ಅಲ್ಸ್ಟೋನಿಯಾ ಸ್ಕಾಲರಿಸ್ (ಎಲ್.)ಆರ್. ಬಿಆರ್.

ಕನ್ನಡದ ಹೆಸರು : ಅಡ್ಡ ಸರ್ಪ
ಸಾಮಾನ್ಯ ಹೆಸರು : ಡೆವಿಲ್ ಟ್ರೀ, ದೆವ್ವದ ಮರ
ಕುಟುಂಬದ ಹೆಸರು : ಅಪೊಸಿನೇಸಿ
ವೈಜ್ಞಾನಿಕ ಹೆಸರು : ಅಲ್ಸ್ಟೋನಿಯಾ ಸ್ಕಾಲರಿಸ್ (ಎಲ್.)ಆರ್. ಬಿಆರ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಅಕ್ಟೋಬರ್ - ಮಾರ್ಚ್
ಹಣ್ಣಾಗುವ ಅವಧಿ: ಏಪ್ರಿಲ್ - ಜೂನ್
ಮೂಲ: ದಕ್ಷಿಣ ಚೀನಾ, ಉಷ್ಣವಲಯದ ಏಷ್ಯಾ

ಉಪಯೋಗಗಳು

ಪೆನ್ಸಿಲ್ ತಯಾರಿಕೆಗೆ ಮರವನ್ನು ಬಳಸಲಾಗುತ್ತದೆ. ದೀರ್ಘಕಾಲದ ಅತಿಸಾರ ಮತ್ತು ಭೇದಿಯ ಮುಂದುವರಿದ ಹಂತಗಳಲ್ಲಿ ಇದು ಅಮೂಲ್ಯವಾದ ಪರಿಹಾರವನ್ನುನೀಡುತ್ತದೆ ಎನ್ನುವುದು ಸಾಬೀತಾಗಿದೆ. ಜ್ವರ ಮತ್ತು ಇತರ ಸುಸ್ತು ಮಾಡುವ ಕಾಯಿಲೆಗಳ ನಂತರದ ಆಯಾಸದ ಸಂದರ್ಭದಲ್ಲಿ ಹೊಟ್ಟೆ ಮತ್ತು ಜೀರ್ಣ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಇದು ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ.

ವಿವರಣೆ

.40ಮೀ ನವರೆಗೆ ಎತ್ತರವಿರುವ ಮಧ್ಯಮದಿಂದ ದೊಡ್ಡ ಗಾತ್ರದ ಮರ. ಎಲೆಗಳು ಮೇಲಿನ ಅಕ್ಷಗಳಲ್ಲಿ 4-8 ರ ಸುರುಳಿಗಳಲ್ಲಿ, ಲ್ಯಾಮಿನಾ ಒಬ್ವೇಟ್ - ಎಲಿಪ್ಟಿಕಲ್ ಅಥವಾ ಎಲಿಪ್ಟಿಕಲ್ -ಲ್ಯಾನ್ಸಿಲೇಟ್, ರೋಮರಹಿತ ಅಥವಾ ಸ್ವಲ್ಪ ರೋಮದಿಂದ ಕೂಡಿರುತ್ತದೆ, ಮೇಲಿನ ಮೇಲ್ಮೈ ಕಡು ಹಸಿರಾಗಿರುತ್ತದೆ, ಹಾಗೂ ಕೆಳಭಾಗ ಹಸಿರು-ಬಿಳಿಯಾಗಿರುತ್ತದೆ; ಎಲೆಯ ತುದಿ ದುಂಡು ಅಥವಾ ಸ್ವಲ್ಪ ಮೊನಚಾಗಿದ್ದು, ತಳದ ಕಡೆಗೆ ಮೊನಚಾಗಿರುತ್ತದೆ. ಪುಷ್ಪ ಮಂಜರಿ ಹೆಚ್ಚು ಕವಲೊಡೆದ ತುದಿಯಲ್ಲಿಯ ಹೂಗುಚ್ಚವಾಗಿರುತ್ತದೆ; ಹೂಗಳು ಬಿಳಿ, ಕ್ರೀಂ ಅಥವಾ ಹಸಿರು ಬಣ್ಣದವಾಗಿದ್ದು, ಬಲವಾದ ಸುಗಂಧವಿರುತ್ತದೆ. ಹಣ್ಣು ಒಂದು ಲೋಲಕದಂತಿದ್ದು, ಎರಡು-ಹಾಲೆಗಳು, ಡಿಹಿಸೆಂಟ್ ಕೋಶಕ, ಕಂದು ಅಥವಾ ಹಸಿರು ಬಣ್ಣದ್ದಾಗಿರುತ್ತದೆ, ಒಣಗಿದ ಅಥವಾ ಮರದಂತಿದ್ದು (ವುಡಿ), ಸ್ಪಿಂಡಲ್-ಆಕಾರದ್ದಾಗಿದ್ದು, ಹಲವಾರು ಚಪ್ಪಟೆಯಾದ, ಉದ್ದವಾದ, ಪ್ರತಿ ತುದಿಯಲ್ಲಿ ಕೂದಲಿನ ಒಂದು ಗೊಂಚಲು ಇರುವ ಕಂದು ಬೀಜಗಳನ್ನು ಹೊಂದಿರುತ್ತದೆ.