ಪಿಮೆಂಟ ಡಿಯೋಇಕಾ (ಎಲ್.) ಮೆರ್.

ಕನ್ನಡದ ಹೆಸರು :
ಸಾಮಾನ್ಯ ಹೆಸರು : ಆಲ್ ಸ್ಪೈಸ್, ಜಮೈಕನ್ ಪೆಪ್ಪರ್
ಕುಟುಂಬದ ಹೆಸರು : ಮಿರ್ಟೇಸಿ
ವೈಜ್ಞಾನಿಕ ಹೆಸರು : ಪಿಮೆಂಟ ಡಿಯೋಇಕಾ (ಎಲ್.) ಮೆರ್.ಲ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಫೆಬ್ರವರಿ ಯಿಂದ ಮಾರ್ಚ್
ಹಣ್ಣಾಗುವ ಅವಧಿ: ಏಪ್ರಿಲ್ ನಿಂದ ಜೂನ್
ಮೂಲ: ವೆಸ್ಟ್ ಇಂಡೀಸ್, ಮಧ್ಯ ಅಮೇರಿಕಾ

ಉಪಯೋಗಗಳು

.ಆಲ್ ಸ್ಪೈಸ್ (ಮಸಾಲೆ) ಕೆರಿಬಿಯನ್ ಪಾಕಪದ್ಧತಿಯ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ.ಸಾಮಾನ್ಯವಾಗಿ ಜಮೈಕಾದ ಜರ್ಕ್ ಧೂಮಪಾನಕ್ಕೆ ಹೆಚ್ಚಾಗಿ ಈ ಮರವನ್ನು ಬಳಸಲಾಗುತ್ತದೆ. ಜೊತೆಗೆ, 'ಪಿಮೆಂಟೊ' ಎಂಬ ಹೆಸರಿನಲ್ಲಿ, ಇದನ್ನು ಜಮೈಕಾದ ಜರ್ಕ್ ಮಸಾಲೆ ಒಗ್ಗರಣೆಯಲ್ಲಿಯೂ ಬಳಸಲಾಗುತ್ತದೆ. ವೆಸ್ಟ್ ಇಂಡೀಸ್‌ನಲ್ಲಿ, "ಪಿಮೆಂಟೊ ಡ್ರಾಮ್" ಎಂಬ ಹೆಸರಿನ ಒಂದು ಆಲ್ ಸ್ಪೈಸ್ (ಮಸಾಲೆ) ಮದ್ಯವನ್ನು ಉತ್ಪಾದಿಸಲಾಗುತ್ತದೆ.

ವಿವರಣೆ

20 ಮೀ ನಷ್ಟು ಎತ್ತರವಿರುವ, ನಿತ್ಯಹರಿದ್ವರ್ಣ ಮರ. ಮೃದು ತುಪ್ಪಳ ಮತ್ತು ಗ್ರಂಥಿಗಳಿರುವ ಎಳೆಯ ಕಿರುಕೊಂಬೆಗಳನ್ನು ಹೊಂದಿರುತ್ತದೆ, ಎಲೆಗಳು , ಒಬ್ಲಾಂಗ್ - ಎಲಿಪ್ಟಿಕ್, ಎಲಿಪ್ಟಿಕ್ ಅಥವಾ ಎಲಿಪ್ಟಿಕ್ - ಲ್ಯಾನ್ಸಿಲೇಟ್, ಆಕಾರದಲ್ಲಿದ್ದು, ಸುವಾಸನೆಯಿಂದ ಕೂಡಿರುತ್ತವೆ. ರೋಮರಹಿತವಾಗಿರುತ್ತವೆ ಅಥವಾ ಬೆಳೆಯುತ್ತಾ ರೋಮರಹಿತವಾಗುತ್ತವೆ (ಗ್ಲಾಬ್ರೆಸೆಂಟ್), ಬುಡ ಚೂಪು ಅಥವಾ ದುಂಡು, ದುಂಡಾಗಿದ್ದು ಕ್ರಮೇಣ ತುದಿಯಲ್ಲಿ ಚೂಪಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಸಂಕೀರ್ಣ ಪುಷ್ಪ ಗುಚ್ಛ (ಪ್ಯಾನಿಕಲ್). ಸಣ್ಣ ಬಿಳಿ ಬಣ್ಣದ ಹೂಗಳು ಉಭಯಲಿಂಗಿಗಳಾಗಿರುತ್ತವೆ, 4-ಭಾಗಗಳಿರುವ (ಮೆರಸ್), ಈ ಹೂವುಗಳು ಮೃದುತುಪ್ಪಳವನ್ನು ಹೊಂದಿರುತ್ತವೆ. ಹಣ್ಣು ಉಪಗೋಳಾಕಾರದಿಂದ ಎರಡೂ ತುದಿ ಚಪ್ಪಟೆಯಾಗಿರುವ ಬೆರ್ರಿ, ದಟ್ಟವಾಗಿ ಉಬ್ಬುಮೈಯ(ಕಾನ್ವೆಕ್ಸ್) ಗ್ರಂಥಿಗಳಿಂದ ಒತ್ತಾಗಿ ಮುಚ್ಚಲ್ಪಟ್ಟಿರುತ್ತದೆ, ಒಣಗಿದಾಗ ಪರಿಮಳಭರಿತವಾಗುತ್ತದೆ. ಮೂತ್ರಪಿಂಡ (ರೆನಿಫಾರ್ಮ್) ದಾಕಾರದ 2 ಬೀಜಗಳಿರುತ್ತವೆ.