ಮಿಲ್ಲಿಂಗ್ಟೋನಿಯಾ ಹಾರ್ಟೆನ್ಸಿಸ್ ಎಲ್.ಎಫ್.

ಕನ್ನಡದ ಹೆಸರು : ಬಿರಟೆ ಮರ, ಆಕಾಶ ಮಲ್ಲಿಗೆ
ಸಾಮಾನ್ಯ ಹೆಸರು : ಇಂಡಿಯನ್ ಕಾರ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಮಿಲ್ಲಿಂಗ್ಟೋನಿಯಾ ಹಾರ್ಟೆನ್ಸಿಸ್ ಎಲ್.ಎಫ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಅಕ್ಟೋಬರ್ - ಡಿಸೆಂಬರ್
ಹಣ್ಣಾಗುವ ಅವಧಿ: ಅಕ್ಟೋಬರ್ - ಡಿಸೆಂಬರ್
ಮೂಲ: ದಕ್ಷಿಣ ಏಷ್ಯಾ

ಉಪಯೋಗಗಳು

ಇದನ್ನು ಅಲಂಕಾರಿಕ ಮರವೆಂದು ಪರಿಗಣಿಸಲಾಗುತ್ತದೆ ಮತ್ತು ಇದರ ಹೂವುಗಳ ಆಹ್ಲಾದಕರವಾದ ಸುಗಂಧ ಬೀರುವುದರಿಂದ ಇದು ಉದ್ಯಾನದಲ್ಲಿನ ಮರಕ್ಕೆ ಸೂಕ್ತವಾಗಿದೆ. ಮರವನ್ನು ಮರ ಮುಟ್ಟುಗಳಿಗೂ ಬಳಸಲಾಗುತ್ತದೆ ಮತ್ತು ತೊಗಟೆಯನ್ನು ಕಡಿಮೆ ಗುಣಮಟ್ಟದ ಕಾರ್ಕ್ ಯಾಗಿ ಬಳಸಲಾಗುತ್ತದೆ. ಮರವನ್ನು ಮರವಾಗಿಯೂ ಬಳಸಲಾಗುತ್ತದೆ ಮತ್ತು ತೊಗಟೆಯನ್ನು ಕೆಳಮಟ್ಟದ ಕಾರ್ಕ್ ನ ಬದಲಿಗೆ ಬಳಸಲಾಗುತ್ತದೆ. ಅಗ್ಗದ ಸಿಗರೇಟ್‌ಗಳಲ್ಲಿ ತಂಬಾಕಿಗೆ ಬದಲಿಯಾಗಿ ಎಲೆಗಳನ್ನು ಬಳಸಲಾಗುತ್ತದೆ

ವಿವರಣೆ

.8-25 ಮೀನಷ್ಟು ಎತ್ತರವಿರುವ ನಿತ್ಯಹರಿದ್ವರ್ಣ ಮರಗಳು. ತೊಗಟೆ ಬೆಂಡಿನಂತಿರುತ್ತದೆ (ಕಾರ್ಕಿ).ಎಲೆಗಳು ಅಸಮ ಗರಿ ರೂಪದ (ಇಂಪಾರಿಪಿನ್ನೇಟ) ಕವಲುಗರಿಗಳಾಗಿರುತ್ತವೆ(ಬೈಪಿನ್ನೇಟ್), ವಿರುದ್ಧವಾಗಿರುತ್ತವೆ;, ಪ್ರತಿ ಉಪಪರ್ಣದಲ್ಲಿ 5-7 ಚಿಗುರೆಲೆಗಳು ಇರುವಂಥಹ, 2-3 ಜೋಡಿ ಉಪಪರ್ಣಗಳಿರುತ್ತವೆ, ಚಿಗುರೆಲೆಗಳು ದೀರ್ಘ ಅಂಡಾಕಾರ(ಎಲಿಪ್ಟಿಕ್), ಅಂಡಾಕಾರ, ಅಥವಾ ಒವೇಟ್ – ಒಬ್ಲಾಂಗ್ ಆಗಿದ್ದು, ರೋಮರಹಿತವಾಗಿರುತ್ತವೆ, ಬುಡ ದುಂಡಾಗಿದ್ದು, ಓರೆಯಾಗಿರುತ್ತದೆ, ತುದಿ ಕ್ರಮೇಣವಾಗಿ ಚೂಪಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಗೊಂಚಲು ಹೂವು/ಸಂಯುಕ್ತಪುಷ್ಪ. (ಪ್ಯಾನಿಕ್ಯುಲೇಟ್ ಸೈಮ್). ಬಿಳಿ ಬಣ್ಣದ ,ಉಭಯಲಿಂಗಿ ಹೂವುಗಳು, ಕೊಳವೆಯ ಆಕಾರದಲ್ಲಿದ್ದು, ಅಕ್ಷದ ಕಡೆಯ ಭಾಗ (ಅಡಾಕ್ಸಿಯಲಿ) ಮೃದುವಾದ ತುಪ್ಪಳದಿಂದ ಆವೃತವಾಗಿರುತ್ತದೆ. ಹಣ್ಣು ಕಡಿಮೆ ಅಗಲದ,ಹೆಚ್ಚು ಉದ್ದವಿರುವ,ಒತ್ತಿದಂತಹ ಒಂದು ಕಾಯಿಸಿಪ್ಪೆ ಕೋಶ (ಕ್ಯಾಪ್ಸುಲ್), ಬೀಜಗಳು ಬಿಲ್ಲೆಯಾಕಾರ-ಆಯತಾಕಾರದಲ್ಲಿದ್ದು, ಒತ್ತಿದಂತಿರುತ್ತವೆ, ಬೀಜಗಳಿಗೆ ರೆಕ್ಕೆಗಳಿರುತ್ತವೆ.