ಪರ್ಸಿಯಾ ಅಮೇರಿಕಾನಾ ಮಿಲ್.

ಕನ್ನಡದ ಹೆಸರು :
ಸಾಮಾನ್ಯ ಹೆಸರು : ಆವಕಾಡೊ
ಕುಟುಂಬದ ಹೆಸರು : ಲಾರೇಸಿ
ವೈಜ್ಞಾನಿಕ ಹೆಸರು : ಪರ್ಸಿಯಾ ಅಮೇರಿಕಾನಾ ಮಿಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ನವೆಂಬರ್ - ಜನವರಿ
ಹಣ್ಣಾಗುವ ಅವಧಿ: ಜನವರಿ ಯಿಂದ ಮಾರ್ಚ್ ವರೆಗೆ
ಮೂಲ: ಮೆಕ್ಸಿಕೋ

ಉಪಯೋಗಗಳು

ಎಲೆಗಳಲ್ಲಿ ಸ್ರಾವನಿರೋಧಕ, ವಾತಹರ (ಕಾರ್ಮಿನೇಟಿವ್), ಕೆಮ್ಮುನಿವಾರಿಸುವ (ಆಂಟಿಟಸ್ಸಿವ್), ಆರ್ತವಜನನ (ಎಮ್ಮೆನಾಗೋಗ್) ಮತ್ತು ಕಡಿಮೆ ರಕ್ತದೊತ್ತಡಕ್ಕೆ (ಹೈಪೊಟೆನ್ಸಿವ್) ಪರಿಹಾರ ನೀಡುವ ಅಂಶಗಳಿವೆ. ಭೇದಿಯ ಚಿಕಿತ್ಸೆಗೆ ಎಲೆಗಳನ್ನು ಕಷಾಯದ ರೂಪದಲ್ಲಿ ಬಾಯಿಯ ಮೂಲಕ ನೀಡಲಾಗುತ್ತದೆ. ಕೆಮ್ಮುಗಳನ್ನು ನಿವಾರಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು, ಪಿತ್ತಜನಕಾಂಗದ ಅಡಚಣೆಗಳಿಗೆ ಚಿಕಿತ್ಸೆ ನೀಡಲು, ಮುಟ್ಟಿನ ಹರಿವನ್ನು ಉತ್ತೇಜಿಸಲು ಮತ್ತು ಸಂಧಿವಾತಕ್ಕೆ (ಗೌಟ್‌ಗೆ) ಕಾರಣವಾಗುವ ದೇಹದಲ್ಲಿನ ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮಾಡಲು ಸಹ ಇದನ್ನು ಬಳಸಲಾಗುತ್ತದೆ. ತೊಗಟೆಯಲ್ಲಿ ಸ್ರಾವನಿರೋಧಕ, ವಾತಹರ (ಕಾರ್ಮಿನೇಟಿವ್), ಕೆಮ್ಮುನಿವಾರಿಸುವ (ಆಂಟಿಟಸ್ಸಿವ್), ಆರ್ತವಜನನ (ಎಮ್ಮೆನಾಗೋಗ್) ದ ಗುಣಗಳಿವೆ. ಅತಿಸಾರದ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಹಣ್ಣಿನ ತಿರುಳು ಮಾರ್ದವಕ (ಎಮೋಲಿಯಂಟ್), ವಾತಹರ (ಕಾರ್ಮಿನೇಟಿವ್) ವಾಗಿದೆ ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಿಸುಕಿದ ಹಣ್ಣಿನ ತಿರುಳು ಪೌಷ್ಟಿಕವಾದ ಆಹಾರವಾಗಿದ್ದು ಕಾಮಶಕ್ತಿಯನ್ನು ಪ್ರಚೋದನೆಗೊಳಿಸುವ ಅಂಶಗಳನ್ನು ಹೊಂದಿದೆ.

ವಿವರಣೆ

20 ಮೀ ವರೆಗೆ ಎತ್ತರವಿರುವ ಚಿಕ್ಕ ಮತ್ತು ಮಧ್ಯಮ ಗಾತ್ರದ ನಿತ್ಯಹರಿದ್ವರ್ಣ ಮರಗಳು. ತೊಗಟೆ ಬೂದು-ಹಸಿರು ಬಣ್ಣದಲ್ಲಿರುತ್ತದೆ, ಉದ್ದವಾದ ಸೀಳುಗಳಿರುತ್ತವೆ, ಎಳೆಯ ಕೊಂಬೆಗಳು ಮೃದುತುಪ್ಪಳದಿಂದ ಕೂಡಿರುತ್ತವೆ. ಸರಳವಾದ ಎಲೆಗಳು , ಆಲ್ಟರ್ನೇಟ್ ಆಗಿ ಜೋಡಿಸಲ್ಪಟ್ಟಿರುತ್ತವೆ, ಸ್ವಲ್ಪ ಎಲಿಪ್ಟಿಕ್,ಎಲಿಪ್ಟಿಕ್, ಒವೇಟ್ ನಿಂದ ಒಬೊವೇಟ್ ಆಕಾರದಲ್ಲಿರುವ ಎಲೆಗಳು ,ಚರ್ಮದಂತಿದ್ದು, ಕೆಳಭಾಗ ರೋಮರಹಿತ ಅಥವಾ ಮೃದುತುಪ್ಪಳ ಹರಡಿದಂತಿರುತ್ತದೆ, ಕೆಳಗೆ ಮಾಸಲು ಬೂದುಹಸಿರು ಬಣ್ಣವಿರುತ್ತದೆ (ಗ್ಲಾಕಸ್), ಬುಡ ಬೆಣೆಯಾಕಾರ, ಅಥವಾ ಚೂಪಿನಿಂದ ಕಚ್ಚುಗಳಿರುವಂತೆ ದುಂಡಾಗಿರುತ್ತದೆ, ತುದಿ ಚೂಪು ಅಥವಾ ಮೊಂಡು ಅಥವಾ ಸಪೂರವಾಗುತ್ತಾ ಮೊನಚಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನ ಹತ್ತಿರವಿರುವ (ಸಬ್ಟರ್ಮಿನಲ್) ದಟ್ಟವಾದ ಮೃದುತುಪ್ಪಳದಿಂದ ಕೂಡಿರುವಂತಹ, ಒಂದು ಹೂಗೊಂಚಲು. (ಪ್ಯಾನಿಕಲ್). ಮೃದುತುಪ್ಪಳವಿರುವ ಸಣ್ಣ ಹೂವುಗಳು, ಪರಿಮಳಯುಕ್ತವಾಗಿದ್ದು, ಹಸಿರು ಮಿಶ್ರಿತ-ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು, ದೊಡ್ಡ, ಪಿಯರ್-ಆಕಾರ, ಗೋಳಾಕಾರ ಅಥವಾ ಅಂಡಾಕಾರದಲ್ಲಿರುವ;ಒಂದು ಬೆರ್ರಿ, ದಪ್ಪನೆಯ ರಸಭರಿತವಾದ, ತೈಲಯುಕ್ತವಾದ ಮೆತ್ತನೆಯ ತಿರುಳನ್ನು ಹೊಂದಿರುತ್ತದೆ. 1, ದೊಡ್ಡ, ದುಂಡನೆಯ ಬೀಜವಿರುತ್ತದೆ.