ಫಿಲಾಂಥಸ್ ಆಸಿಡಸ್ (ಎಲ್.) ಸ್ಕೀಲ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಮಲಯ ಗೂಸ್ ಬೆರಿ , ಸ್ಟಾರ್ ಗೂಸ್ ಬೆರಿ
ಕುಟುಂಬದ ಹೆಸರು : ಫಿಲಾಂಥೇಸಿ
ವೈಜ್ಞಾನಿಕ ಹೆಸರು : ಫಿಲಾಂಥಸ್ ಆಸಿಡಸ್ (ಎಲ್.) ಸ್ಕೀಲ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಏಪ್ರಿಲ್ - ಮೇ
ಹಣ್ಣಾಗುವ ಅವಧಿ: ಜೂನ್ - ಆಗಸ್ಟ್
ಮೂಲ: ಮಡಗಾಸ್ಕರ್, ದಕ್ಷಿಣ ಏಷ್ಯಾ

ಉಪಯೋಗಗಳು

ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ವಿಶೇಷವಾಗಿ ತುರಿಕೆಗೆಯ ನಿವರಣೆಗೆ ಬೇರಿನ ಸಾರವನ್ನು ಬಳಸಲಾಗುತ್ತದೆ. ಹಣ್ಣನ್ನು ಒಂದು ವಿರೇಚಕವಾಗಿಯೂ ಸಹ ಬಳಸಲಾಗುತ್ತದೆ.ರಕ್ತವನ್ನು ಪುಷ್ಟೀಕರಿಸಲು ಅವುಗಳನ್ನು ಲಿವರ್ (ಯಕೃತ್ತಿನ) ಟಾನಿಕ್ ಆಗಿ ಸೇವಿಸಲಾಗುತ್ತದೆ...

ವಿವರಣೆ

ಒಂದು ಸಣ್ಣ ಪತನಶೀಲ, ಉಭಯಲಿಂಗಿ (ಮೊನೊಸಿಯಸ್) ಮರ ಅಥವಾ ಪೊದೆಸಸ್ಯ, 2 ರಿಂದ 9 ಮೀ ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಅಂಡಾಕಾರ ಅಥವಾ ಈಟಿ ತರದ ತುದಿಯ (ಲ್ಯಾನ್ಸಿಲೇಟ್) ಆಕಾರದಲ್ಲಿರುತ್ತವೆ, ರೋಮರಹಿತವಾಗಿರುತ್ತವೆ, ಬುಡ ಚೂಪಾಗಿರುತ್ತದೆ ಅಥವಾ ದುಂಡಾಗಿರುತ್ತದೆ, ತುದಿ ಚೂಪಾಗಿದ್ದು, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನಲ್ಲಿಯ ಕೆಲವೇ ಹೂಗಳಿರುವ ಗೊಂಚಲುಹೂವು , ಅಪರೂಪವಾಗಿ ಕಾಂಡಪುಷ್ಟಿಯಾಗಿರುತ್ತದೆ( ಕಾಲಿಫ್ಲೋರಸ್). ಗಂಡು, ಹೆಣ್ಣು ಅಥವಾ ದ್ವಿಲಿಂಗಿ ಹೂವುಗಳು, ಸಣ್ಣದಾಗಿದ್ದು, ಗುಲಾಬಿ ಬಣ್ಣದಲ್ಲಿರುತ್ತವೆ. ಹಣ್ಣು 6 ರಿಂದ 8 ಎತ್ತರವಾದ ಏಣುಗೆರೆಗಳಿರುವ, ಗರಿಗರಿಯಾದ, ತಿರುಳಿರುವ ಒಂದು ಗೊರಟೆ ಹಣ್ಣು (ಡ್ರೂಪ್), ತೆಳು ಹಳದಿಯಿಂದ ಕೆನೆಮಿಶ್ರಿತ-ಬಿಳಿ ಬಣ್ಣದಲ್ಲಿರುತ್ತದೆ,ಅದರ ಮೇಣದಂತಹ, ತಿರುಳು ತುಂಬಾ ಹುಳಿಯಾಗಿರುತ್ತದೆ. 4 ರಿಂದ 6 ಬೀಜಗಳಿರುತ್ತವೆ.