ಮುರ್ರಾಯ ಪ್ಯಾನಿಕ್ಯುಲಾಟಾ (ಎಲ್.) ಜ್ಯಾಕ್.

ಕನ್ನಡದ ಹೆಸರು : ಕಾಡು ಕರಿಬೇವು
ಸಾಮಾನ್ಯ ಹೆಸರು : ಆರೆಂಜ್ ಜಾಸ್ಮೀನ್ , ಚೈನೀಸ್ ಬಾಕ್ಸ್
ಕುಟುಂಬದ ಹೆಸರು : ರುಟೇಸಿ
ವೈಜ್ಞಾನಿಕ ಹೆಸರು : ಮುರ್ರಾಯ ಪ್ಯಾನಿಕ್ಯುಲಾಟಾ (ಎಲ್.) ಜ್ಯಾಕ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ದಕ್ಷಿಣ ಏಷ್ಯಾ, ಭಾರತ, ಆಸ್ಟ್ರೇಲಿಯಾ

ಉಪಯೋಗಗಳು

ಎಲೆಗಳಲ್ಲಿ ಸ್ರಾವನಿರೋಧಕ, ಉತ್ತೇಜಕ ಮತ್ತು ಟಾನಿಕ್ ನ ಗುಣಗಳಿವೆ.ಅವುಗಳನ್ನು ಜಲೋದರ (ಡ್ರಾಪ್ಸಿ), ಅತಿಸಾರ ಮತ್ತು ಭೇದಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬೇರುಗಳ ತೊಗಟೆಯನ್ನು ಅರೆದು ತಿನ್ನಲಾಗುತ್ತದೆ ಹಾಗೂ ದೇಹದ ನೋವುಗಳಿಗೆ ಚಿಕಿತ್ಸೆ ನೀಡಲು ಅದನ್ನು ಆ ಜಾಗದ ಹೊರಭಾಗದ ಮೇಲೆ ಹಚ್ಚುಲಾಗುತ್ತದೆ. ಹೂವುಗಳಿಂದ ಸಾರಭೂತ (ಎಸೆಂಶಿಯಲ್) ತೈಲವನ್ನು ಪಡೆಯಲಾಗುತ್ತದೆ.

ವಿವರಣೆ

1.8-12 ಮೀ ಎತ್ತರವಿರುವ, ನಿತ್ಯಹರಿದ್ವರ್ಣ ಪೊದೆಗಳು ಅಥವಾ ಮರಗಳು. ತೊಗಟೆ ಬೂದು-ಬಿಳಿ ಬಣ್ಣದಿಂದ ತಿಳಿ ಹಳದಿ-ಬೆರೆತ ಬೂದು ಬಣ್ಣದಲ್ಲಿರುತ್ತವೆ. ಅಸಮಗರಿರೂಪದ ಎಲೆಗಳು , ಆಲ್ಟರ್ನೇಟಾಗಿ ಜೋಡಿಸಲ್ಪಟ್ಟಿರುತ್ತವೆ; ಉಪ ಅಂಡಾಕಾರದಿಂದ ಅಂಡಾಕಾರದಿಂದ ಎಲಿಪ್ಟಿಕ್ ಆಕಾರದ 3-7 ಚಿಗುರೆಲೆಗಳಿರುತ್ತವೆ,ಚರ್ಮದಂತಿರುವ ಈ ಎಲೆಗಳು , ಮೃದುತುಪ್ಪಳದಿಂದ ಕೂಡಿದ್ದು ರೋಮರಹಿತವಾಗಿರುತ್ತವೆ,ಮಚ್ಚೆಗಳಿರುವ ಗ್ರಂಥಿಗಳಿರುತ್ತವೆ, ಬುಡ ಬೆಣೆಯಾಕಾರದಲ್ಲಿದ್ದು ತುದಿ ದುಂಡಾಗಿದ್ದು ಚೂಪಾಗುತ್ತದೆ, ಅಂಚು ಸಂಪೂರ್ಣ ಅಥವಾ ಹಗುರವಾಗಿ ದಂತುರವಾಗಿರುತ್ತದೆ. ಪುಷ್ಪಮಂಜರಿಗಳು ಟರ್ಮಿನಲ್ ಅಥವಾ ಅಕ್ಷಾಕಂಕುಳಿನ ಹೂ ಗುಚ್ಚಗಳಾಗಿರುತ್ತವೆ. ಬಿಳಿ ಬಣ್ಣದ ದ್ವಿಲಿಂಗಿ ಹೂವುಗಳು, ಸುಗಂಧಮಯವಾಗಿರುತ್ತವೆ. ಹಣ್ಣು, ಕಿರಿದಾದ ಅಂಡಾಕಾರದ, ಉಪಗೋಳಾಕಾರದ ಅಥವಾ ಅಪರೂಪವಾಗಿ ಅಂಡಾಕಾರದಲ್ಲಿರುವ ಒಂದು ಬೆರ್ರಿ. ಕಿತ್ತಳೆ ಬಣ್ಣದಿಂದ ಸಿಂಧೂರ ಬಣ್ನದಲ್ಲಿರುವ ಹಣ್ಣಿನ ಮೇಲೆ ಮಚ್ಚೆಗಳಿದ್ದು, ರೋಮರಹಿತವಾಗಿರುತ್ತದೆ, ಉದ್ದನೆಯ ಮೃದು ಕೂದಲಿರುವ 1-2 ಬೀಜಗಳಿರುತ್ತವೆ.