ಮಕಾಡಾಮಿಯಾ ಇಂಟೆಗ್ರಿಫೋಲಿಯಾ ಮೈಡೆನ್ & ಬೆಟ್ಚೆ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಮಕಾಡಾಮಿಯಾ
ಕುಟುಂಬದ ಹೆಸರು : ಪ್ರೋಟಿಯೇಸಿ
ವೈಜ್ಞಾನಿಕ ಹೆಸರು : ಮಕಾಡಾಮಿಯಾ ಇಂಟೆಗ್ರಿಫೋಲಿಯಾ ಮೈಡೆನ್ & ಬೆಟ್ಚೆ
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಬೇಧ್ಯ, ವಲ್ನರಬಲ್
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

.ಇದರ ಕೊಳೆತ ಹೊಟ್ಟನ್ನು ಸಾಮಾನ್ಯವಾಗಿ ಪಾಟಿಂಗ್ ಮಣ್ಣಿನಲ್ಲಿ ಬಳಸಲಾಗುತ್ತದೆ. ಬೀಜದ ಎಣ್ಣೆಯನ್ನು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.

ವಿವರಣೆ

. 5-18 ಮೀ ಎತ್ತರವಿರುವ, ನಿತ್ಯಹರಿದ್ವರ್ಣ ಮರ. ಎಲೆಗಳು ಸರಳವಾಗಿರುತ್ತವೆ, ಹೆಚ್ಚಾಗಿ 3 ರ ಸುರುಳಿಗಳಲ್ಲಿ ಇರುತ್ತವೆ, ಆಯತಾಕಾರದಿಂದ ಈಟಿ ಆಕಾರದಲ್ಲಿರುತ್ತವೆ, ರೋಮರಹಿತವಾಗಿದ್ದು, ಚರ್ಮದಂತಿರುತ್ತವೆ, ಬುಡ ಚೂಪಾಗಿರುತ್ತದೆ, ಚೂಪಾದ ತುದಿಯಿಂದ ಮೊಂಡು ಅಥವಾ ಗುಂಡಾದ ತುದಿಯಿದ್ದು ಮಧ್ಯದಲ್ಲಿ ತಗ್ಗಿರುತ್ತದೆ, ಅಡ್ಡಾದಿಡ್ಡಿ ಮುಳ್ಳುಗಳುಳ್ಳ ದಂತಿತವಾದ ಅಂಚು ಅಥವಾ ಸಂಪೂರ್ಣವಾದ ಅಂಚಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿ ಜೋತಾಡುವ ಲೋಲಕದಂತಹ ರೇಸಮ್. ಹಣ್ಣು ಗೋಳಾಕಾರದ ಒಂದು ಕೋಶಕ.ಸಾಮಾನ್ಯವಾಗಿ ಹೊರಗೆ ಗಟ್ಟಿಯಾದ ಸಿಪ್ಪೆಯಿಂದ ಮುಚ್ಚಲ್ಪಟ್ಟ, ಒಳಗೆ ತಿನ್ನುವಂತಹ ತಿರುಳಿರುವ,ಒಂದು ನಯವಾದ ಬೀಜವಿರುತ್ತದೆ.