ಕನ್ನಡದ ಹೆಸರು : | ಇಪ್ಪೆ, ಕಾಡಿಪ್ಪೆ, ಹುನಗೆ |
ಸಾಮಾನ್ಯ ಹೆಸರು : | ಮಹುವ, ಬಟರ್ ಟ್ರೀ |
ಕುಟುಂಬದ ಹೆಸರು : | ಸಪೋಟೇಸಿ |
ವೈಜ್ಞಾನಿಕ ಹೆಸರು : | ಮಧುಕಾ ಲಾಂಗಿಫೋಲಿಯಾ (ಎಲ್.) ಜೆ.ಎಫ್.ಮ್ಯಾಕ್ಬ್ರ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಏಪ್ರಿಲ್ |
ಹಣ್ಣಾಗುವ ಅವಧಿ: | ಜೂನ್ - ಆಗಸ್ಟ್ |
ಮೂಲ: | ಭಾರತ |
ಹೂವುಗಳನ್ನು ಜಂತುಹುಳು ನಿವಾರಕ (ಆಂಥೆಲ್ಮಿಂಟಿಕ್), ಕೂಲಿಂಗ್, ಮಾರ್ದವಕ (ಡಿಮಲ್ಸೆಂಟ್), ವಿರೇಚಕ ಮತ್ತು ಕಲ್ಪ (ಟಾನಿಕ್) ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಕೆಮ್ಮು, ಶೀತ ಮತ್ತು ಬ್ರಾಂಕೈಟಿಸ್ ಚಿಕಿತ್ಸೆಯಲ್ಲಿ ಮತ್ತು ಹಾವಿನ ಕಡಿತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ತೊಗಟೆ ಸ್ರಾವ ನಿರೋಧಕ ( ಆಸ್ಟಿಂಜೆಂಟ್) ಮತ್ತು ಮಾರ್ದವಕ(ಎಮೋಲಿಯೆಂಟ್) ಆಗಿರುತ್ತದೆ. ಇದನ್ನು ಕುಷ್ಠರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ತೊಗಟೆಯನ್ನು ದೇಹದ ಹೊರ ಭಾಗದಲ್ಲಿ ಚರ್ಮದ ತುರಿಕೆ ಮತ್ತು ಒಸಡುಗಳ ರಕ್ತಸ್ರಾವದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ..
18 ಮೀಟರ್ ಎತ್ತರ, ಹೆಚ್ಚು ಕವಲುಗಳಿರುವ ಮಧ್ಯಮದಿಂದ ದೊಡ್ಡ ಗಾತ್ರದ, ಪತನಶೀಲ ಮರ. ಸಸ್ಯರಸ ಬಿಳಿಯಾಗಿರುತ್ತದೆ. ಎಳೆಯ ಮರಗಳು ದಟ್ಟವಾದ ಮೃದು ತುಪ್ಪಳದಿಂದ ಕೂಡಿರುತ್ತವೆ. ಎಲೆಗಳು ಸಾಮಾನ್ಯವಾಗಿ ಕೊಂಬೆಗಳ ಕೊನೆಯಲ್ಲಿ ಗುಂಪಾಗಿರುತ್ತವೆ, ಎಲೆಗಳು ಸರಳ, ಆಲ್ಟರ್ನೇಟ್ , ಸ್ವಲ್ಪ ಒಬ್ಲಾಂಗ್ , ಎಲಿಪ್ಟಿಕ್,ಶೂಲಶಿರ ಅಥವಾ ಬುಗುರಿಯಂತಿದ್ದು, ರೋಮರಹಿತವಾಗಿರುತ್ತವೆ, ಬೆಣೆಯಾಕಾರದ ಬುಡ , ದುಂಡಾಗಿದ್ದು ತುದಿಯಲ್ಲಿ ಚೂಪಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ಹೂ ಗುಚ್ಛ (ಫ್ಯಾಸಿಕಲ್). ಮೆತ್ತನೆಯ ತಿರುಳಿನ, ರಸಪೂರಿತ ಮುಕುಟದಳಗಳಿರುವ(ಕೊರೊಲ), ಕೆನೆ ಬಣ್ಣದ ಹೂವುಗಳು ಕೊಂಬೆಗಳ ಕೊನೆಯಲ್ಲಿ ಗುಂಪಾಗಿರುತ್ತವೆ, ಮೃದುತುಪ್ಪಳದಿಂದ ಕೂಡಿರುತ್ತವೆ. ಹಣ್ಣು, ಹಸಿರು ಬಣ್ಣದ , ಅಂಡಾಕಾರದ, ಮೃದು ತುಪ್ಪಳವಿರುವ (ಟೊಮೆಂಟಸ್),ತಿರುಳಿರುವಂತಹ ಒಂದು ಬೆರ್ರಿ. 1-4 ದೊಡ್ಡ ಗಾತ್ರದ ಅಂಡಾಕಾರದ, ಕುಗ್ಗಿರುವ ಬೀಜಗಳಿರುತ್ತವೆ.