ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಗಯಾನಾ ಚೆಸ್ಟ್ನಟ್, ಮಲಬಾರ್ ಚೆಸ್ಟ್ನಟ್ |
ಕುಟುಂಬದ ಹೆಸರು : | ಮಾಲ್ವೇಸೀ |
ವೈಜ್ಞಾನಿಕ ಹೆಸರು : | ಪಚಿರಾ ಅಕ್ವಾಟಿಕಾ ಆಬ್ಲ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ವರ್ಷಪೂರ್ತಿ |
ಹಣ್ಣಾಗುವ ಅವಧಿ: | ವರ್ಷಪೂರ್ತಿ |
ಮೂಲ: | ಮಧ್ಯ ಮತ್ತು ದಕ್ಷಿಣ ಅಮೇರಿಕಾ |
.ಇದನ್ನು ಅತ್ಯುತ್ತಮವಾದ ಗಾಳಿ-ಶುದ್ಧೀಕರಣ ಸಸ್ಯ ಎಂದು ಕರೆಯಲ್ಪಡುತ್ತದೆ ಮತ್ತು ಇದು ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ಇದು ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ ಹಲವಾರು ಅದ್ಭುತ ಪ್ರಯೋಜನಗಳನ್ನು ನೀಡಿ ಮನೆಯನ್ನು ಕುಟುಂಬದವರಿಗೆ ಕ್ಷೇಮವಾದ ಸ್ಥಳವನ್ನಾಗಿ ಮಾಡುತ್ತದೆ.
5-23 ಮೀನಷ್ಟು ಎತ್ತರವಿರುವ, ನಿತ್ಯಹರಿದ್ವರ್ಣ ಮರಗಳು, ಕೆಲವೊಮ್ಮೆ ಬುಡ ಬಟ್ರೆಸ್ ಆಗಿರುತ್ತದೆ. ತೊಗಟೆ ನಯವಾಗಿರುತ್ತದೆ, ಬೂದು ಬಣ್ಣ ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತದೆ. ಎಲೆಗಳು ಹಸ್ತದ ಆಕಾರದಲ್ಲಿದ್ದು,ಆಲ್ಟರ್ನೇಟಾಗಿ ಜೋಡಿಸಲ್ಪಟ್ಟಿರುತ್ತವೆ; 5-9 ಚಿಗುರೆಲೆಗಳಿರುತ್ತವೆ, ಆಯತಾಕಾರದಿಂದ ಅಂಡಾಕಾರದ-ಆಯತಾಕಾರದಲ್ಲಿರುತ್ತವೆ,ಎಲೆಯ ಅಕ್ಷಕ್ಕೆ ವಿಮುಖವಾದ ಭಾಗ (ಅಬಾಕ್ಸಿಯಲಿ) ಕೆಂಗಂದು ಬಣ್ಣದ (ಫೆರುಜಿನಸ್) ನಕ್ಷತ್ರಾಕಾರವಾಗಿ (ಸ್ಟೆಲೇಟ್)ದಟ್ಟವಾದ ಮೃದುತುಪ್ಪಳದಿಂದ ಮುಚ್ಚಲ್ಪಟ್ಟಿರುತ್ತದೆ ( ಟೋಮೆಂಟಸ್),ಅಕ್ಷಕ್ಕೆ ಮುಖ (ಅಡಾಕ್ಸಿಯಾಲಿ) ಮಾಡಿರುವ ಭಾಗ ರೋಮರಹಿತವಾಗಿರುತ್ತದೆ, ಬುಡ ಬೆಣೆಯಾಕಾರದಲ್ಲಿದ್ದು (ಕ್ಯೂನಿಟ್), ತುದಿ ಚೂಪಾಗಿರುತ್ತದೆ,ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂಟಿ ಹೂವುಗಳ ಗೊಂಚಲು. ದ್ವಿಲಿಂಗಿ ಹೂವುಗಳು, ಹಳದಿ ಬಣ್ಣದಲ್ಲಿರುತ್ತವೆ; . ಗುಲಾಬಿ-ತುದಿಯ ಹಳದಿ ಮಿಶ್ರಿತ ಬಿಳಿ ಬಣ್ಣದ ಹಲವಾರು ಕೇಸರಗಳಿರುತ್ತವೆ. ಹಣ್ಣು ಉಪಗೋಳಾಕಾರದ, ದೀರ್ಘತ್ತೀಯದಿಂದ ಆಯತಾಕಾರದ – ದೀರ್ಘತ್ತೀಯ ಆಕಾರದ ಒಂದು ಕ್ಯಾಪ್ಸುಲ್, ಹಳದಿ ಮಿಶ್ರಿತ ಕಂದು ಬಣ್ಣದ ಮೃದು ತುಪ್ಪಳದಿಂದ ಆವೃತವಾಗಿರುತ್ತದೆ, ಒಳಭಾಗದಲ್ಲಿ ರೇಷ್ಮೆಯಂತಹ ನೀಳರೋಮಗಳಿರುತ್ತವೆ. ಗಾಢ ಕಂದು ಬಣ್ಣದ, ಕೋನಗಳಿರುವ 4-5 ಬೀಜಗಳಿರುತ್ತವೆ.