ಲಿಬಿಡಿಬಿಯಾ ಫೆರಿಯಾ (ಮಾರ್ಟ್. ಎಕ್ಸ್ ಟುಲ್.) ಎಲ್.ಪಿ.ಕ್ವಿರೋಜ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಬ್ರೆಜಿಲಿಯನ್ ಐರನ್ ವುಡ್ , ಲಿಯೊಪಾರ್ಡ್ ಟ್ರೀ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಲಿಬಿಡಿಬಿಯಾ ಫೆರಿಯಾ (ಮಾರ್ಟ್. ಎಕ್ಸ್ ಟುಲ್.) ಎಲ್.ಪಿ.ಕ್ವಿರೋಜ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮೇ - ಜುಲೈ
ಹಣ್ಣಾಗುವ ಅವಧಿ:
ಮೂಲ: ಬ್ರೆಜಿಲ್, ಬೊಲಿವಿಯಾ

ಉಪಯೋಗಗಳು

ಬೇರು ಮತ್ತು ಕಾಂಡದ ತೊಗಟೆಯನ್ನು ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬೇರು ಆಸ್ಟ್ರಿಂಜೆಂಟ್ ಮತ್ತು ಜ್ವರ ನಿರೋಧಕ ಗುಣಗಳನ್ನು ಹೊಂದಿದೆ. ಮರದ ಕಷಾಯ ನೆಗಡಿ (ಆಂಟಿಕ್ಯಾಟಾರ್ಹಾಲ್) ಮತ್ತು ಗಾಯವನ್ನು ಗುಣ ಪಡಿಸುತ್ತದೆ..

ವಿವರಣೆ

8-15 ಮೀ ನಷ್ಟು ಎತ್ತರವಿರುವ, ಮಧ್ಯಮ ಗಾತ್ರದ ಡೇಸಿಡುಅಸ್ ಮರ. ಮರದ ತಲೆಯ ಭಾಗ ಛತ್ರಿ ಆಕಾರದಲ್ಲಿದ್ದು, ಸಮತಲವಾಗಿರುತ್ತದೆ. ನಯವಾದ ತೊಗಟೆ , ತಿಳಿ ಬೂದು ಬಣ್ಣದಿಂದ ದಂತದ ಬಣ್ಣದಲ್ಲಿರುತ್ತದೆ, ತೊಗಟೆ ಸಿಪ್ಪೆ ಸುಲಿಯುವಂತಿದ್ದು, ಕಂದು ಅಥವಾ ಗಾಢ ಬೂದು ಬಣ್ಣದ ಮಚ್ಚೆಗಳಿಂದ ಕೂಡಿರುತ್ತದೆ. ಎಲೆಗಳು ಬೈಪಿನ್ನೇಟ್ , ಪಿನ್ನಾಗಳು 5 ರಿಂದ 11, ಪ್ರತಿ ಪಿನ್ನಾಗೆ 8-24 ಚಿಗುರೆಲೆಗಳಿರುತ್ತವೆ; ಚಿಗುರೆಲೆಗಳು ಆಪೊಸಿಟ್ , ಲೀನಿಯರ್ – ಒಬ್ಲಾಂಗ್ ಅಥವಾ ಎಲಿಪ್ಟಿಕಲ್ ಆಗಿದ್ದು , ಪ್ಯೂಬೆಸೆಂಟ್ ಆಗಿರುತ್ತವೆ, ಬುಡದ ಚೂಪು ಅಥವಾ ಸಬ್ ಅಟೆನ್ಯುಏಟ್ ಆಗಿರುತ್ತದೆ, ತುದಿ ಚೂಪಾಗಿದ್ದು, ಅಂಚು ಸಂಪೂರ್ಣವಾಗಿತ್ತದೆ. ಪುಷ್ಪಮಂಜರಿ ಒಂದು ತುದಿಯಲ್ಲಿರುವ ರೇಸಿಮ್. ಉಭಯಲಿಂಗಿ ಹೂವುಗಳು, ಪರಿಮಳಯುಕ್ತವಾಗಿರುತ್ತವೆ, ಬೆಸ ದಳದ ಹಳದಿಬಣ್ಣದ ಹೂವುಗಳಲ್ಲಿ ಕೆಂಪು ಮಚ್ಚೆಗಳಿರುತ್ತವೆ. ಹಣ್ಣು 5-7 ಸೆಂ.ಮೀ ಉದ್ದನೆಯ, ವುಡಿಯಾದ, ಎಲಿಪ್ಟಿಕ್ –ಒಬ್ಲಾಂಗ್ ಆಗಿರುವ, ಕುಗ್ಗಿದ ಒಂದು ಇಂಡೆಹಿಸೆಂಟ್ ಪಾಡ್.