ಮಾರ್ಖಮಿಯಾ ಲೂಟಿಯಾ (ಬೆಂತ್.) ಕೆ.ಶುಮ್

ಕನ್ನಡದ ಹೆಸರು : ಕುಂಕುಮ
ಸಾಮಾನ್ಯ ಹೆಸರು : ನೈಲ್ ಟ್ರಂಪೆಟ್
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಮಾರ್ಖಮಿಯಾ ಲೂಟಿಯಾ (ಬೆಂತ್.) ಕೆ.ಶುಮ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಪೂರ್ವ ಆಫ್ರಿಕಾ

ಉಪಯೋಗಗಳು

ಮರದಿಂದ ಚರ್ಮ-ಬಾಧೆಗಳು, ಹುಣ್ಣುಗಳು ಮತ್ತು ತುರಿಕೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಸಾಧ್ಯ ಎಂದು ಹೇಳಲಾಗುತ್ತದೆ. ಈ ಸಸ್ಯವನ್ನು ಕಾಯಕಲ್ಪ ಮಾಡಲು ಮತ್ತು ಮೂತ್ರವರ್ಧಕವಾಗಿ ಬಳಸಲಾಗುತ್ತದೆ, ಮತ್ತು ಕಾಲುಗಳ ಊತ (ಎಡಿಮಾ) ಮತ್ತು ವೃಷಣ ಕೋಶದ ಆನೆಕಾಲುರೋಗ (ಸ್ಕ್ರೋಟಮ್ನ ಎಲಿಫಾಂಟಿಯಾಸಿಸ್) ದ ಚಿಕಿತ್ಸೆಗೆ ಬಳಸಲಾಗುತ್ತದೆ. ಎಲೆ ಮತ್ತು ತೊಗಟೆಯನ್ನು ಹಲ್ಲುನೋವು ಮತ್ತು ಮಕ್ಕಳಲ್ಲಿ ಉಂಟಾಗುವ ಸೆಳೆತದ ಸಮಸ್ಯೆಗೆ ಔಷಧಿಯಾಗಿ ಬಳಸಲಾಗುತ್ತದೆ. ಬೇರುಗಳನ್ನು ಲೈಂಗಿಕವಾಗಿ ಹರಡುವ ರೋಗಗಳ ಚಿಕಿತ್ಸೆಗೆ ಮತ್ತು ಗರ್ಭಪಾತವನ್ನು ತಡೆಗಟ್ಟಲು ಬಳಸಲಾಗುತ್ತದೆ.

ವಿವರಣೆ

15-21 ಮೀ ಎತ್ತರವಿರುವ, ನಿತ್ಯಹರಿದ್ವರ್ಣ ಮರ. ಕೆಲವೊಮ್ಮೆ ಪೊದೆಗಳು, 1.2-4.5 ಮೀ ಎತ್ತರವಿರುತ್ತವೆ.ಏಣುಗೆರೆಗಳಿರುವ ಕಂದು ಬಣ್ಣದ ತೊಗಟೆ, ನಯವಾಗಿರುತ್ತದೆ ಅಥವಾ ಒರಟಾಗಿರುತ್ತದೆ. ಗರಿಯರೀತಿಯ(ಪಿನ್ನೇಟ್) ಎಲೆಗಳಿರುತ್ತವೆ; 7 – 13 ಚಿಗುರೆಲೆಗಳಿರುತ್ತವೆ, ಅಂಡಾಕಾರದಿಂದ ಬುಗುರಿಯಾಕಾರದಲ್ಲಿದ್ದು, ಮೇಲೆ ರೋಮರಹಿತವಾಗಿರುತ್ತವೆ.ಆದರೆ ಮೇಲೆ ಶಲ್ಕಗಳು ಒತ್ತಾಗಿರುತ್ತವೆ , ಕೆಳಗೆ ವಿರಳವಾಗಿರುತ್ತವೆ, ಸಾಮಾನ್ಯವಾಗಿ ಕೆಳಭಾಗದಲ್ಲಿ ಅಕ್ಷಾಕಂಕುಳಿನಲ್ಲಿ ಮೃದು ತುಪ್ಪಳದ ಡೊಮೇಟಿಯಾಗಳಿರುತ್ತವೆ, ಬುಡ ಬೆಣೆಯಾಕಾರದಿಂದ ದುಂಡಾಗಿರುತ್ತದೆ, ತುದಿ ಚೂಪಾಗಿರುತ್ತದೆ, ಅಂಚು ಅಲೆಯಂತಿರುತ್ತದೆ. ಪುಷ್ಪಮಂಜರಿ ಒಂದು ತುದಿಯಲ್ಲಿನ ಹೂಗೊಂಚಲು (ಪ್ಯಾನಿಕಲ್).ಕಂಠದ ಭಾಗದಲ್ಲಿ ಕೆಂಪು ಸಿರೆ ಅಥವಾ ಚುಕ್ಕೆಗಳಿರುವ ಹಳದಿ ಬಣ್ಣದ ಹೂವುಗಳು, ಉಭಯಲಿಂಗಿಗಳಾಗಿದ್ದು, ಕಹಳೆ ಆಕಾರದಲ್ಲಿರುತ್ತವೆ. ಹಣ್ಣು 35-80 ಸೆಂ.ಮೀ ಉದ್ದವಾಗಿರುವ, ಕುಗ್ಗಿದ, ರೋಮರಹಿತವಾಗಿರುವ ಒಂದು ಬೀಜಕೋಶ. ಆದರೆ ಶಲ್ಕ (ಲೆಪಿಡೊಟ್) ಗಳಿರುತ್ತವೆ. ಹಲವಾರು ರೆಕ್ಕೆಯುಳ್ಳ ಬೀಜಗಳಿರುತ್ತವೆ.