ಮೆಲಿಯ ಡುಬಿಯ ಕವ್.

ಕನ್ನಡದ ಹೆಸರು : ಹೆಬ್ಬೇವು, ತುರುಕುಬೇವು, ಬೆಟ್ಟಬೇವು
ಸಾಮಾನ್ಯ ಹೆಸರು : ಮಲಬಾರ್ ನೀಮ್
ಕುಟುಂಬದ ಹೆಸರು : ಮೆಲಿಯೇಸಿ
ವೈಜ್ಞಾನಿಕ ಹೆಸರು : ಮೆಲಿಯ ಡುಬಿಯ ಕವ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜನವರಿ - ಮಾರ್ಚ್
ಹಣ್ಣಾಗುವ ಅವಧಿ: ಫೆಬ್ರವರಿ - ಮೇ
ಮೂಲ: ದಕ್ಷಿಣ ಭಾರತ

ಉಪಯೋಗಗಳು

ತೊಗಟೆಯನ್ನು ಜೀರಿಗೆಯೊಂದಿಗೆ ಅರೆದು ಮಾಡಿದ ಮಿಶ್ರಣವನ್ನು ಜ್ವರವನ್ನು ಗುಣಪಡಿಸಲು ನೀಡಲಾಗುತ್ತದೆ. ಕಾಫಿ ಎಸ್ಟೇಟ್‌ಗಳಲ್ಲಿ ನೆರಳಿಗಾಗಿ ಈ ಮರವಾಗಿ ನೆಡಲಾಗುತ್ತದೆ. ಹಸಿರು ಹಣ್ಣುಗಳಿಂದ ತಯಾರಿಸಿದ ಮಿಶ್ರಣವನ್ನು ತುರಿಕೆ ಮತ್ತು ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ

ವಿವರಣೆ

20 ಮೀ ನಷ್ಟು ಎತ್ತರವಿರುವ ದೊಡ್ಡ ಪತನಶೀಲ ಮರಗಳು.ಗಾಢ ಕಂದು ಬಣ್ಣದ ತೊಗಟೆ, ಒರಟಾಗಿರುತ್ತದೆ, ಉಬ್ಬುತೂತುಗಳಿದ್ದು (ಲೆಂಟಿಸೆಲ್ಲೇಟ್), ಸುಲಿದಾಗ ತೊಗಟೆಯ ತುಂಡುಗಳು ಆಯತಾಕಾರದಲ್ಲಿರುತ್ತವೆ. ಎಳೆಯ ಚಿಗುರುಗಳು ಮತ್ತು ಪುಷ್ಪಮಂಜರಿಗಳು ಪೊರೆಯುಳ್ಳ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ. ಎಲೆಗಳು 2-3 ಪಿನ್ನೇಟ್ ಆಗಿರುತ್ತವೆ, ಇಂಪಾರಿಪಿನ್ನೇಟ್ ಆಗಿರುತ್ತವೆ, ಬುಡದಲ್ಲಿ ಊದಿಕೊಂಡಿರುತ್ತವೆ, ಎಳೆಯದಾಗಿದ್ದಾಗ ಉಣ್ಣೆಯಂತಹ ದಟ್ಟವಾದ ಮೃದು ತುಪ್ಪಳವಿರುತ್ತದೆ; 3-7 ಜೋಡಿ ಉಪಪರ್ಣಗಳಿರುತ್ತವೆ.; ಪ್ರತಿ ಉಪಪರ್ಣದ ಮೇಲೆ ಆಪೋಸಿಟ್ ಆಗಿ 2-11 ಚಿಗುರೆಲೆಗಳಿರುತ್ತವೆ, ಒವೇಟ್-ಲ್ಯಾನ್ಸಿಲೇಟ್ ಆಕಾರದಲ್ಲಿರುತ್ತವೆ, ಚರ್ಮದಂತಿರುವ ಎಲೆಗಳು ಬಲಿತಾಗ ರೋಮರಹಿತವಾಗಿರುತ್ತವೆ, ಬುಡ ಓರೆ, ಚೂಪು, ಮೊಂಡು, ದುಂಡು ಅಥವಾ ಕ್ರಮೇಣ ಸಪೂರವಾಗಿ ಚೂಪಾಗುತ್ತದೆ, ತುದಿ ಚೂಪಾಗಿದ್ದು, ಅಂಚು ದಂತಿತವಾಗಿರುತ್ತದೆ (ಕ್ರೆನೇಟ್). ಪುಷ್ಪಮಂಜರಿ ಅಕ್ಷಾಕಂಕುಳಿನ ಒಂದು ಹೂಗೊಂಚಲು (ಪ್ಯಾನಿಕಲ್). ಹಸಿರು-ಬಿಳಿ, ಬಣ್ಣದ ದ್ವಿಲಿಂಗಿ ಹೂವುಗಳು ಮೃದು ತುಪ್ಪಳದಿಂದ ಕೂಡಿರುತ್ತವೆ. ಹಣ್ಣು, ತಿರುಳಿರುವ, ಗೋಳಾಕಾರದ, ಕುಗ್ಗಿದ ಪ್ರಮಾಣದಲ್ಲಿರುವ (ಡೋಸಲಿ).ಒಂದು ಗೊರಟೆ ಹಣ್ಣು (ಡ್ರೂಪ್). ಉದ್ದನೆಯ ಏಣುಗೆರೆಗಳಿರುತ್ತವೆ ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ, 3 ರಿಂದ 4 ಬೀಜಗಳಿರುತ್ತವೆ.