ಪಾರ್ಕಿಯಾ ಬಿಗ್ಲಾಂಡುಲೋಸಾ ವೈಟ್ & ಅರ್ನ್.

ಕನ್ನಡದ ಹೆಸರು :
ಸಾಮಾನ್ಯ ಹೆಸರು : ಆಫ್ರಿಕನ್ ಲೋಕಸ್ಟ್ ಬೀನ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಪಾರ್ಕಿಯಾ ಬಿಗ್ಲಾಂಡುಲೋಸಾ ವೈಟ್ & ಅರ್ನ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಡಿಸೆಂಬರ್ - ಏಪ್ರಿಲ್
ಹಣ್ಣಾಗುವ ಅವಧಿ: ಡಿಸೆಂಬರ್ - ಏಪ್ರಿಲ್
ಮೂಲ: ಆಫ್ರಿಕಾ

ಉಪಯೋಗಗಳು

ತೊಗಟೆಯನ್ನು ಗಂಡೂಕ್ಷ (ಮೌತ್ವಾಶ್) ವನ್ನಾಗಿ ಬಳಸಲಾಗಿತ್ತದೆ, ಹಲ್ಲುನೋವು ಅಥವಾ ಕಿವಿಯ ತೊಂದರೆಗಳಿಗೆ ಇದರ ಆವಿಯನ್ನು ಇನ್ ಹೇಲ್ ಮಾಡಿಸಲಾಗುತ್ತದೆ. ಇದನ್ನು ನೆನೆಸಿ ಮೆತ್ತಗೆ ಮಾಡಿ ಕುಷ್ಠರೋಗಿಗಳಿಗೆ ಸ್ನಾನ ಮಾಡಿಸಲಾಗುತ್ತದೆ ಮತ್ತು ಬ್ರಾಂಕೈಟಿಸ್, ನ್ಯುಮೋನಿಯಾ, ಚರ್ಮದ ಸೋಂಕುಗಳು, ಹುಣ್ಣುಗಳು,ಮೂಕಪೆಟ್ಟುಗಳು, ಬಿಲಾರ್ಜಿಯಾ( ರಕ್ತದಲ್ಲಿಯೂ, ಮೂತ್ರದಲ್ಲಿಯೂ ಇರುವ ಚಪ್ಪಟೆಹುಳು), ಜ್ವರ, ಮಲೇರಿಯಾ, ಅತಿಸಾರ, ಹೊಟ್ಟೆ ನುಲಿತ (ಕೋಲಿಕ್ ) ಮತ್ತು ವಾಂತಿ, ಸಂತಾನಹೀನತೆ, ಲೈಂಗಿಕವಾಗಿ ಹರಡುವ ರೋಗಗಳು, ಗಿನಿ ವರ್ಮ್, ಎಡಿಮಾ ಮತ್ತು ರಿಕೆಟ್ಸ್ ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಮತ್ತು ವಿಷಹಾರಿಯನ್ನಾಗಿಯೂ ಬಳಸಲಾಗುತ್ತದೆ. ಕಣ್ಣುಗಳ ನೋವು, ಸುಟ್ಟಗಾಯಗಳು, ಮೂಲವ್ಯಾಧಿ ಮತ್ತು ಹಲ್ಲುನೋವುಗಳಿಗೆ ಎಲೆಗಳನ್ನು ದ್ರವೌಷಧ (ಲೋಷನ್) ಗಳಲ್ಲಿ ಬಳಸಲಾಗುತ್ತದೆ. ಬೀಜವನ್ನು ಒತ್ತಡದ ಪರಿಹಾರಕ್ಕೆ ಬೀಜವನ್ನು, ಮತ್ತು ತಿರುಳನ್ನು ಜ್ವರದ ಚಿಕಿತ್ಸೆಗೆ ಬಳಸಲಾಗುತ್ತದೆ. ಅದನ್ನು ಮೂತ್ರವರ್ಧಕವಾಗಿ ಮತ್ತು ಸೌಮ್ಯವಾದ ರೇಚಕವಾಗಿ ಸೇವಿಸಲಾಗುತ್ತದೆ. ಕಣ್ಣು ನೋವು ನಿವಾರಣೆಯ ಲೋಷನ್‌ಗಳಲ್ಲಿ ಬೇರುಗಳನ್ನು ಬಳಸಲಾಗುತ್ತದೆ

ವಿವರಣೆ

15-20 ಮೀನಷ್ಟು ಎತ್ತರವಿರುವ, ಪತನಶೀಲ ಮರ. ಕಪ್ಪು ಬಣ್ಣದ ತೊಗಟೆ, ಒರಟಾಗಿರುತ್ತದೆ, ಮರ ಕಂದು ಬಣ್ಣದಲ್ಲಿದ್ದು, ಕಿರುಕೊಂಬೆಗಳು ಮೃದುತುಪ್ಪಳದಿಂದ ಕೂಡಿರುತ್ತವೆ. ಕವಲುಗರಿ (ದ್ವಿಪಿನೇಟ್) ಎಲೆಗಳು ಆಲ್ಟರ್ನೇಟಾಗಿರುತ್ತವೆ , 20-40 ಜೋಡಿ ಉಪಪರ್ಣಗಳಿರುತ್ತವೆ; ಆಯತಾಕಾರದ, 60-80 ಜೋಡಿ ಚಿಗುರೆಲೆಗಳಿರುತ್ತವೆ, ಅವು ಮೇಲೆ ರೋಮರಹಿತವಾಗಿರುತ್ತವೆ, ಕೆಳಭಾಗದಲ್ಲಿ ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ಮೊಟಕುಗೊಂಡಿರುತ್ತದೆ, ತುದಿ ಚೂಪು-ಮೊಂಡಾಗಿರುತ್ತದೆ, ಕೂದಲಿಂದ ಸುತ್ತುವರೆದ ಅಂಚಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿ, ಒಂಟಿಯಾಗಿ, ಲೋಲಕದಂತೆ ನೇತಾಡುವ, ದೊಡ್ಡ ಗೋಳಾಕಾರದ ಹೂಗುದಿ., ಕೆನೆ ಬಣ್ಣದ, ದ್ವಿಲಿಂಗಿ ಹೂವುಗಳಿರುತ್ತವೆ. ಹಣ್ಣು, ಉದ್ದವಾದ ತೊಟ್ಟಿರುವ , ಆಯತಾಕಾರದ-ರೇಖೀಯವಾದ, ಬಿರಿಯುವ ಒಂದು ಬೀಜಕೋಶ (ಪಾಡ್) ಅದು ಕುಗ್ಗಿದಂತಿದ್ದು,ಕಂದು ಬಣ್ಣದಲ್ಲಿರುತ್ತದೆ. ದೀರ್ಘತ್ತೀಯವಾದ 6-13 ಬೀಜಗಳಿರುತ್ತವೆ, ಕುಗ್ಗಿ ಅಂಡಾಕಾರದಲ್ಲಿರುತ್ತವೆ..