೆ, ಕೆಳಗೆ ಬೆಳ್ಳಗೆ ಮಕಮಲ್ಲಿನಂತಿರುತ್ತದೆ, ಚೂಪಾದ ಬುಡ, ತುದಿ ಅಕ್ಯೂಟ್ ನಿಂದ ಅಕ್ಯುಮಿನೇಟ್ ಆಗಿದ್ದು , ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ತುದಿಯ ಅಥವಾ ಅಕ್ಷಾಕಂಕುಳಿನ ಪ್ಯಾನಿಕಲ್. 5-6 ಮಿಮೀ ಅಗಲದ, ಉಗುರುಗಳುಳ್ಳ, ದ್ವಿಲಿಂಗಿ ಹೂವುಗಳು, ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು ಅಂಡಾಕಾರದ, ವುಡಿಯಾದ, 4-6 ಕವಾಟಗಳುಳ್ಳ, ಒಂದು ಡಿಹಿಸೆಂಟ್ ಕ್ಯಾಪ್ಸುಲ್. ರೆಕ್ಕೆಗಳಿರುವಂತಹ ಅನೇಕ ಬೀಜಗಳಿರುತ್ತವೆ.