ಮಿಮುಸಾಪ್ಸ್ ಎಲೆಂಗಿ ಎಲ್.

ಕನ್ನಡದ ಹೆಸರು : ರಂಜಲ್
ಸಾಮಾನ್ಯ ಹೆಸರು : ಸ್ಪ್ಯಾನಿಷ್ ಚೆರ್ರಿ
ಕುಟುಂಬದ ಹೆಸರು : ಸಪೋಟೇಸಿ
ವೈಜ್ಞಾನಿಕ ಹೆಸರು : ಮಿಮುಸಾಪ್ಸ್ ಎಲೆಂಗಿ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಏಪ್ರಿಲ್
ಹಣ್ಣಾಗುವ ಅವಧಿ: ಜೂನ್ - ಅಕ್ಟೋಬರ್
ಮೂಲ: ಆಗ್ನೇಯ ಏಷ್ಯಾ, ಉತ್ತರ ಆಸ್ಟ್ರೇಲಿಯಾ

ಉಪಯೋಗಗಳು

ತೊಗಟೆ, ಹೂವು, ಹಣ್ಣು ಮತ್ತು ಬೀಜಗಳನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತದೆ, ಇದರಲ್ಲಿ ಸ್ರಾವನಿರೋಧಕ, ತಂಪಾಗಿಸುವ, ಜಂತನ್ನು ನಾಶಪಡಿಸುವ, ಜ್ವರ ನಿವಾರಿಸುವ ಮತ್ತು ಬಲವರ್ಧಿಸುವ ಟಾನಿಕ್ ನ ಗುಣಗಳಿವೆ ಎಂಬ ಅಭಿಪ್ರಾಯವಿದೆ. ಹೆಚ್ಚಾಗಿ ಇದನ್ನು ಒಸಡುಗಳಲ್ಲಿ ರಕ್ತಸ್ರಾವ, ಪಯೋರಿಯಾ, ಹುಳುಕು ಹಲ್ಲು ಮತ್ತು ಸಡಿಲವಾದ ಹಲ್ಲುಗಳು ಮುಂತಾದ ಹಲ್ಲಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.

ವಿವರಣೆ

16-20 ಮೀನಷ್ಟು ಎತ್ತರವಿರುವ ನಿತ್ಯಹರಿದ್ವರ್ಣ ಮರಗಳು. ಗಾಢ ಬೂದು ಬಣ್ಣದ ತೊಗಟೆ, ನಯವಾಗಿರುತ್ತದೆ, ಆಳವಾಗಿ ಸುಕ್ಕುಗಟ್ಟಿರುವುದಿಲ್ಲ. ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿರುತ್ತವೆ, ಒಟ್ಟಾರೆಯಾಗಿ ಅಂಡಾಕಾರದಲ್ಲಿರುವ ಎಲೆಗಳು, ರೋಮರಹಿತವಾಗಿರುತ್ತವೆ, ಬುಡ ಬೆಣೆಯಾಕಾರದಲ್ಲಿರುತ್ತದೆ, ತುದಿ ಚೂಪಾಗಿರುತ್ತವೆ, ಅಂಚು ಸಂಪೂರ್ಣ ಅಥವಾ ಸ್ವಲ್ಪ ಅಲೆಯಂತಿರುತ್ತದೆ. ಪುಷ್ಪಮಂಜರಿ ಒಂಟಿಯಾಗಿರುತ್ತದೆ ಅಥವಾ 2-4 ಹೂವುಗಳ ಗುಚ್ಚವಾಗಿರುತ್ತದೆ. ಕೆನೆ-ಬಿಳಿ ಬಣ್ಣದ, ದ್ವಿಲಿಂಗಿ ಹೂಗಳು ಸುವಾಸನೆಯಿಂದ ಕೂಡಿರುತ್ತವೆ. ಹಣ್ಣು, 2.5-4 ಸೆಂ.ಮೀ ಉದ್ದನೆಯ, ಅಂಡಾಕಾರದ, ಕಿತ್ತಳೆ ಬಣ್ಣದ ಒಂದು ಬೀಜವಿಲ್ಲದ ರಭರಿತ ಹಣ್ಣು (ಬೆರ್ರಿ), ಚಿಕ್ಕದಾಗಿದ್ದಾಗ ಮೃದುತುಪ್ಪಳವಿದ್ದು, ಬಿದ್ದುಹೋಗದ ಪುಷ್ಪಪಾತ್ರೆ ಇರುತ್ತದೆ. .