ಕನ್ನಡದ ಹೆಸರು : | ಗಸಗಸೆ ಹಣ್ಣಿನ ಮರ |
ಸಾಮಾನ್ಯ ಹೆಸರು : | ಬುವಾ ಚೆರ್ರಿ ಟ್ರೀ |
ಕುಟುಂಬದ ಹೆಸರು : | ಮುಂಟಿಂಗಿಯೇಸಿ |
ವೈಜ್ಞಾನಿಕ ಹೆಸರು : | ಮುಂಟಿಂಗಿಯಾ ಕ್ಯಾಲಬುರಾ ಎಲ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಜುಲೈ - ಅಕ್ಟೋಬರ್ |
ಹಣ್ಣಾಗುವ ಅವಧಿ: | ಜುಲೈ - ಅಕ್ಟೋಬರ್ |
ಮೂಲ: | ಮೆಕ್ಸಿಕೋ, ಬೊಲಿವಿಯಾ |
ಇದರ ಮೃದುವಾದ ಮರವನ್ನು ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ, ನಾರಿನಂತಿರುವ ಆದರ ತೊಗಟೆಯನ್ನು ಹಗ್ಗಗಳನ್ನು ತಯಾರಿಸಲು ಬಳಸಲಾಗುತ್ತದೆ. ಎಲೆಗಳನ್ನು (ತಲೆನೋವು, ಪ್ರಾಸ್ಟೇಟ್ ಸಮಸ್ಯೆಗಳು, ಗ್ಯಾಸ್ಟ್ರಿಕ್ ಹುಣ್ಣುಗಳನ್ನು ಕಡಿಮೆಗೊಳಿಸುವುದು), ತೊಗಟೆಯನ್ನು (ಆಂಟಿಸೆಪ್ಟಿಕ್), ಹೂವುಗಳನ್ನು (ಆಂಟಿಸೆಪ್ಟಿಕ್, ಊತವನ್ನು ಕಡಿಮೆ ಮಾಡುವುದು, ಆಂಟಿಸ್ಪಾಸ್ಮೊಡಿಕ್), ಮತ್ತು ಹಣ್ಣುಗಳನ್ನು (ಉಸಿರಾಟದ ತೊಂದರೆಗಳು; ಅತಿಸಾರವಿರೋಧಿ (ಆಂಟಿಡಿಯಾರಿಯಾಕ್)) ಈ ಮೇಲೆ ಹೇಳಿರುವ ಆರೋಗ್ಯ ಸಮಸ್ಯೆಗಳಿಗೆ ಸಾಂಪ್ರದಾಯಿಕ ಔಷಧಿಯಲ್ಲಿ ಬಳಕೆಯಾಗುತ್ತದೆ ಎಂದು ಹೇಳಲಾಗುತ್ತದೆ.
2-12 ಮೀ ಎತ್ತರವಿರುವ, ಪೊದೆಸಸ್ಯ ಅಥವಾ ಚಿಕ್ಕ ನಿತ್ಯಹರಿದ್ವರ್ಣ ಮರ. ಕೊಂಬೆಗಳು ಹರಡಿಕೊಂಡಿರುತ್ತವೆ.ಎಳೆ ಕೊಂಬೆಗಳಲ್ಲಿ ದಟ್ಟವಾದ ಉಣ್ಣೆಯಂತಹ ಮೃದುತುಪ್ಪಳವಿರುತ್ತದೆ. ಎಲೆಗಳು ಸರಳ, ಆಲ್ಟರ್ನೇಟ್, ಆಯತಾಕಾರ ಅಥವಾ ಲ್ಯಾನ್ಸಿಲೇಟ್ ಆಗಿದ್ದು, ಮೃದುತುಪ್ಪಳದಿಂದ ಕೂಡಿರುತ್ತವೆ, ಅಸಮಬಾಹುವಿನ ಬುಡವಿದ್ದು, ತುದಿ ಚೂಪಾಗಿರುತ್ತದೆ, ಅಂಚು ಅನಿಯಮಿತವಾಗಿ ದಂತುರೀಕೃತವಾಗಿರುತ್ತದೆ. ಪುಷ್ಪಮಂಜರಿ 1 ಅಥವಾ 2 ರಿಂದ 3 ಹೂಗಳುಳ್ಳ ಅಕ್ಷಾಕಂಕುಳಿನ ಮೇಲಿನ ಒಂದು ಹೂ ಗೊಂಚಲು. ದ್ವಿಲಿಂಗಿ ಹೂಗಳು,ಬಿಳಿಯಾಗಿರುತ್ತವೆ. ಹಣ್ಣು,ಸುಮಾರು. 1 ಸೆಂ ವ್ಯಾಸದ, ಸ್ವಲ್ಪ ಮಟ್ಟಿಗೆ ರೋಮರಹಿತವಾಗಿರುವ ಒಂದು ಬೆರ್ರಿ, ಹಣ್ಣಾದಾಗ ಹಳದಿಯಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ, ಹಲವಾರು ಬೀಜಗಳಿರುತ್ತವೆ.