ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಎಲ್.

ಕನ್ನಡದ ಹೆಸರು : ದೊಡ್ಡ ಬಿಳಿ ಸಂಪಿಗೆ
ಸಾಮಾನ್ಯ ಹೆಸರು : ಮ್ಯಾಗ್ನೋಲಿಯಾ
ಕುಟುಂಬದ ಹೆಸರು : ಮ್ಯಾಗ್ನೋಲಿಯೇಸಿ
ವೈಜ್ಞಾನಿಕ ಹೆಸರು : ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಆಗ್ನೇಯ ಅಮೇರಿಕಾ

ಉಪಯೋಗಗಳು

.ತೊಗಟೆ ಸ್ವೇದಜನಕ (ಡಯಾಫೊರೆಟಿಕ್), ಉತ್ತೇಜಕ, ಟಾನಿಕ್ ಆಗಿದೆ. ಮಲೇರಿಯಾ ಮತ್ತು ಸಂಧಿವಾತದ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಬೆವರುಸಾಲೆಯ ತುರಿಕೆಯ ಉಪಶಮನಕ್ಕೆ ಈ ಕಷಾಯವನ್ನು ತೊಳೆಯಲು ಮತ್ತು ಸ್ನಾನದಲ್ಲಿ ಬಳಸಲಾಗುತ್ತದೆ. ಕಷಾಯವನ್ನು ಹುಣ್ಣುಗಳನ್ನು ತೊಳೆಯಲು ಮತ್ತು ಜಲೋದರ ದ(ಡ್ರಾಪ್ಸಿ) ಚಿಕಿತ್ಸೆಯ ಉಗಿ ಸ್ನಾನದಲ್ಲಿ ಬಳಸಲಾಗುತ್ತದೆ.

ವಿವರಣೆ

.37 ಮೀ ನಷ್ಟು ಎತ್ತರವಿರುವ.ಮಧ್ಯಮದಿಂದ ದೊಡ್ಡ ಗಾತ್ರದ, ನಿತ್ಯಹರಿದ್ವರ್ಣ ಮರ. ತೊಗಟೆ ತೆಳು ಕಂದು ಬಣ್ಣದಿಂದ ಬೂದು ಬಣ್ಣದಲ್ಲಿರುತ್ತದೆ, ಬಿರುಕು ಬಿಟ್ಟಿರುತ್ತದೆ. ಎಳೆ ಚಿಗುರುಗಳು ಸ್ವಲ್ಪ ಸಮಯದವರೆಗೆ ದಟ್ಟವಾದ ಮೃದುತುಪ್ಪಳದಿಂದ ಆವೃತವಾಗಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ , ಆಯತಾಕಾರ-ಅಂಡಾಕಾರ, ಅಂಡಾಕಾರದಿಂದ- ಬುಗುರಿಯಾಕರದಲ್ಲಿರುತ್ತವೆ,ಮೇಲ್ಭಾಗ ಸ್ವಲ್ಪ ಮಟ್ಟಿಗೆ ಚರ್ಮದಂತಿದ್ದು, ರೋಮರಹಿತವಾಗಿರುತ್ತವೆ, ಕೆಳಗೆ ಸ್ವಲ್ಪ ಮಾಸಲು ಬಣ್ಣದಲ್ಲಿದ್ದು, ಕಂದು ಬಣ್ಣದ ಮೃದು ಕೂದಲಿನೊಂದಿಗೆ ಮುಚ್ಚಿರುತ್ತವೆ, ಬುಡ ಚೂಪು ಅಥವಾ ದುಂಡಾಗಿರುತ್ತದೆ, ಹರಿತವಾಗಿರದ ತುದಿ ಮೊಂಡು, ಅಕ್ಯೂಟ್ ನಿಂದ ಸೂಚೀಮುಖದ ತುದಿಯಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ದ್ವಿಲಿಂಗಿ, ಕೆನೆ-ಬಿಳಿ ಬಣ್ಣದ, ನಿಂಬೆ ಪರಿಮಳದ,ದ್ವಿಲಿಂಗಿ ಹೂವುಗಳು ಒಂಟಿಯಾಗಿ ತುದಿಯಲ್ಲಿರುತ್ತವೆ. ಹಣ್ಣು ಅಂಡಾಕಾರದ, ಕುಗ್ಗಿರುವ ಒಂದು ಕೋಶಕ. ಕುಗ್ಗಿರುವ 2 ಕೆಂಪು ಬೀಜಗಳಿರುತ್ತವೆ;ಕೆಂಪು ಬಣ್ಣದ ರಸಲೆ ಇರುತ್ತದೆ.