| ಕನ್ನಡದ ಹೆಸರು : | - |
| ಸಾಮಾನ್ಯ ಹೆಸರು : | ಸೀಯಾರಾ ರಬ್ಬರ್ ಟ್ರೀ, ಕೆಸವ ಟ್ರೀ |
| ಕುಟುಂಬದ ಹೆಸರು : | ಯುಫೋರ್ಬಿಯೇಸಿ |
| ವೈಜ್ಞಾನಿಕ ಹೆಸರು : | ಮ್ಯಾನಿಹೋಟ್ ಕಾರ್ತಜೆನೆನ್ಸಿಸ್ (ಜಾಕ್.) ಮುಲ್.ಆರ್ಗ್. |
| ಪ್ರಭೇದದ ಪ್ರಕಾರ: | ವಿದೇಶೀಯ |
| ಪ್ರಕೃತಿ ಶಾಸ್ತ್ರ : | ಪತನಶೀಲ |
| ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
| ಹೂಬಿಡುವ ಅವಧಿ: | ಜೂನ್ - ಸೆಪ್ಟೆಂಬರ್ |
| ಹಣ್ಣಾಗುವ ಅವಧಿ: | ಅಕ್ಟೋಬರ್ - ಜನವರಿ |
| ಮೂಲ: | ಬ್ರೆಜಿಲ್ |
.ಚರ್ಮದ ಸೋಂಕುಗಳನ್ನು ನಿವಾರಿಸುವ ಮದ್ದಿನಲ್ಲಿ ಕಾಂಡ ಮತ್ತು ಬೇರುಗಳ ಅಂಶಗಳು ಸೇರಿರುತ್ತವೆ.
.6-8 ಮೀ ಎತ್ತರವಿರುವ, ಸಣ್ಣ, ಪತನಶೀಲ ಮರ. ತೊಗಟೆ ಗುಲಾಬಿ-ಬೂದು ಬಣ್ಣದಿಂದ ಗಾಢ ಕಂದು.ಬಣ್ಣದಲ್ಲಿರುತ್ತದೆ. ಎಲೆಗಳು ಗುರಾಣಿಯಾಕಾರದಲ್ಲಿರುತ್ತವೆ(ಪೆಲ್ಟೇಟ್) ಆಗಿರುತ್ತವೆ; 3 ಅಥವಾ 5 ಹಾಲೆಗಳಿರುತ್ತವೆ, ಒಟ್ಟಾರೆಯಾಗಿ ಹಾಲೆಗಳು ಅಂಡಾಕಾರದಿಂದ ಬುಗುರಿಯಾಕಾರದಲ್ಲಿದ್ದು, ರೋಮರಹಿತವಾಗಿರುತ್ತವೆ, ಕಿರಿದಾದ ಬುಡ ,ತುಂಬಾ ಸ್ವಲ್ಪ ಅಥವಾ ತುಂಬಾ ಚೂಪಾದ ತುದಿಯಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ, ಮೇಲೆ ಕಡು ಹಸಿರು, ಕೆಳಗೆ ತೆಳು ನೀಲಿ ಹಸಿರು ಬಣ್ಣವಿರುತ್ತದೆ. ಪುಷ್ಪಮಂಜರಿ ಒಂದು ಒತ್ತಾಗಿಲ್ಲದ ಹೂಗೊಂಚಲು. ಕೆಂಪು ಚಾಪಗಳಿರುವ ಹಸಿರು-ಬಿಳಿ, ಕೆನ್ನೀಲಿಯ ಅಥವಾ ತಿಳಿ ಹಳದಿಯ ಚಾಯೆಯಿರುವ ಹೂವುಗಳು ಏಕಲಿಂಗಿಗಳಾಗಿರುತ್ತವೆ. ಹಣ್ಣು ಒಂದು ಕ್ಯಾಪ್ಸುಲ್, ಗೋಳಾಕಾರದ, ನಯವಾದ,ಒಂದು ಬೀಜಕೋಶ. ಒಣಗಿದಾಗ ಗಂಟುಗಳಿರುತ್ತವೆ(ವಾರ್ಟಿ)., ಕಿತ್ತಳೆ –ಕಂದು ಬಣ್ಣದ, ಕಪ್ಪು ಮಚ್ಚೆಯುಳ್ಳ ಬೈಕಾನ್ವೆಕ್ಸ್ ಬೀಜಗಳಿರುತ್ತವೆ; ಹಳದಿ ಬಣ್ಣದ ದೊಗಲು ಜುಟ್ಟಿರುತ್ತದೆ ( ಕಾರಂಕಲ್).