ಫಿಲಾಂತಸ್ ಎಂಬ್ಲಿಕಾ ಎಲ್.

ಕನ್ನಡದ ಹೆಸರು : ಬೆಟ್ಟದ ನೆಲ್ಲಿಕಾಯಿ
ಸಾಮಾನ್ಯ ಹೆಸರು : ಇಂಡಿಯನ್ ಗೂಸ್ಬೆರ್ರಿ
ಕುಟುಂಬದ ಹೆಸರು : ಫಿಲಾಂಥೇಸಿ
ವೈಜ್ಞಾನಿಕ ಹೆಸರು : ಫಿಲಾಂತಸ್ ಎಂಬ್ಲಿಕಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಮೇ
ಹಣ್ಣಾಗುವ ಅವಧಿ: ಜೂನ್ - ಸೆಪ್ಟೆಂಬರ್
ಮೂಲ: ಭಾರತದ ಉಪಖಂಡ

ಉಪಯೋಗಗಳು

.ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನಲಾಗುತ್ತದೆ ಅಥವಾ ವಿವಿಧ ಅಡಿಗೆಗಳ ತಯಾರಿಕೆಯಲ್ಲಿ ಸೇರಿಸಲಾಗುತ್ತದೆ, ಉದಾಹರಣೆಗೆ ದಾಲ್ (ಬೇಳೆಯನ್ನು ಬಳಸಿ ಮಾಡುವ ಅಡುಗೆ) ಮತ್ತು ನೆಲ್ಲಿಕಾಯಿಗಳನ್ನು (ಬೆರ್ರಿಗಳನ್ನು) ಸಕ್ಕರೆ ಪಾಕದಲ್ಲಿ ಪಾಕದಲ್ಲಿ ನೆನೆಸಿ ತಯಾರಿಸಿದ ಸಿಹಿ ಭಕ್ಷ್ಯ ನೆಲ್ಲಿಕಾಯಿ ಮೊರಬ್ಬ. ಸಾಂಪ್ರದಾಯಿಕವಾಗಿ ಇದನ್ನು ಊಟದ ನಂತರ ಸೇವಿಸಲಾಗುತ್ತದೆ. ಸಾಮಾನ್ಯವಾಗಿ ಶಾಯಿಗಳು, ಶ್ಯಾಂಪೂಗಳು ಮತ್ತು ಕೂದಲಿನ ಎಣ್ಣೆಗಳಲ್ಲಿ ಬಳಸಲಾಗುತ್ತದೆ, ಭಾರತದ ನೆಲ್ಲಿಕಾಯಿ (ಗೂಸ್ಬೆರ್ರಿ) ಹಣ್ಣಿನಲ್ಲಿರುವ ಹೆಚ್ಚಿನ ಟ್ಯಾನಿನ್ ಅಂಶ ಬಟ್ಟೆಗಳಲ್ಲಿ ಬಣ್ಣಗಳನ್ನು ಭದ್ರಪಡಿಸಲು ಬಣ್ಣಗಚ್ಚಾಗಿ (ಮಾರ್ಡಂಟ್) ಕಾರ್ಯನಿರ್ವಹಿಸುತ್ತದೆ.

ವಿವರಣೆ

15 ಮೀ ನಷ್ಟು ಎತ್ತರವಿರುವ, ಪತನಶೀಲ ಮರಗಳು. ಬೂದು-ಕಂದು ಬಣ್ಣದ ತೊಗಟೆ, ಒರಟಾಗಿದ್ದು, ಅಡ್ಡಾದಿಡ್ಡಿಯಾಗಿ ಸುಲಿಯುವ ಚಕ್ಕೆಗಳು; ಹೊಳೆವ ಗುಲಾಬಿ-ಕೆಂಪು ಬಣ್ಣದಲ್ಲಿರುತ್ತವೆ.ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟಾಗಿರುತ್ತವೆ, ಎಲೆ ಕಳಚುವ ಕಿರುಕೊಂಬೆಗಳ ಮೇಲೆ ಸಣ್ಣ ಎಲೆಗಳು, ಎರಡೂ ಕಡೆಯಲ್ಲಿ, ಎರಡು ಸಾಲುಗಳಲ್ಲಿರುತ್ತವೆ (ಬೈಫೇರಿಯಸ್), ಹತ್ತಿರವಿದ್ದು ಒಂದನ್ನೊಂದು ಆವರಿಸಿರುತ್ತವೆ, ಸಬ್ ಸೆಸ್ಸೈಲ್, ಲೀನಿಯರ್, ಒಬ್ಲಾಂಗ್ ಅಥವಾ ಲೀನಿಯರ್ -ಆಯತಾಕಾರದಲ್ಲಿರುವ ಎಲೆಗಳು,ಪೊರೆಯುಳ್ಳವಾಗಿದ್ದು ರೋಮರಹಿತವಾಗಿರುತ್ತವೆ, ಬುಡ ದುಂಡಾಗಿದ್ದು, ತುದಿ ಮೊಂಡು ಅಥವಾ ಸ್ವಲ್ಪ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಹಸಿರು-ಹಳದಿ,ಬಣ್ಣದ ಏಕಲಿಂಗಿ ಹೂವುಗಳು, ಎಲೆಗಳ ಅಕ್ಷಗಳಲ್ಲಿ ಒತ್ತಾಗಿ ಜೊಂಪೆಯಾಗಿರುತ್ತವೆ. ಹಣ್ಣು, ತಿರುಳಿರುವ ಹಳದಿ-ಹಸಿರು ಬಣ್ಣದ, ಬಿರಿಯದ ಒಂದು ಗೊರಟೆ ಹಣ್ಣು (ಡ್ರೂಪ್).ಉಪಗೋಳಾಕಾರದಲ್ಲಿರುವ,ಇದರ ದುಂಡನೆಯ ಚಪ್ಪಟೆ ಭಾಗ (ಡಿಸ್ಕ್) ವಿಸ್ತಾರವಾಗಿರುತ್ತದೆ.ಕೆಂಪು ಬಣ್ಣದ, ನಯವಾಗಿರುವ, ಮುಮ್ಮೂಲೆಯ 3 ಬೀಜಗಳಿರುತ್ತವೆ.