ಮಮ್ಮಿಯಾ ಸುರಿಗಾ (ಬುಚ್.-ಹ್ಯಾಮ್. ಎಕ್ಸ್ ರೋಕ್ಸ್ಬ್.) ಕೋಸ್ಟರ್ಮ್.

ಕನ್ನಡದ ಹೆಸರು : ಸುರಿಗೆ ಮರ
ಸಾಮಾನ್ಯ ಹೆಸರು : ಸುರಂಗಿ
ಕುಟುಂಬದ ಹೆಸರು : ಕ್ಯಾಲೋಫಿಲೇಸೀ
ವೈಜ್ಞಾನಿಕ ಹೆಸರು : ಮಮ್ಮಿಯಾ ಸುರಿಗಾ (ಬುಚ್.-ಹ್ಯಾಮ್. ಎಕ್ಸ್ ರೋಕ್ಸ್ಬ್.) ಕೋಸ್ಟರ್ಮ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ದಕ್ಷಿಣ ಭಾರತ

ಉಪಯೋಗಗಳು

ಜ್ವರ ಬಿಟ್ಟುಬಿಟ್ಟು ಬರುವ ಸಂದರ್ಭಗಳಲ್ಲಿ ಇದರ ತಾಜಾ ಅಥವಾ ಒಣ ಎಲೆಗಳ ಕಷಾಯವನ್ನು ನೀಡಲಾಗುತ್ತದೆ. ನಾಟಿ ಔಷಧ ಪದ್ಧತಿಯಲ್ಲಿ ಇದನ್ನು (ಮಾಮಿಯಾ) ನೆತ್ತಿಯ ಸೋಂಕುಗಳು, ಅತಿಸಾರ, ಪಚನದ ಸಮಸ್ಯೆ ಮತ್ತು ಕಣ್ಣಿನ ಸಮಸ್ಯೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಪುಡಿಮಾಡಿದ ಬೀಜಗಳನ್ನು ಪ್ಯಾರಸೈಟ್ ಗಳಿಂದ ಉಂಟಾಗುವ ಚರ್ಮ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ವಿವರಣೆ

10-18 ಮೀವರೆಗೆ ಎತ್ತರವಿರುವ, ಮಧ್ಯಮ ಗಾತ್ರದ, ನಿತ್ಯಹರಿದ್ವರ್ಣ ಮರಗಳು. ತೊಗಟೆ ಒರಟಾಗಿರುತ್ತದೆ, ಹೊರ ತೊಗಟೆ ಹಸಿರು ಬೂದು ಬಣ್ಣದಲ್ಲಿದ್ದು, ಒಳ ತೊಗಟೆ ಕೆಂಪು ಬಣ್ಣದಲ್ಲಿರುತ್ತದೆ, ರಾಳದಂತಹ ಅಥವಾ ಹಾಲಿನಂತಹ ಬಿಳಿಯಾದ ಸಸ್ಯಕ್ಷೀರ (ಲ್ಯಾಟೆಕ್ಸ್) ಇರುತ್ತದೆ. ಎಲೆಗಳು ಸರಳವಾಗಿರುತ್ತವೆ, ಆಪೊಸಿಟ್, ಕೆಲವೊಮ್ಮೆ ಆಲ್ಟರ್ನೇಟಾಗಿ ವರ್ತುಲವಾಗಿ ಸುತ್ತಿಕೊಂಡಿರುತ್ತವೆ, ಈಟಿ ಆಕಾರದಿಂದ (ಲ್ಯಾನ್ಸಿಲೇಟ್) - ಬುಗುರಿಯಾಕಾರದಿಂದ ಅಂಡಾಕಾರ-ಆಯತಾಕಾರದಲ್ಲಿರುತ್ತವೆ, ಕಡು ಹಸಿರು ಬಣ್ಣದಲ್ಲಿದ್ದು, ರೋಮರಹಿತವಾಗಿರುತ್ತವೆ, ಬುಡ ಮೊಂಡಾಗಿರುತ್ತದೆ, ಹರಿತವಾದ ತುದಿ ಕೊನೆಯಲ್ಲಿ ದುಂಡಾಗುತ್ತದೆ, ಮೊಂಡಿನಿಂದ ಕಚ್ಚುಳ್ಳದ್ದಾಗಿರುತ್ತದೆ. ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಸಂಯುಕ್ತ ಪುಷ್ಪದ ಗೊಂಚಲಾಗಿ ಅಥವಾ ಒಂಟಿಯಾಗಿರುತ್ತದೆ. ಹೂವುಗಳು ಪಾಲಿಗ್ಯಾಮಸ್ , ಏಕಲಿಂಗಿ, ಉಭಯಲಿಂಗಿಗಳಾಗಿರುತ್ತವೆ, ಬಿಳಿ ಅಥವಾ ಗುಲಾಬಿ ಬಣ್ಣದ ಹೂವುಗಳು ಸುವಾಸನೆಯಿಂದ ಕೂಡಿರುತ್ತವೆ. ಹಣ್ಣು ಅಂಡಾಕಾರ-ಗೋಳಾಕಾರದಲ್ಲಿರುವ , ರೋಮರಹಿತವಾದ, ದೃಢವಾಗಿ ನಿಲ್ಲುವಂತಹ, ತಿರುಳಿರುವ ರಸಭರಿತವಾದ, ಬಿರಿಯದ ಒಂದು ಬೆರ್ರಿ , 1 -4 ಬೀಜಗಳಿರುತ್ತವೆ.