ಪರ್ಸಿಯಾ ಮಕ್ರಾಂತ (ನೀಸ್) ಕೋಸ್ಟರ್ಮ್

ಕನ್ನಡದ ಹೆಸರು : ಗುಳಿಮಾವು, ಚಿಟ್ಟುತಂದ್ರಿ
ಸಾಮಾನ್ಯ ಹೆಸರು : ಲಾರ್ಜ್ ಫ್ಲವರ್ಡ್ ಬೇ ಟ್ರೀ
ಕುಟುಂಬದ ಹೆಸರು : ಲಾರೇಸಿ
ವೈಜ್ಞಾನಿಕ ಹೆಸರು : ಪರ್ಸಿಯಾ ಮಕ್ರಾಂತ (ನೀಸ್) ಕೋಸ್ಟರ್ಮ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಡಿಸೆಂಬರ್ - ಮೇ
ಹಣ್ಣಾಗುವ ಅವಧಿ: ಡಿಸೆಂಬರ್ - ಮೇ
ಮೂಲ: ಪಶ್ಚಿಮ ಘಟ್ಟಗಳು, ಶ್ರೀಲಂಕಾ

ಉಪಯೋಗಗಳು

.ನಾಟಿ ವೈದ್ಯರುಗಳು ಎಲೆ ಮತ್ತು ತೊಗಟೆಯನ್ನು, ಸಂಧಿವಾತ, ಅಸ್ತಮಾ, ಹುಣ್ಣು, ಮೂಗೇಟುಗಳು, ಮಾನಸಿಕ ತಲ್ಲಣ, ಮೂಳೆ ಮುರಿತ, ಊತ, ಬಲಹೀನತೆ ಮತ್ತು ನಿತ್ರಾಣ ಮುಂತಾದ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹೆಚ್ಚಾಗಿ ಬಳಸುತ್ತಾರೆ.

ವಿವರಣೆ

30 ಮೀ ವರೆಗೆ ಎತ್ತರವಿರುವ, ನಿತ್ಯಹರಿದ್ವರ್ಣ ಮರಗಳು.ತೊಗಟೆ ತೆಳು ಕಂದು ಬಣ್ಣದಲ್ಲಿದ್ದು, ಕಪ್ಪು ಕಲೆಗಳಿರುವ ಮಚ್ಚೆಗಳಿರುತ್ತವೆ, ಪ್ರಖರವಾದ ಗುಲಾಬಿ ಬಣ್ಣದ, ತೆಳುವಾದ ಚಿಪ್ಪುಗಳಿರುತ್ತವೆ. ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿರುತ್ತವೆ, ಕಿರುಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ, ಒಬೊವೇಟ್ ಅಥವಾ ಎಲಿಪ್ಟಿಕ್ ನಿಂದ ಎಲಿಪ್ಟಿಕ್ –ಒಬ್ಲಾಂಗ್ ಆಕಾರದಲ್ಲಿರುವ ಎಲೆಗಳು,ಚರ್ಮದಂತಿದ್ದು, ರೋಮರಹಿತವಾಗಿರುತ್ತವೆ, ಕೆಳಗೆ ಮಾಸಲು ಬೂದುಹಸಿರು ಬಣ್ಣದಲ್ಲಿರುತ್ತವೆ, ಬುಡ ಚೂಪಿಂದ ದುಂಡಾಗುತ್ತದೆ, ತುದಿ ದುಂಡು ಅಥವಾ ಕ್ರಮೇಣ ಚೂಪಾಗುವ ಅಥವಾ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ, ಎಲೆಗಳನ್ನು ಜಜ್ಜಿದಾಗ ಪರಿಮಳ ಬರುತ್ತದೆ. ಪುಷ್ಪಮಂಜರಿ ಒಂದು ತುದಿ ಅಥವಾ ಅಕ್ಷಾಕಂಕುಳಿನ ಹೂಗೊಂಚಲು (ಪ್ಯಾನಿಕಲ್).ದ್ವಿಲಿಂಗಿ ಹೂವುಗಳು, ತಿಳಿ ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು 2ಸೆಂ.ಮೀನಷ್ಟು ಅಗಲವಿರುವ, ಗೋಳಾಕಾರದ, ಪರಿಮಳಭರಿತವಾದ ಒಂದು ಬೆರ್ರಿ, ಸಣ್ಣ ಬಿಳಿ ಚುಕ್ಕೆಗಳಿರುವ ಹಸಿರು ಬಣ್ಣದ ಹಣ್ಣುಗಳು, ಮಾಗಿದಾಗ ಕೆಂಪು ಬಣ್ಣದಿಂದ ಕಪ್ಪು ಬಣ್ಣ ಪಡೆಯುತ್ತವೆ. 1, ಗೋಳಾಕಾರದ ಬೀಜವಿರುತ್ತದೆ.