ಕನ್ನಡದ ಹೆಸರು : | ಸಂಪಿಗೆ ಮರ |
ಸಾಮಾನ್ಯ ಹೆಸರು : | ಯೆಲ್ಲೊ ಜೇಡ್ ಆರ್ಕಿಡ್ ಟ್ರೀ |
ಕುಟುಂಬದ ಹೆಸರು : | ಮ್ಯಾಗ್ನೋಲಿಯೇಸಿ |
ವೈಜ್ಞಾನಿಕ ಹೆಸರು : | ಮ್ಯಾಗ್ನೋಲಿಯಾ ಚಂಪಕಾ (ಎಲ್.) ಬೈಲ್. ಎಕ್ಸ್ ಪಿಯರೆ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ಜೂನ್ - ಸೆಪ್ಟೆಂಬರ್ |
ಹಣ್ಣಾಗುವ ಅವಧಿ: | ಸೆಪ್ಟೆಂಬರ್ - ಅಕ್ಟೋಬರ್ |
ಮೂಲ: | ಇಂಡೋಮಲಯನ್ ದೇಶ |
.ತೊಗಟೆಯನ್ನು ಜ್ವರನಿವಾರಕವನ್ನಾಗಿ ಬಳಸಲಾಗುತ್ತದೆ. ತೊಗಟೆ ಮತ್ತು ಎಲೆಗಳ ಕಷಾಯವನ್ನು ಹೆರಿಗೆಯ ನಂತರ ನೀಡಲಾಗುತ್ತದೆ. ಕುಷ್ಠರೋಗದ ಚಿಕಿತ್ಸೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ. ಎಲೆಗಳನ್ನು ಉದರಶೂಲೆಯನ್ನು (ಕೋಲಿಕ್) ನೀಗಿಸುವ ಚಿಕಿತ್ಸೆಗೆ ಬಳಸಲಾಗುತ್ತದೆ. ತುಂಬಾ ಒಡೆದ ಚರ್ಮದ ಚಿಕಿತ್ಸೆಗೆ ಬೀಜಗಳನ್ನು ಬಳಸಲಾಗುತ್ತದೆ. ಹೂವುಗಳಿಂದ ಹಳದಿ ವರ್ಣದ್ರವ್ಯವನ್ನು (ಡೈ) ಪಡೆಯಲಾಗುತ್ತದೆ
30 ಮೀ ವರೆಗೆ ಎತ್ತರವಿರುವ, ಮಧ್ಯಮದಿಂದ ದೊಡ್ಡ ಗಾತ್ರದ, ನಿತ್ಯಹರಿದ್ವರ್ಣ ಮರ. ತೊಗಟೆ ಬೂದು ಬಣ್ಣದಲ್ಲಿರುತ್ತದೆ. ಹೊಳೆಯುವ ಕೆನೆಬಣ್ಣದೊಂದಿಗೆ ಜೊತೆಗೂಡಿದ ಕಿತ್ತಳೆ ಬಣ್ಣದ ಮಚ್ಚೆಗಳಿರುವ ಉಬ್ಬುತೂತುಗಳಿರುತ್ತವೆ. ದಟ್ಟವಾದ ಮೃದುತುಪ್ಪಳವಿರುವ ಎಳೆಯ ಚಿಗುರುಗಳು ಮಾಸಲಾಗಿರುತ್ತವೆ(ಟೊಮೆಂಟೋಸ್). ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿರುತ್ತವೆ, ಅಂಡಾಕಾರ – ಶೂಲಶಿರವುಳ್ಳವಾಗಿರುತ್ತವೆ (ಲ್ಯಾನ್ಸಿಲೇಟ್ ಆಗಿರುತ್ತವೆ), ರೋಮರಹಿತವಾಗಿದ್ದು,ಕಾಗದಂತಿರುತ್ತವೆ (ಚಾರ್ಟೇಸಿಯಸ್), ಬುಡ ಚೂಪು ಅಥವಾ ಕ್ರಮೇಣ ಕಿರಿದಾಗಿ ಚೂಪಾಗುತ್ತದೆ, ,ತುದಿ ಚೂಪಾಗಿದ್ದು, ಅಂಚು ಅಲೆಯಂತಿರುತ್ತದೆ. ಹೂವುಗಳು ಒಂದು ಅಥವಾ ಅಪರೂಪವಾಗಿ ಜೋಡಿಯಾಗಿ, ಅಕ್ಷಾಕಂಕುಳಿನಲ್ಲಿರುತ್ತವೆ, ಹಳದಿ ಬಣ್ಣದಲ್ಲಿರುವ ಈ ದ್ವಿಲಿಂಗಿ ಹೂವುಗಳು ಪರಿಮಳಭರಿತವಾಗಿರುತ್ತವೆ. ಹಣ್ಣು , 2-3 ಉದ್ದನೆಯ, ಗಂಟುಗಳಿರುವ, ಹಿಂಬಾಗದಲ್ಲಿ ಬಿರಿಯುವಂತಹ ಒಂದು ಕೋಶಕ. ಕಡುಗೆಂಪು ಬಣ್ಣದ 1 ಬೀಜವಿರುತ್ತದೆ.