ಕನ್ನಡದ ಹೆಸರು : | ಬೇವು |
ಸಾಮಾನ್ಯ ಹೆಸರು : | ಚೈನಾಬೆರಿಟ್ರೀ |
ಕುಟುಂಬದ ಹೆಸರು : | ಮೆಲಿಯೇಸಿ |
ವೈಜ್ಞಾನಿಕ ಹೆಸರು : | ಮೆಲಿಯಾ ಅಜೆಡಾರಾಚ್ ಎಲ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಮೇ ಮತ್ತು ನವೆಂಬರ್ - ಡಿಸೆಂಬರ್ |
ಹಣ್ಣಾಗುವ ಅವಧಿ: | |
ಮೂಲ: | ಇಂಡೋಮಲಯನ್ ಪ್ರದೇಶ |
.ಎಲೆಯ ರಸ ಜಂತುನಿವಾರಕ (ಆಂಥೆಲ್ಮಿಂಟಿಕ್), ಆಶ್ಮರಿನಾಶಕ ( ಆಂಟಿಲಿಥಿಕ್), ಮೂತ್ರವರ್ಧಕ ಹಾಗೂ ಆರ್ತವ ಜನನ (ಎಮ್ಮೆನಾಗೋಗ್) ಆಗಿದೆ. ನರಶೂಲೆ ಮತ್ತು ನರಗಳ ತಲೆನೋವಿನ ಚಿಕಿತ್ಸೆಯಲ್ಲಿ ಹೂವು ಮತ್ತು ಎಲೆಗಳನ್ನು ಪೌಲ್ಟೀಸ್ ರೀತಿಯಲ್ಲಿ ಹಾಕಲಾಗುತ್ತದೆ. ಕಾಂಡದ ತೊಗಟೆಯ ಜಂತುನಿರೋಧಕ , ಸ್ರಾವನಿರೋಧಕ ಮತ್ತು ಕಹಿಯಾದ ಟಾನಿಕ್ ಆಗಿದೆ. ತೊಗಟೆಯಿಂದ ಕೆಂಪು ವರ್ಣದ್ರವ್ಯವನ್ನು (ಡೈ) ಪಡೆಯಲಾಗುತ್ತದೆ. ತೊಗಟೆಯಿಂದ ಪಡೆದ ನಾರನ್ನು ಅನ್ನು ಹಗ್ಗ ಮಾಡಲು ಬಳಸಲಾಗುತ್ತದೆ. ಚಿಗಟ ಪುಡಿ ಮತ್ತು ಕೀಟನಾಶಕಗಳ ಮೂಲ ವಸ್ತು ಈ ಹಣ್ಣುಗಳು.
15 ಮೀ ನಷ್ಟು ಎತ್ತರವಿರುವ, ಮಧ್ಯಮ ಗಾತ್ರದ, ಪತನಶೀಲ ಮರ. ಗಾಢ ಬೂದು-ಕಂದು ಬಣ್ಣದ, ನಯವಾದ, ತೊಗಟೆ, ಉದ್ದವಾಗಿ ಪದರ ಸುಲಿಯುತ್ತದೆ.ಎಲೆಗಳು ಬೈಪಿನೇಟ್, ಅಪರೂಪವಾಗಿ ಟ್ರಿಪಿನೇಟ್, ಆಲ್ಟರ್ನೇಟ್ ಆಗಿರುತ್ತವೆ; 5-9 ಪಿನ್ನಾಗಳು, ಆಪೋಸಿಟ್ ಆಗಿರುತ್ತವೆ; ಆಪೋಸಿಟ್ ಆಗಿ 3-7 ಚಿಗುರೆಲೆಗಳಿರುತ್ತವೆ, ತುದಿಯ ಎಲೆ ಸ್ವಲ್ಪ ದೊಡ್ಡದಾಗಿರುತ್ತದೆ, ಅಂಡಾಕಾರ, ಅಂಡಾಕಾರ ಅಥವಾ ಲ್ಯಾನ್ಸಿಲೇಟ್ ಆಗಿರುತ್ತವೆ, ಒತ್ತಾಗಿಲ್ಲದ ಮೃದು ತುಪ್ಪಳವಿರುತ್ತದೆ, ರೋಮರಹಿತವಾಗಿರುತ್ತವೆ, ಬುಡ ಓರೆಯಾಗಿದ್ದು, ತುದಿ ಚೂಪಾಗಿರುತ್ತದೆ, ಅಂಚು ಗರಗಸದಂತಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಒಂದು ಹೂ ಗೊಂಚಲು (ಪ್ಯಾನಿಕಲ್). ಸಣ್ಣ ಗಾತ್ರದ, ನೀಲಕ ಬಣ್ಣದ ದ್ವಿಲಿಂಗಿ ಹೂವುಗಳು, ಪರಿಮಳಭರಿತವಾಗಿರುತ್ತವೆ. ಹಣ್ಣು ಒಂದು ಡ್ರೂಪ್, ಅಂಡಾಕಾರ ಅಥವಾ ಗೋಳಾಕಾರದ, ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುವ, ಒಂದು ಗೊರಟೆ ಹಣ್ಣು (ಡ್ರೂಪ್) 3-6 ಬೀಜಗಳಿರುತ್ತವೆ; ಎಂಡೊಕಾರ್ಪ್ ಕಾಷ್ಠಮಯವಾಗಿರುತ್ತದೆ.