ಕನ್ನಡದ ಹೆಸರು : | ಹೊಳೆ ದಾಸವಾಳ, ಚೆಳ್ಳ |
ಸಾಮಾನ್ಯ ಹೆಸರು : | ಕ್ವೀನ್ಸ್ ಕ್ರೇಪ್ ಮಿರ್ಟ್ಲ್ |
ಕುಟುಂಬದ ಹೆಸರು : | ಲಿಥ್ರೇಸಿ |
ವೈಜ್ಞಾನಿಕ ಹೆಸರು : | ಲಾಗರ್ಸ್ಟ್ರೋಮಿಯಾ ಸ್ಪೆಸಿಯೋಸಾ (ಎಲ್.) ಪರ್ಸ್ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಏಪ್ರಿಲ್ - ಜೂನ್ |
ಹಣ್ಣಾಗುವ ಅವಧಿ: | ಜುಲೈ - ಆಗಸ್ಟ್ |
ಮೂಲ: | ಭಾರತದ ಉಪಖಂಡ, ದಕ್ಷಿಣ ಚೀನಾ, ಇಂಡೋಚೈನಾ, ಫಿಲಿಪೈನ್ಸ್, ಮಲೇಷ್ಯಾ, ಇಂಡೋನೇಷ್ಯಾ.. |
ಇದು ದೇಹದ ರಕ್ತದಲ್ಲಿರುವ ಸಕ್ಕರೆಯನ್ನು ಕಡಿಮೆ ಮಾಡಲು ಸಾಂಪ್ರದಾಯಿಕವಾಗಿ ಬಳಸುವ ಒಂದು ಔಷಧೀಯ ಮರವಾಗಿದೆ. ಇದರಲ್ಲಿ ಇರುವ ಹೆಚ್ಚಿನ ಪ್ರಮಾಣದ ಕೊರೊಸೊಲಿಕ್ ಆಮ್ಲ ಇದನ್ನು ಪರಿಣಾಮಕಾರಿಯಾದ ಆಂಟಿ ಡಯಾಬಿಟಿಕ್ ಔಷಧವನ್ನಾಗಿ ಮಾಡುತ್ತದೆ. ಮೂತ್ರಪಿಂಡ, ಮೂತ್ರಕೋಶದ ಸಮಸ್ಯೆಗಳು ಮತ್ತು ಅಧಿಕ ರಕ್ತದೊತ್ತಡಕ್ಕೂ ಇದನ್ನು ಶಿಫಾರಸು ಮಾಡಲಾಗುತ್ತದೆ. ತೊಗಟೆಯ ಕಷಾಯವನ್ನು ಅತಿಸಾರ ಮತ್ತು ಕಿಬ್ಬೊಟ್ಟೆಯ ನೋವಿನ ಪರಿಹಾರಕ್ಕೆ ಬಳಸಲಾಗುತ್ತದೆ. ಮಲೇರಿಯಾ ಜ್ವರವನ್ನು ನಿವಾರಿಸಲು ಎಲೆಯ ಪೌಲ್ಟೀಸ್ ಅನ್ನು ಬಳಸಲಾಗುತ್ತದೆ ಮತ್ತು ಒಡೆದ ಪಾದಗಳ ಮೇಲೆ ಹಚ್ಚಲಾಗುತ್ತದೆ.
ಇದು ಮಧ್ಯಮ ಗಾತ್ರದ, 7-18 ಮೀ ನಷ್ಟು ಎತ್ತರವಿರುವ, ಸೆಮಿ- ಡೆಸಿಡುಅಸ್ ಮರವಾಗಿದೆ.ತೊಗಟೆ ಚಕ್ಕೆಯಂತಿರುತ್ತದೆ. ಎಲೆಗಳು ಸರಳ, ಆಪೊಸಿಟ್ ಅಥವಾ ಸಬ್-ಆಪೊಸಿಟ್, ಎಲಿಪ್ಟಿಕ್ , ಒಬ್ಲಾಂಗ್ – ಎಲಿಪ್ಟಿಕ್ ನಿಂದ ಓವೇಟ್ ಆಗಿದ್ದು, ರೋಮರಹಿತವಾಗಿರುತ್ತವೆ, ಬುಡ ಮೊಂಡು ಅಥವಾ ಚೂಪಾಗಿರುತ್ತದೆ, ತುದಿ ಚೂಪಾಗಿದ್ದು, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಟರ್ಮಿನಲ್ ಪ್ಯಾನಿಕಲ್, 20-40 ಸೆಂ.ಮೀ ಉದ್ದವಿರುತ್ತದೆ. ದ್ವಿಲಿಂಗಿ ಹೂವು, ಕೆನ್ನೀಲಿ ಅಥವಾ ಗುಲಾಬಿ ಬಣ್ಣದಲ್ಲಿರುತ್ತದೆ. ಹಣ್ಣು, 4-6 ಕವಾಟಗಳಿರುವ ಒಂದು ವುಡಿ ಕ್ಯಾಪ್ಸುಲ್. ರೆಕ್ಕೆಗಳಿರುವ ಅನೇಕ ಬೀಜಗಳಿರುತ್ತವೆ.