ಲಿವಿಸ್ಟೋನಾ ಚಿನೆನ್ಸಿಸ್ (ಜಾಕ್.) ಆರ್.ಬಿಆರ್. ಎಕ್ಸ್ ಮಾರ್ಟ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಚೈನೀಸ್ ಫ್ಯಾನ್ ಪಾಮ್, ಫೌಂಟೇನ್ ಪಾಮ್
ಕುಟುಂಬದ ಹೆಸರು : ಅರೆಕೇಸಿಯೇ
ವೈಜ್ಞಾನಿಕ ಹೆಸರು : ಲಿವಿಸ್ಟೋನಾ ಚಿನೆನ್ಸಿಸ್ (ಜಾಕ್.) ಆರ್.ಬಿಆರ್. ಎಕ್ಸ್ ಮಾರ್ಟ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಬೇಧ್ಯ, ವಲ್ನರಬಲ್
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

ಎಲೆಗಳನ್ನು ಬೀಸಣಿಗೆಗಳನ್ನು ತಯಾರಿಸಲು ಬಳಸಲಾಗುತ್ತದೆ.ಅವುಗಳನ್ನು ಮಳೆಯಲ್ಲಿ ಧರಿಸುವ ಟೋಪಿ ಮತ್ತು ಕೋಟುಗಳನ್ನು, ಪೊರಕೆಗಳನ್ನು ತಯಾರಿಸಲು ಬಳಸಲಾಗುತ್ತದೆ.ಅದರ ಹೊರ ಪದರ ಮತ್ತು ಎಲೆಗಳ ತೊಟ್ಟುಗಳಿಂದ ಹೊರತೆಗೆದ ನಾರನಿಂದ ಹಗ್ಗ ಮಾಡಲಾಗುತ್ತದೆ.

ವಿವರಣೆ

15 ಮೀ ವರೆಗೆ ಎತ್ತರವಿರುವ. ಒಂದು ತಾಳೆ ಮರ. ಎಲೆಯ ಗುರುತುಗಳಿಂದ ಕಾಂಡ ಒರಟಾಗಿರುತ್ತದೆ. ಎಲೆಗಳು ಹಸ್ತಾಕಾರದಲ್ಲಿರುತ್ತವೆ, ಹಸಿರು ಅಥವಾ ಕಪ್ಪು ಬಣ್ಣದ ಹಿಂದಕ್ಕೆ ಬಾಗಿರುವ ಮುಳ್ಳುಗಳು ಎಲೆ ತೊಟ್ಟುಗಳ ಅಂಚಿನುದ್ದಕ್ಕೂ ಇರುತ್ತವೆ, 60-90 ಭಾಗಗಳಾಗಿ ವಿಂಗಡಿಸಲಾದ; ಮಡಿಚಿಕೊಂಡಿರುವ ಎಲೆ,ಬೀಸಣಿಗೆಯಾಕಾರದಲ್ಲಿರುತ್ತದೆ; ಲೀನಿಯರ್ -ಲ್ಯಾನ್ಸಿಲೇಟ್, ರೋಮರಹಿತವಾಗಿದ್ದು, ಲೋಲಕದಂತೆ ಜೋತಾಡುತ್ತಿರುತ್ತದೆ, ತುದಿ ಮೊನಚಾಗಿರುತ್ತದೆ ಮತ್ತು ಆಳವಾಗಿ ಕವಲೊಡೆದಿರುತ್ತದೆ. ಪುಷ್ಪಮಂಜರಿಗಳು 3 ಕ್ರಮದಲ್ಲಿ ಕವಲೊಡೆಯುತ್ತವೆ, ಎಳೆಯದಾಗಿದ್ದಾಗ ಹಳದಿಯಾಗಿದ್ದು ಮತ್ತು ನಂತರ ಹಸಿರಾಗುತ್ತವೆ,ಜೊತೆಗೆ ಅಹಿತಕರ ವಾಸನೆ ಇರುತ್ತದೆ.ಹೂವುಗಳು ಚಿಕ್ಕದಾಗಿದ್ದು ತೊಟ್ಟಿಲ್ಲದೆ ಅಂಟಿಕೊಂಡಿರುತ್ತವೆ, 2-4 ಹೂವುಗಳು ಒಟ್ಟಾಗಿ ಗುಂಪಾಗಿರುತ್ತವೆ. , 1.9 ಸೆಂ.ಮೀ ಉದ್ದವಿರುವ ಈ ಹಣ್ಣುಗಳು ಹಸಿರು ಅಥವಾ ನೀಲಿ-ಹಸಿರು ಬಣ್ಣದಲ್ಲಿರುತ್ತವೆ, ಗೋಳಾಕಾರದಿಂದ ಅಂಡಾಕಾರ ಅಥವಾ ಪೇರಳೆ-ಆಕಾರದಲ್ಲಿರುತ್ತವೆ.