ಮಿಲ್ಲೆಟಿಯಾ ಪೆಗುಯೆನ್ಸಿಸ್ ಅಲಿ.

ಕನ್ನಡದ ಹೆಸರು :
ಸಾಮಾನ್ಯ ಹೆಸರು : ಮೌಲ್ಮೈನ್ ರೋಸ್ವುಡ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಮಿಲ್ಲೆಟಿಯಾ ಪೆಗುಯೆನ್ಸಿಸ್ ಅಲಿ.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಡಿಸೆಂಬರ್ - ಮೇ
ಹಣ್ಣಾಗುವ ಅವಧಿ: ಏಪ್ರಿಲ್ - ಅಕ್ಟೋಬರ್
ಮೂಲ: ಬರ್ಮಾ, ಸಿಯಾಮ್

ಉಪಯೋಗಗಳು

ಆಕರ್ಷಕ ಮತ್ತು ಪರಿಮಳಯುಕ್ತ ಹೂವುಗಳಿರುವ ಈ ಅಲಂಕಾರಿಕ ಮರವನ್ನು ರಸ್ತೆಗಳು ಚಂದ ಕಾಣಲು ರಸ್ತೆಗಳ ಉದ್ದಕ್ಕೂ ನೆಡಲಾಗುತ್ತದೆ.

ವಿವರಣೆ

.12-15ಮೀ ನಷ್ಟು ಎತ್ತರವಿರುವ ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದಲ್ಲಿರುವ ಪತನಶೀಲ ಮರ. ಎಲೆಗಳು ಇಂಪಾರಿಪಿನೇಟ್ ಆಗಿದ್ದು, 5–7 ಚಿಗುರೆಲೆಗಳು ಇರುತ್ತವೆ ,ಎಲೆಗಳು ಅಂಡಕಾರ-ಎಲಿಪ್ಟಿಕ್, ಆಕಾರದಲ್ಲಿದ್ದು ರೋಮರಹಿತವಾಗಿರುತ್ತವೆ, ಬುಡ ಚೂಪಾಗಿರುತ್ತವೆ, ತುದಿ ಕ್ರಮೇಣ ಚೂಪಾಗುತ್ತದೆ, ಗುಲಾಬಿ-ಬಿಳಿ ಬಣ್ಣದ ಹೂಗಳಿರುತ್ತವೆ. ಪುಷ್ಪಮಂಜರಿ ಒಂದು ಅಸೀಮಾಕ್ಷ ಪುಷ್ಪ ಗುಚ್ಚ( ರೇಸಿಮ್) ಅಥವಾ ಹೂಗೊಂಚಲು,ಹೂವು ಬಿಡುವ ಅವಧಿ ಫೆಬ್ರವರಿ-ಜೂನ್. ಹಣ್ಣುಗಳು, ಕುಗ್ಗಿರುವ.ದಾರುವಿನಂಥಹ (ವುಡಿಯಾದ) ಆಯತಾಕಾರದ ಬೀಜಕೋಶಗಳು (ಪಾಡ್); ಮೂತ್ರ ಪಿಂಡದಾಕಾರದಲ್ಲಿರುವ ಒಂದು ಬೀಜವಿರುತ್ತದೆ.