ಲಿಚಿ ಚೈನೆನ್ಸಿಸ್ ಸನ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಲಿಚಿ
ಕುಟುಂಬದ ಹೆಸರು : ಸಪಿಂಡೇಸಿ
ವೈಜ್ಞಾನಿಕ ಹೆಸರು : ಲಿಚಿ ಚೈನೆನ್ಸಿಸ್ ಸನ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಚೀನಾ

ಉಪಯೋಗಗಳು

, ಅದರ ಸಿಪ್ಪೆ ಮತ್ತು ಬೀಜವನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ; ಗಂಟಲಿನ ಕಾಯಿಲೆಗಳನ್ನು ನಿವಾರಿಸಲು ಬೇರು, ತೊಗಟೆ ಮತ್ತು ಹೂವುಗಳ ಕಷಾಯವನ್ನು ಗಂಡೂಷವನ್ನಾಗಿ (ಗ್ಗಾರ್ಗ್ಲ್ ಆಗಿ) ಬಳಸಲಾಗುತ್ತದೆ. ಹಣ್ಣಿನ ಸಿಪ್ಪೆಯನ್ನು ಅತಿಸಾರದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬೀಜಗಳನ್ನು ನರರೋಗದ ಅಸ್ವಸ್ಥತೆಗಳು ಮತ್ತು ವೃಷಣಗಳ ಉರಿಯೂತದಲ್ಲಿ ಶಾಮಕವನ್ನಾಗಿ (ಅನೋಡೈನ್ ಆಗಿ) ಬಳಸಲಾಗುತ್ತದೆ.

ವಿವರಣೆ

6-12 ಮೀ ಎತ್ತರವಿರುವ, ಮಧ್ಯಮ ಗಾತ್ರದ ನಿತ್ಯಹರಿದ್ವರ್ಣ ಮರ. ಬೂದು-ಕಪ್ಪು ಬಣ್ಣದ ತೊಗಟೆ,ಕೊಂಬೆಗಳು ಕಂದು-ಕೆಂಪು.ಬಣ್ಣದಲ್ಲಿರುತ್ತವೆ. ಎಲೆಗಳು ಪಿನೇಟ್, ಆಲ್ಟರ್ನೇಟ್ ಆಗಿರುತ್ತವೆ; 2 ರಿಂದ 4 ಜೋಡಿಗಳಲ್ಲಿ ಚಿಗುರೆಲೆಗಳು, ಒವೇಟ್ ಅಥವಾ ಒವೇಟ್ –ಲ್ಯಾನ್ಸಿಲೇಟ್ ಆಗಿದ್ದು, ರೋಮರಹಿತವಾಗಿರುತ್ತವೆ, ಕೆಳಭಾಗ ಮಾಸಲು ಬೂದು ಹಸಿರು (ಗ್ಲಾಕಸ್) ಬಣ್ಣದಲ್ಲಿರುತ್ತದೆ, ಬುಡ ಕೀಲಿ ಆಕಾರದಲ್ಲಿದ್ದು , ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ತುದಿಯಲ್ಲಿರುವ (ಟರ್ಮಿನಲ್) ಪ್ಯಾನಿಕಲ್. ಬಿಳಿ, ಹಳದಿ ಅಥವಾ ಹಸಿರು ಬಣ್ಣದ ದ್ವಿಲಿಂಗಿ ಹೂವುಗಳು, ಪರಿಮಳಯುಕ್ತವಾಗಿರುತ್ತವೆ. ಹಣ್ಣು ಒಂದು ಡ್ರೂಪ್, ಗ್ಲೋಬೋಸ್ ನಿಂದ ಸಬ್ ಗ್ಲೋಬೋಸ್ , ಬಲಿತಾಗ ಕೆಂಪು ಅಥವಾ ಗುಲಾಬಿ-ಕೆಂಪು ಬಣ್ಣ ಪಡೆಯುವ ಒಂದು ಗೊರಟೆಹಣ್ಣು (ಡ್ರೂಪ್). ಗಾಢ ಕಂದು ಬಣ್ಣದ 1 ಬೀಜವಿರುತ್ತದೆ,ಅದು ತಿರುಳಿರುವ ಬೀಜವೇಷ್ಟಿಯಿಂದ (ಅರಿಲ್‌ನಿಂದ) ಮುಚ್ಚಲ್ಪಟ್ಟಿರುತ್ತದೆ.