ಅಲ್ಬಿಜಿಯಾ ಒಡೊರಾಟಿಸ್ಸಿಮಾ (ಎಲ್.ಎಫ್.) ಬೆಂತ್.

ಕನ್ನಡದ ಹೆಸರು : ಕಾಡು ಬಾಗ, ಬಿಲ್ವರ
ಸಾಮಾನ್ಯ ಹೆಸರು : ಬ್ಲ್ಯಾಕ್ ಸಿರಿಸ್,ಕಪ್ಪು ಸಿರಿಸ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಅಲ್ಬಿಜಿಯಾ ಒಡೊರಾಟಿಸ್ಸಿಮಾ (ಎಲ್.ಎಫ್.) ಬೆಂತ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ - ಜೂನ್
ಹಣ್ಣಾಗುವ ಅವಧಿ: ಆಗಸ್ಟ್ - ಅಕ್ಟೋಬರ್
ಮೂಲ: ಭಾರತದ ಉಪಖಂಡ

ಉಪಯೋಗಗಳು

sಹುಣ್ಣು, ಕುಷ್ಠರೋಗ, ಚರ್ಮ ರೋಗಗಳು, ಕೆಮ್ಮು, ಬ್ರಾಂಕೈಟಿಸ್, ಮಧುಮೇಹ ಮತ್ತು ಉರಿಯುವಂತಹ ಸಮಸ್ಯೆಗಳಿಗೆ ಮರದ ತೊಗಟೆ ಉಪಯುಕ್ತವಾಗಿದೆ. ಪ್ರೀಮಿಯಂ ಗುಣಮಟ್ಟದ ಈ ಮರ ಪ್ಯಾನೆಲಿಂಗ್ ಮತ್ತು ಪೀಠೋಪಕರಣಗಳಿಗೆ ಸೂಕ್ತವಾಗಿದೆ. ಇದನ್ನು ಬಂಡಿಗಳು, ಚಕ್ರಗಳು, ಕೃಷಿ ಉಪಕರಣಗಳು ಮತ್ತು ಮರದ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ. ಕೇವಲ ಚಹಾ ಏಕಬೆಳೆಯಾಗಿದ್ದಾಗ ಈ ಮರದ ಉಪಸ್ಥಿತಿ ಚಹಾಕ್ಕೆ ಕೀಟಗಳು ತಾಗುವುದನ್ನು ಕಡಿಮೆ ಮಾಡುತ್ತದೆ, ವಿಶೇಷವಾಗಿ ಕೆಂಪು ಜೇಡ ಹುಳಗಳು(ಸ್ಪೈಡರ್ ಮೈಟ್ಸ್) ಮತ್ತು ಸ್ಕಾರ್ಲೆಟ್ ಮೈಟ್ಸ್ ಗಳಿಂದ ಕಾಪಾಡುತ್ತದೆ.

ವಿವರಣೆ

.ಮಧ್ಯಮ ಗಾತ್ರದ ಮರ, 22-40ಮೀ ಎತ್ತರ. ಎಲೆಗಳು ಕಡು ಹಸಿರು ಬಣ್ಣದಲ್ಲಿರುತ್ತವೆ, ಡಬಲ್ ಕಾಂಪೌಂಡ್,ಆಲ್ಟರ್ನೇಟ್, ಕಾವಿನೆಲೆಗಳಾಗಿರುತ್ತವೆ; ವೃಂತಪರ್ಣಮುಕ್ತ, ಲ್ಯಾಟೆರಲ್,ಉದುರಿಹೋಗುವಂತಹವು. ಪುಷ್ಪ ಮಂಜರಿ ತುದಿಯಲ್ಲಿ ರೋಮದಿಂದ ಕೂಡಿದ ಹೂಗುಚ್ಚಗಳ ಜೊಂಪೆಯಾಗಿರುತ್ತದೆ. ತಲಾ 10-15 ಹೂವುಗಳಂತೆ ಡೈಮಾರ್ಫಿಕ್ (ದ್ವಿರೂಪ) ಆದ ಹೂಗಳಿರುತ್ತವೆ, ಅವು ತಿಳಿ ಹಳದಿ ಮಿಶ್ರಿತ ಬಿಳಿ ಬಣ್ಣ ಹೊಂದಿದ್ದು ಪರಿಮಳಯುಕ್ತವಾಗಿರುತ್ತವೆ. ಬೀಜಕೋಶಗಳು ತೆಳ್ಳಗೆ, ಚಪ್ಪಟೆಯಾಗಿರುತ್ತವೆ, ತೊಗಲಿನಂತಿರುವ,ಅವು ಮಾಗಿದಾಗ ಕಂದು ಬಣ್ಣದಲ್ಲಿರುತ್ತವೆ, ಅವು 8-14 ಬೀಜಗಳನ್ನು ಹೊಂದಿರುತ್ತವೆ. ಬೀಜಗಳು ಅಂಡಾಕಾರದಲ್ಲಿರುತ್ತವೆ.