ಮೋರಸ್ ನಿಗ್ರಾ ಎಲ್.

ಕನ್ನಡದ ಹೆಸರು : ಟುಟಿ, ಟೂಲ್, ಹಿಪ್ಪುನೇರಳೆ
ಸಾಮಾನ್ಯ ಹೆಸರು : ಬ್ಲಾಕ್ ಮಲ್ಬೆರಿ
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : ಮೋರಸ್ ನಿಗ್ರಾ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮೇ - ಜೂನ್
ಹಣ್ಣಾಗುವ ಅವಧಿ: ಆಗಸ್ಟ್ - ಸೆಪ್ಟೆಂಬರ್
ಮೂಲ: ನೈಋತ್ಯ ಏಷ್ಯಾ

ಉಪಯೋಗಗಳು

ಸಸ್ಯವು ನೋವು ನಿವಾರಕ, ಮಾರ್ದವಕ (ಮೃದುಗೊಳಿಸುವ), ನಿದ್ರಾಜನಕವಾಗಿದೆ.ಎಲೆಗಳು ಜೀವಿರೋಧಿ, ಸ್ರಾವನಿರೋಧಕ, ಸ್ವೇದನಕಾರಕ, ಹೈಪೊಗ್ಲಿಸಿಮಿಕ್ ಆಗಿದ್ದು, ಹಲ್ಲಿನ ಮತ್ತು ಕಣ್ಣಿನ ಸಮಸ್ಯೆಗಳ ಔಷಧವಾಗಿವೆ. ಶೀತಗಳು, ಶೀತಜ್ವರ (ಇನ್ಫ್ಲುಯೆನ್ಸ), ಕಣ್ಣಿನ ಸೋಂಕುಗಳು ಮತ್ತು ಮೂಗಿನಿಂದ ರಕ್ತ ಸೋರುವ ಸಮಸ್ಯೆಗಳ ಚಿಕಿತ್ಸೆಯಲ್ಲಿ ಅವುಗಳನ್ನು ಆಂತರಿಕವಾಗಿ ತೆಗೆದುಕೊಳ್ಳಲಾಗುತ್ತದೆ. ಕಾಂಡಗಳು ಆಂಟಿರುಮ್ಯಾಟಿಕ್, ಮೂತ್ರವರ್ಧಕವಾಗಿದ್ದು, ಕಡಿಮೆ ರಕ್ತದೊತ್ತಡ (ಹೈಪೊಟೆನ್ಸಿವ್) ಮತ್ತು ಎದೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ತೊಗಟೆಯ ಟಿಂಚರ್ ಅನ್ನು ಹಲ್ಲುನೋವು ನಿವಾರಿಸಲು ಬಳಸಲಾಗುತ್ತದೆ.

ವಿವರಣೆ

10 ಮೀನಷ್ಟುಎತ್ತರವಿರುವ, ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದ, ದ್ವಿಲಿಂಗಿ ಅಥವಾ ಭಿನ್ನಲಿಂಗಿಯಾದ, ಪತನಶೀಲ ಮರ. ಕಡು ಕಂದು ಬಣ್ಣದ ತೊಗಟೆ, ಒರಟಾಗಿದ್ದು, ಬಿರುಕು ಬಿಟ್ಟಿರುತ್ತದೆ. ಸಣ್ಣ ತೆಳ್ಳನೆಯ,ದಟ್ಟವಾದ ಕೂದಲುಳ್ಳ ಕೆಂಪು – ಕಂದು ಬಣ್ಣದ ರೆಂಬೆಗಳಿರುತ್ತವೆ.ಎಲೆಗಳು ಸರಳ, ಆಲ್ಟರ್ನೇಟ್ ,ಹಾಲೆಗಳಿಲ್ಲದೆ, ಕೆಲವೊಮ್ಮೆ 2-5 ಹಾಲೆಗಳಿದ್ದು, ಒಟ್ಟಾರೆಯಾಗಿ ಅಂಡಾಕಾರದಲ್ಲಿರುತ್ತವೆ.ಅಬ್ಯಾಕ್ಸಿಯಾಲಿ ತೆಳು ಹಸಿರು ಬಣ್ಣ, ಸ್ವಲ್ಪಕಾಲ ಮೃದುತುಪ್ಪಳವಿರುತ್ತದೆ ಮತ್ತು ಮೃದುತುಪ್ಪಳ ದಟ್ಟವಾಗಿರುತ್ತದೆ. ಅಡಾಕ್ಸಿಯಾಲಿ ಕಡು ಹಸಿರು ಬಣ್ಣವಿದ್ದು, ಒರಟಾಗಿರುತ್ತದೆ. ಬುಡ ಕಾರ್ಡೇಟ್ ಆಗಿದ್ದು, ತುದಿ ಚೂಪಾಗಿರುತ್ತದೆ, ಅಂಚು ನಿಯತವಾಗಿ ಮತ್ತು ಅಡ್ಡಾದಿಡ್ಡಿಯಾಗಿ ದಂತಿತವಾಗಿರುತ್ತದೆ. ಪುಷ್ಪ ಮಂಜರಿ ಒಂದು ಕ್ಯಾಟ್ಕಿನ್. ಉರುಳೆಯಾಕಾರದ, ಮೃದು ತುಪ್ಪಳದಿಂದ ಕೂಡಿದ, ಗಂಡು ಕ್ಯಾಟ್ಕಿನ್ಗಳಿರುತ್ತವೆ. ಮೃದು ತುಪ್ಪಳವಿರುವ, ಅಂಡಾಕಾರದ, ಸಣ್ಣತೊಟ್ಟಿರುವ ಹೆಣ್ಣು ಕ್ಯಾಟ್ಕಿನ್ಗಳಿರುತ್ತವೆ. ಹಣ್ಣು ಒಂದು ತಿರುಳಿರುವ ಸಂಯುಕ್ತ ಫಲ (ಸೊರೋಸಿಸ್) ಅಂಡಾಕಾರ-ಆಯತಾಕಾರದಲ್ಲಿದ್ದು, ಗಾಢ ನೇರಳೆಯಿಂದ ಕಪ್ಪು ಬಣ್ಣದಲ್ಲಿರುತ್ತದೆ,ಹೆಣ್ಣು ಮಾಗುವವರೆಗೂ ಹೆಚ್ಚು ಆಮ್ಲೀಯ (ಅಸಿಡಿಕ್) ವಾಗಿರುತ್ತದೆ.