ಕನ್ನಡದ ಹೆಸರು : | ಕುಂಕುಮದ ಮರ, ಹುಲಿಚೆಂದು |
ಸಾಮಾನ್ಯ ಹೆಸರು : | ಕಮಲ ಟ್ರೀ, ಕುಂಕುಮ ಟ್ರೀ |
ಕುಟುಂಬದ ಹೆಸರು : | ಯುಫೋರ್ಬಿಯೇಸಿ |
ವೈಜ್ಞಾನಿಕ ಹೆಸರು : | ಮಲ್ಲೋಟಸ್ ಫಿಲಿಪೆನ್ಸಿಸ್ (ಲ್ಯಾಮ್.) Muell.Arg |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಏಪ್ರಿಲ್ |
ಹಣ್ಣಾಗುವ ಅವಧಿ: | ಜುಲೈ - ಆಗಸ್ಟ್ |
ಮೂಲ: | ದಕ್ಷಿಣ ಏಷ್ಯಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ |
.ಕಮಲದ ಪುಡಿಯನ್ನು ಜಂತುಹುಳು ನಿವಾರಕವಾಗಿ ಬಳಸಲಾಗುತ್ತದೆ. ಮರದ ಎಲ್ಲಾ ಭಾಗಗಳನ್ನು ಚರ್ಮದ ಮೇಲಾಗುವ ಪ್ಯಾರಸೈಟ್ ಸೋಂಕುಗಳ ಚಿಕಿತ್ಸೆಯಲ್ಲಿ ಚರ್ಮದ ಮೇಲೆ ಹಚ್ಚಲು ಬಳಸಬಹುದು. ಹಣ್ಣುಗಳನ್ನು ಪುಡಿ ಮಾಡಿ ಚರ್ಮದ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ
25 ಮೀ ವರೆಗೆ ಎತ್ತರವಿರುವ, ಸಣ್ಣ ಅಥವಾ ಮಧ್ಯಮ ಗಾತ್ರದ, ನಿತ್ಯಹರಿದ್ವರ್ಣ, ಭಿನ್ನಲಿಂಗಿ ಮರ. ಮರ ಬಿಳಿಯಾಗಿದ್ದು, ತೆಳುವಾದ ಗಾಢ ಬೂದುಬಣ್ಣದ ತೊಗಟೆ ಇರುತ್ತದೆ. ಕಿರುಕೊಂಬೆಗಳು, ಎಳೆಯ ಎಲೆಗಳು ಮತ್ತು ಹೂಗೊಂಚಲುಗಳು ಬೂಷ್ಟು ಹಿಡಿದಂತಿದ್ದು, ಮೃದುತುಪ್ಪಳದಿಂದ ಕೂಡಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ ಅಥವಾ ಸಬ್ ಆಪೋಸಿಟ್ , ಅಂಡಾಕಾರ ಅಥವಾ ಅಂಡಾಕಾರ-ಈಟಿ ಆಕಾರದಲ್ಲಿರುತ್ತವೆ(ಲ್ಯಾನ್ಸಿಲೇಟ್), ಮೇಲ್ಭಾಗ ರೋಮರಹಿತವಾಗಿರುತ್ತದೆ, ಬೂದುಬಣ್ಣದಿಂದ ನಸುಗೆಂಪು ಬಣ್ಣದ ದಟ್ಟವಾದ ಮೃದುತುಪ್ಪಳವಿದ್ದು, ಕೆಳಗೆ ಸಣ್ಣ ಕೆಂಪು ಗ್ರಂಥಿಗಳಿರುತ್ತವೆ, ಎಲೆಗಳು ಚರ್ಮದಂತಿರುತ್ತವೆ, ಬುಡ ಚೂಪು ಅಥವಾ ದುಂಡಾಗಿರುತ್ತದೆ, ತುದಿ ಕಿರಿದಾಗುತ್ತಾ ಮೊನಚಾಗುವ ಅಥವಾ ಚೂಪಾದ ತುದಿ ಇರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ ಅಥವಾ ಸ್ವಲ್ಪ ಗರಗಸದಂತಿರುತ್ತದೆ. ಪುಷ್ಪ ಮಂಜರಿ ತುದಿಯಲ್ಲಿ ಹೂತೆನೆಯ ಮಾದರಿಯಲ್ಲಿರುತ್ತದೆ ಅಥವಾ ಗುಂಪಾಗಿರುವ ಹೂಗೊಂಚಲಾಗಿರುತ್ತದೆ. ಹೂವುಗಳು ತುಕ್ಕು ಹಿಡಿದಂತಹ ಕೆಂಬಣ್ಣದಲ್ಲಿರುತ್ತವೆ. ಗಂಡು ಹೂವುಗಳು 4.5 ಮಿಮೀ ಅಗಲ; ಹೆಣ್ಣು ಹೂವುಗಳು 4 ಮಿ.ಮೀ ಅಗಲವಿರುತ್ತವೆ. ಹಣ್ಣು , 7-8 ಮಿಮೀ ಅಗಲದ, ಗೋಳಾಕಾರದ, 3-ಹಾಲೆಗಳಿರುವ, ಒತ್ತಾಗಿ ಕೆಂಪು-ಗ್ರಂಥಿಗಳಿರುವ, ಮೃದುತುಪ್ಪಳದಿಂದ ಆವೃತವಾದಂತಹ ಒಂದು ಬೀಜಕೋಶ (ಕ್ಯಾಪ್ಸುಲ್). 1-4, ಗೋಳಾಕಾರದ, ರೋಮರಹಿತವಾದ, ಕಪ್ಪು ಬೀಜಗಳಿರುತ್ತವೆ.