ಲಿಮೋನಿಯ ಆಸಿಡಿಸಿಮಾ ಎಲ್.

ಕನ್ನಡದ ಹೆಸರು : ಬೇಲ, ಬಲೂಲ
ಸಾಮಾನ್ಯ ಹೆಸರು : ವುಡ್ ಆಪಲ್
ಕುಟುಂಬದ ಹೆಸರು : ರುಟೇಸಿ
ವೈಜ್ಞಾನಿಕ ಹೆಸರು : ಲಿಮೋನಿಯ ಆಸಿಡಿಸಿಮಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮೇ - ಜುಲೈ
ಹಣ್ಣಾಗುವ ಅವಧಿ: ನವೆಂಬರ್ - ಡಿಸೆಂಬರ್
ಮೂಲ: ಭಾರತ, ಬಾಂಗ್ಲಾದೇಶ, ಶ್ರೀಲಂಕಾ

ಉಪಯೋಗಗಳು

sಹಣ್ಣು ರಕ್ತಸ್ರಾವಕ ಗುಣಗಳನ್ನು ಹೊಂದಿದೆ.ಎಲೆಗಳು ಟ್ಯಾನಿನ್ ಮತ್ತು ಸಾರಭೂತ ತೈಲವನ್ನು ಹೊಂದಿರುತ್ತವೆ. ಸ್ರಾವನಿರೋಧಕವಾಗಿರುವ ಅವುಗಳನ್ನು, ಸಾಮಾನ್ಯವಾಗಿ ಹಾಲು ಮತ್ತು ಸಕ್ಕರೆಯೊಂದಿಗೆ ಸೇರಿಸಿ ಸೇವಿಸಲಾಗುತ್ತದೆ, ಅಜೀರ್ಣ, ವಾಯು, ಅತಿಸಾರ, ಭೇದಿ (ವಿಶೇಷವಾಗಿ ಮಕ್ಕಳಲ್ಲಿ) ಮತ್ತು ಹೆಮೊರೊಯಿಡ್ಸ್ ಚಿಕಿತ್ಸೆಯಲ್ಲಿ, ಸ್ರಾವನಿರೋಧಕವಾಗಿರುವ ಅವುಗಳನ್ನು, ಸಾಮಾನ್ಯವಾಗಿ ಹಾಲು ಮತ್ತು ಸಕ್ಕರೆಯೊಂದಿಗೆ ಸೇರಿಸಿ ಸೇವಿಸಲಾಗುತ್ತದೆ. ಪುಡಿಮಾಡಿದ ಎಲೆಗಳನ್ನು ಪುಡಿಮಾಡಿ ಅದರಿಂದ ತೆಗೆದ ಎಣ್ಣೆಯನ್ನು ತುರಿಕೆಯಿರುವ ಚರ್ಮದ ಜಾಗದ ಮೇಲೆ ಹಚ್ಚಲಾಗುತ್ತದೆ

ವಿವರಣೆ

20 ಮೀ ನಷ್ಟು ಎತ್ತರವಿರುವ, ಮಧ್ಯಮ ಗಾತ್ರದ, ಪತನಶೀಲ ಮರಗಳು. ತೊಗಟೆ ಕಡು ಬೂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ, ಉದ್ದನೆಯ ಬಿರುಕುಗಳಿರುತ್ತವೆ, ಚೂಪು ಮತ್ತು ನೇರವಾಗಿರುವ ಮುಳ್ಳುಗಳಿರುತ್ತವೆ. ಎಲೆಗಳು ಇಂಪಾರಿಪಿನ್ನೇಟ್, ಆಲ್ಟರ್ನೇಟ್ ಆಗಿದ್ದು, 1-3 ಒಟ್ಟಾಗಿ ಗೊಂಚಲಲ್ಲಿರುತ್ತವೆ; 5 -7 ಚಿಗುರೆಲೆಗಳು, ಅಪೋಸಿಟ್, ಸೆಸ್ಸೈಲ್, ಒಬೊವೇಟ್ ಆಗಿದ್ದು, ರೋಮರಹಿತವಾಗಿರುತ್ತವೆ, ಪಾರದರ್ಶಕ ಹಾಗೂ – ಚುಕ್ಕೆಗಳಿರುವ ಎಲೆಗಳು ಚರ್ಮದಂತಿರುತ್ತವೆ, ಕೀಲಿ ಆಕಾರದ ಬುಡ, ಚೂಪಾದ ತುದಿ ಇದ್ದು, ಅಂಚು ಸಂಪೂರ್ಣವಾಗಿರುತ್ತದೆ, ಎಲೆ ಪುಡಿಮಾಡಿದಾಗ ಸುಗಂಧ ಬರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಒಂದು ಸೈಮ್. 5 ದಳಗಳಿರುವ ಪಾಲಿಗ್ಯಾಮಸ್ ಹೂವುಗಳು, ಮಂದ ಕೆಂಪು ಬಣ್ಣ, 1.3 ಸೆಂ ಅಗಲವಿದ್ದು, ಪ್ಯೂಬೆಸೆಂಟ್ ಆಗಿರುತ್ತವೆ. ಹಣ್ಣು ಬಿಳೀ-ಕಂದು ಬಣ್ಣ, 5-7.6 ಸೆಂ ಅಗಲ,ಗಟ್ಟಿ ತೊಗಟೆಯಿರುವ,ಗೋಳಾಕಾರದ ವುಡಿಯಾದ ಒಂದು ಬೆರ್ರಿ. ಉಣ್ಣೆಯಂತಹ ಅನೇಕ ಬೀಜಗಳಿರುತ್ತವೆ, ಹುಳಿ ತಿರುಳಿನಲ್ಲಿ ಹುದುಗಿರುತ್ತವೆ.