ಮಿಲೇಟಿಯಾ ಪಿನ್ನತ (ಎಲ್.) ಪಾಣಿಗ್ರಾಹಿ

ಕನ್ನಡದ ಹೆಸರು : ಹೊಂಗೆ
ಸಾಮಾನ್ಯ ಹೆಸರು : ಪೊಂಗಮಿಯ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಮಿಲೇಟಿಯಾ ಪಿನ್ನತ (ಎಲ್.) ಪಾಣಿಗ್ರಾಹಿ
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯ ಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಏಪ್ರಿಲ್ - ಜೂನ್
ಹಣ್ಣಾಗುವ ಅವಧಿ: ಫೆಬ್ರವರಿ - ಮೇ
ಮೂಲ: ಉಷ್ಣವಲಯದ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ದ್ವೀಪ

ಉಪಯೋಗಗಳು

.ಬೀಜದ ಎಣ್ಣೆ ಡೀಸೆಲ್ ಜನರೇಟರ್‌ಗಳ ಬಳಕೆಗೆ ಉಪಯುಕ್ತವಾಗಿದೆ ಎಂದು ಕಂಡುಬಂದಿದೆ, ಜಟ್ರೋಫಾ ಮತ್ತು ಕ್ಯಾಸ್ಟರ್ ( ಹರಳು ಗಿಡ) ಜೊತೆಗೆ, ಇದು ಜೈವಿಕ ಡೀಸೆಲ್‌ಗೆ ಪೂರಕ ವಸ್ತು (ಫೀಡ್‌ಸ್ಟಾಕ್) ವಾಗುವ ಸಾಧ್ಯತೆಯ ಬಗ್ಗೆ ಭಾರತ ಮತ್ತು ಮೂರನೇ ಪ್ರಪಂಚದಾದ್ಯಂತದ ನೂರಾರು ಯೋಜನೆಗಳಲ್ಲಿ ಇದರ ಬಗ್ಗೆ ಅನೇಷಣೆಗಳಾಗುತ್ತಿವೆ. ಭಾರತ ಮತ್ತು ಬಾಂಗ್ಲಾದೇಶದಂತಹ ದೇಶಗಳ ಗ್ರಾಮೀಣ ಭಾಗದಲ್ಲಿ ಈ ಸಸ್ಯ ಹೇರಳವಾಗಿ ಬೆಳೆಯುತ್ತದೆ, ಇದು ಈ ಪ್ರದೇಶಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವ ಕಾರಣದಿಂದ, ವ್ಯಾಪಾರದ ದೃಷ್ಟಿಯಿಂದ ಪಿನ್ನಾಟಾ ಜೈವಿಕ ಇಂಧನವಾಗಿ ಆ ಭಾಗದ ಜನತೆಗೆ ತುಂಬಾ ಬೆಲೆಬಾಳುವಂತದಾಗಿದೆ. .

ವಿವರಣೆ

.18 ಮೀ ನಷ್ಟು ಎತ್ತರವಿರುವ, ಮಧ್ಯಮ ಗಾತ್ರದ, ನಿತ್ಯಹರಿದ್ವರ್ಣ ಮರ. ತೊಗಟೆ ಬೂದು ಬಣ್ಣದಲ್ಲಿರುತ್ತದೆ, ನಯವಾದ, ಕಂದು ಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ; ಹೊಳೆವ-ಹಳದಿ; ಬಣ್ಣದ ಕಿರುಕೊಂಬೆಗಳು ಉಬ್ಬುತೂತುಗಳನ್ನು ಹೊಂದಿರುತ್ತವೆ.(ಲೆಂಟಿಸೆಲ್ಲೇಟ್). ಎಲೆಗಳು ಆಲ್ಟರ್ನೇಟ್, ಇಂಪಾರಿಪಿನ್ನೇಟ್ ಆಗಿರುತ್ತವೆ; ಆಪೊಸಿಟ್ , ಎಲಿಪ್ಟಿಕ್ – ಅಕ್ಯುಮಿನೇಟ್ , ಎಲಿಪ್ಟಿಕ್ -ಲ್ಯಾನ್ಸಿಲೇಟ್, ಅಂಡಾಕಾರ ಅಥವಾ ಅಂಡಾಕಾರದ-ಆಯತಾಕಾರದಲ್ಲಿರುವ, 5-7 ಚಿಗುರೆಲೆಗಳಿರುತ್ತವೆ, ಕಾಗದದಂತಿರುವ ಎಲೆಗಳು ರೋಮರಹಿತವಾಗಿರುತ್ತವೆ, ಬುಡ ಬೆಣೆಯಾಕಾರದಲ್ಲಿದ್ದು (ಕ್ಯೂನೇಟ್), ತುದಿ ಚೂಪಾಗಿರುತ್ತದೆ,ಅಂಚು ಸಂಪೂರ್ಣವಾಗಿರುತ್ತದೆ.ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನ ಅಸೀಮಾಕ್ಷ (ರೇಸಿಮ್) ಅಥವಾ ಒಂದು ಹೂಗೊಂಚಲು (ಪ್ಯಾನಿಕಲ್). ದ್ವಿಲಿಂಗಿ ಹೂವುಗಳು, ಗುಲಾಬಿ-ಬಿಳಿ ಅಥವಾ ನೇರಳೆ-ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು, 4-5 ಸೆಂ.ಮೀ ಉದ್ದನೆಯ, ಓರೆಯಾಗಿ ಆಯತಾಕಾರದಲ್ಲಿರುವ, ಚಪ್ಪಟೆಯಾದ, ದಪ್ಪನೆಯ,ಬಿರಿಯದ, ಒಂದು ಪಾಡ್ ಎರಡೂ ತುದಿಗಳು ಮೊನಚಾಗಿದ್ದು, ಸ್ವಲ್ಪ ಕುಡುಗೋಲಿನಂತಿರುತ್ತದೆ (ಫಾಲ್ಕೇಟ್); ಮೂತ್ರಪಿಂಡದಾಕಾರದ ಒಂದು ಬೀಜವಿರುತ್ತದೆ.