ಕನ್ನಡದ ಹೆಸರು : | ಸುಬಾಬುಲ್ |
ಸಾಮಾನ್ಯ ಹೆಸರು : | ರಿವರ್ ಟ್ಯಾಮರಿಂಡ್ ಟ್ರೀ |
ಕುಟುಂಬದ ಹೆಸರು : | ಫ್ಯಾಬೇಸಿ |
ವೈಜ್ಞಾನಿಕ ಹೆಸರು : | ಲ್ಯುಕೇನಾ ಲ್ಯುಕೋಸೆಫಾಲಾ (ಲ್ಯಾಮ್.) ಡಿ ವಿಟ್ |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಏಪ್ರಿಲ್ - ಜೂನ್ |
ಹಣ್ಣಾಗುವ ಅವಧಿ: | ಆಗಸ್ಟ್ - ಅಕ್ಟೋಬರ್ |
ಮೂಲ: | ದಕ್ಷಿಣ ಉಷ್ಣವಲಯದ ಅಮೇರಿಕಾ. |
.ಕಾಗದದ ಉದ್ಯಮದಲ್ಲಿ ಪಲ್ಪನ್ನು (ತಿರುಳನ್ನು) ತಯಾರಿಸಲು ಈ ಮರವನ್ನು ಬಳಸಲಾಗುತ್ತದೆ. ಬೀಜಕೋಶಗಳು, ಎಲೆಗಳು ಮತ್ತು ತೊಗಟೆಗಳನ್ನು ಹಿಂಡಿ ಕೆಂಪು, ಕಂದು ಮತ್ತು ಕಪ್ಪು ಡೈಗಳನ್ನು ತೆಗೆಯಲಾಗುತ್ತದೆ. ಬೇರು ಮತ್ತು ತೊಗಟೆಯ ಕಷಾಯ ಗರ್ಭಸ್ರಾವಕವಾಗಿದೆ. ಬೀಜಕೋಶಗಳು ಮತ್ತು ಬೀಜಗಳು ಉತ್ತಮ ಟಾನಿಕ್ ಗಳಾಗಿವೆ. ಹುರಿದ ಬೀಜಗಳು ಚರ್ಮವನ್ನು ಮೃದುಗೊಳಿಸುತ್ತವೆ. ಬೀಜಗಳ ಪರಿಣಾಮ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಚಿಕಿತ್ಸೆಯಲ್ಲಿ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀಡಲಾಗುತ್ತದೆ.
0.6-9 ಮೀ ನಷ್ಟು ಎತ್ತರವಿರುವ, ಪೊದೆಸಸ್ಯ ಅಥವಾ ಚಿಕ್ಕ ಡೆಸಿಡುಅಸ್ ಮರ. ತೊಗಟೆ ಬೂದು-ಕಂದು ಬಣ್ಣದಲ್ಲಿದ್ದು, ಸೀಳುಗಳಿರುತ್ತವೆ. ಬೈಪಿನೇಟ್ ಎಲೆಗಳು, 4-9 ಜೋಡಿ ಪಿನ್ನಾಗಳು, 10-17 ಜೋಡಿ ಚಿಗುರೆಲೆಗಳಿರುತ್ತವೆ; ಸೆಸೈಲ್ ಆದ ಚಿಗುರೆಲೆಗಳು, ಲೀನಿಯರ್ –ಒಬ್ಲಾಂಗ್ , ರೋಮರಹಿತ ಅಥವಾ ಸಬ್‌ಗ್ಲಾಬ್ರಸ್ ಆಗಿರುತ್ತವೆ, ಬುಡ ಓರೆ ಅಥವಾ ಕೀಲಿ ಆಕಾರದಲ್ಲಿರುತ್ತದೆ, ತುದಿ ಚೂಪಾಗಿದ್ದು, ಅಂಚು ಕೂದಲಿಂದ ಸುತ್ತುವರೆದಿರುತ್ತದೆ. ಪುಷ್ಪಮಂಜರಿ ಒಂದು ತಲೆಹೂಗೊಂಚಲು. ದ್ವಿಲಿಂಗಿ ಹೂವುಗಳು, ಬಿಳಿಯಿಂದ ಕೆನೆಬಣ್ಣದಲ್ಲಿರುತ್ತವೆ, ಪರಾಗಗಳು ರೋಮದಿಂದ ಕೂಡಿರುತ್ತವೆ. ಹಣ್ಣು , ಲೀನಿಯರ್ ಮತ್ತು ಒಬ್ಲಾಂಗ್ ಆಕಾರದ, ಚಪ್ಪಟೆಯಾದ, ಮೃದುತುಪ್ಪಳದಿಂದ ಕೂಡಿದ, 3 ಸೆಂ.ಮೀ ಉದ್ದದ ತೊಟ್ಟಿರುವ ಒಂದು ಪಾಡ್. ಗಾಢ ಕಂದು ಬಣ್ಣದ, ಅಂಡಾಕಾರದ 15-25 ಬೀಜಗಳಿರುತ್ತವೆ.