ಕನ್ನಡದ ಹೆಸರು : | ಈಚಿಲು, ಖಜೂರ |
ಸಾಮಾನ್ಯ ಹೆಸರು : | ವೈಲ್ಡ್ ಡೇಟ್ ಪಾಮ್ |
ಕುಟುಂಬದ ಹೆಸರು : | ಅರೆಕೇಸಿಯೇ |
ವೈಜ್ಞಾನಿಕ ಹೆಸರು : | ಫೀನಿಕ್ಸ್ ಸಿಲ್ವೆಸ್ಟ್ರಿಸ್ (ಎಲ್.)ರಾಕ್ಸ್ಬಿ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಮೇ |
ಹಣ್ಣಾಗುವ ಅವಧಿ: | ಸೆಪ್ಟೆಂಬರ್ - ಅಕ್ಟೋಬರ್ |
ಮೂಲ: | ಪಾಕಿಸ್ತಾನ, ಭಾರತ, ಭೂತಾನ್, ಮ್ಯಾನ್ಮಾರ್, ಬಾಂಗ್ಲಾದೇಶ |
ಹೃದಯದ ತೊಂದರೆಗಳು, ಹೊಟ್ಟೆಯ ಸಮಸ್ಯೆಗಳು, ಜ್ವರ, ವಾಂತಿ ಮತ್ತು ಪ್ರಜ್ಞೆ ಕಳೆದುಕೊಂಡಾಗ ನೀಡುವ ಚಿಕಿತ್ಸೆಯಲ್ಲಿ ಹಣ್ಣು ಉಪಯುಕ್ತವಾಗಿದೆ. ಹಣ್ಣನ್ನು ಪುಡಿಮಾಡಿ ಬಾದಾಮಿ, ಕ್ವಿನ್ಸ್ ಬೀಜಗಳು, ಪಿಸ್ತಾ ಬೀಜಗಳು ಮತ್ತು ಸಕ್ಕರೆಯೊಂದಿಗೆ ಬೆರೆಸಿ, ಮಾಡಿದ ಮಿಶ್ರಣ ಪುನಃ ಚೈತನ್ಯಪಡೆಯಲು ಉತ್ತಮ ಪರಿಹಾರವಾಗಿದೆ..
. 10-16 ಮೀ ವರೆಗೆ ಎತ್ತರವಿರುವ, ಮಧ್ಯಮ ಗಾತ್ರದ, ಭಿನ್ನ ಲಿಂಗಿ (ಡೈಯೋಸಿಯಸ್), ಎಲೆಯ ಬುಡ ಶಾಶ್ವತವಾಗಿರುವ,ಒಂಟಿ (ಸೊಲಿಯಾಟ್ರಿ) ತಾಳೆಮರ. ಗರಿಯಂಥಹ (ಪಿನ್ನೇಟ್) ಎಲೆಗಳು , ಬೂದು ಮಿಶ್ರಿತ-ಹಸಿರು ಬಣ್ಣದಲ್ಲಿರುತ್ತವೆ, ಬುಡದಲ್ಲಿ ಸಣ್ಣ ಮುಳ್ಳುಗಳಿರುತ್ತವೆ; ಹಲವಾರು ಚಿಗುರೆಲೆಗಳಿದ್ದು,ಅವು ಆಲ್ಟರ್ ನೇಟ್ ಆಗಿರುತ್ತವೆ, ಆಪೊಸಿಟ್ ಅಥವಾ ಗೊಂಚಲಿನ ರೀತಿಯಲ್ಲಿರುತ್ತವೆ(ಫ್ಯಾಸಿಕಲ್), ಹಲವಾರು ಸಮತಲಗಳಲ್ಲಿ, ರೇಖೀಯವಾಗಿದ್ದು, ರೋಮರಹಿತವಾಗಿರುತ್ತವೆ, ತುದಿ ಬಹುತೇಕ ಸ್ಪಷ್ಟವಾಗಿ ಮೊನಚಾಗಿರುತ್ತದೆ. ಹೂಗೊಂಚಲು ಒಂದು ತಾಳಗುಚ್ಛ (ಸ್ಪಾಡಿಕ್ಸ್). ಗಂಡು ಹೂವುಗಳು ಬಿಳಿಬಣ್ಣದಲ್ಲಿದ್ದು , ಪರಿಮಳಭರಿತವಾಗಿರುತ್ತವೆ. ಹೆಣ್ಣು ಹೂವುಗಳು ಹಸಿರು ಅಥವಾ ಕೆನೆ-ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು , 2.5-3.2 ಸೆಂ.ಮೀ ಉದ್ದವಿರುವ, ಒಬ್ಲಾಂಗ್ – ಎಲಿಪ್ಸಾಯಿಡ್ ಆಕಾರದಲ್ಲಿರುವ ಒಂದು ಬೆರ್ರಿ. ಹಣ್ಣಾದಾಗ ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಳವಾದ ಏಣುಗೆರೆ ಇರುವ 1 ಬೀಜವಿರುತ್ತದೆ.