ಮಣಿಲ್ಕರ ಜಪೋಟ (ಎಲ್) ಪಿ.ರೊಯನ್

ಕನ್ನಡದ ಹೆಸರು : ಸಪೋಟ
ಸಾಮಾನ್ಯ ಹೆಸರು : ಸಪೋಟ, ಚಿಕೂ ಟ್ರೀ
ಕುಟುಂಬದ ಹೆಸರು : ಸಪೋಟೇಸಿ
ವೈಜ್ಞಾನಿಕ ಹೆಸರು : ಮಣಿಲ್ಕರ ಜಪೋಟ (ಎಲ್) ಪಿ.ರೊಯನ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಆಗಸ್ಟ್ - ಅಕ್ಟೋಬರ್
ಹಣ್ಣಾಗುವ ಅವಧಿ: ಜನವರಿ
ಮೂಲ: ಮೆಕ್ಸಿಕೋ, ಮಧ್ಯ ಅಮೇರಿಕಾ, ಕೆರಿಬಿಯನ್

ಉಪಯೋಗಗಳು

. ಜ್ವರ, ರಕ್ತಸ್ರಾವ, ಗಾಯಗಳು ಮತ್ತು ಹುಣ್ಣುಗಳಿಗೆ ಎಲೆಯ ಕಷಾಯವನ್ನು ತೆಗೆದುಕೊಳ್ಳಲಾಗುತ್ತದೆ. ತೊಗಟೆಯು ಸ್ರಾವ ನಿರೋಧಕ, ಜ್ವರನಿವಾರಕ ಮತ್ತು ಟಾನಿಕ್ ಆಗಿದೆ. ಅಜೀರ್ಣ ಮತ್ತು ಅತಿಸಾರದ ಪರಿಹಾರಕ್ಕೆ ಹಣ್ಣನ್ನು ಸೇವಿಸಲಾಗುತ್ತದೆ. ಬೀಜಗಳಲ್ಲಿ ಜ್ಬರ ನಿವಾರಿಸುವ ಗುಣವಿದೆ ಮತ್ತು ನೀರು ಹಾಕಿ ಅರೆದು ಸೇವಿಸಿದಾಗ ಅವು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ. ಮೂತ್ರ ಮತ್ತು ಪಿತ್ತಕೋಶದ ಕಲ್ಲುಗಳನ್ನು ಹೊರಹಾಕಲು ಅವುಗಳನ್ನು ಬಳಸಲಾಗುತ್ತದೆ. ಬೇರುಗಳನ್ನು ಪುಡಿಮಾಡಿ ತಯಾರಿಸಿದ ಚೂರ್ಣವನ್ನು ಶಿಶುಗಳಲ್ಲಿ ಬಾಯಲ್ಲೂ ಗಂಟಲಲ್ಲೂ ದಂದೆಗಳೇಳುವ (ಥ್ರಷ್) ರೋಗದ ಚಿಕಿತ್ಸೆಗೆ ಬಳಸಲಾಗುತ್ತದೆ.

ವಿವರಣೆ

30 ಮೀ ನಷ್ಟು ಎತ್ತರವಿರುವ, ಮಧ್ಯಮದಿಂದ ದೊಡ್ಡ ಗಾತ್ರದ, ಪತನಶೀಲ ಮರ. ತೊಗಟೆ ತಿಳಿ ಬೂದು ಬಣ್ಣದಿಂದ ಕಡು ಕಂದು ಬಣ್ಣದಲ್ಲಿರುತ್ತದೆ, ಬಿರುಕು ಬಿಟ್ಟಿರುತ್ತದೆ, ಒಳ ತೊಗಟೆ ಗುಲಾಬಿ ಬಣ್ಣದಲ್ಲಿರುತ್ತದೆ, ಅಂಟಿನಂತಹ ಸಸ್ಯಕ್ಷೀರ (ಲ್ಯಾಟೆಕ್ಸ್) ಇರುತ್ತದೆ. ಎಲೆಗಳು ಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ, ಸರಳ,ಆಲ್ಟರ್ನೇಟ್, ಅಂಡಾಕಾರ ಅಥವಾ ಆಯತಾಕಾರದ-ಅಂಡಾಕಾರದಲ್ಲಿರುತ್ತವೆ, ಸ್ವಲ್ಪ ಚರ್ಮದಂತಿದ್ದು , ರೋಮರಹಿತವಾಗಿರುತ್ತವೆ, ನಡುದಿಂಡಿನ(ಮಿಡ್ ರಿಬ್) ಉದ್ದಕ್ಕೂ ಕಂದು-ಬಣ್ಣದ ಒತ್ತಾದ ಮೃದು ತುಪ್ಪಳವಿರುತ್ತದೆ, ಬುಡ ಬೆಣೆಯಾಕಾರದಲ್ಲಿದ್ದು, ತುದಿ ಚೂಪಾಗಿರುತ್ತದೆ, ಅಂಚು ಅಲೆಯಾಕಾರದಲ್ಲಿರುತ್ತದೆ. ಒಂಟಿ ಹೂವಿನ ಪುಷ್ಪಮಂಜರಿ. ದ್ವಿಲಿಂಗಿ ಹೂವುಗಳು, ಬಿಳಿ ಅಥವಾ ತಿಳಿ ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು, ದುಂಡನೆಯ ಅಥವಾ ಅಂಡಾಕಾರದ, ಒಂದು ಬೆರ್ರಿ. ತಿರುಳಿರುವ,ಒರಟಾದ ತುಕ್ಕಿನಂತಹ ಕಂದು ಬಣ್ಣವಿರುವ, ಈ ಹಣ್ಣು , ಮಾಗಿದಾಗ ಸಿಹಿ ಪರಿಮಳವನ್ನು ಹೊಂದಿರುತ್ತದೆ. ಬೀಜಗಳು 5-12, ಬುಗುರಿಯಾಕಾರದ, ಹೊಳೆಯುವ ಕಪ್ಪು ಬಣ್ಣದ 5–12 ಬೀಜಗಳಿರುತ್ತವೆ.