ಪಿಥೆಸೆಲ್ಲೋಬಿಯಮ್ ಡ್ಯೂಲ್ಸ್ (ರಾಕ್ಸ್ಬಿ.) ಬೆಂತ್.

ಕನ್ನಡದ ಹೆಸರು : ಸೀಮೆ ಹುಣಸೆ
ಸಾಮಾನ್ಯ ಹೆಸರು : ಮದ್ರಾಸ್ ಥಾರ್ನ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಪಿಥೆಸೆಲ್ಲೋಬಿಯಮ್ ಡ್ಯೂಲ್ಸ್ (ರಾಕ್ಸ್ಬಿ.) ಬೆಂತ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಡಿಸೆಂಬರ್ ನಿಂದ ಫೆಬ್ರವರಿ
ಹಣ್ಣಾಗುವ ಅವಧಿ: ಫೆಬ್ರವರಿ ಇಂದ ಮಾರ್ಚ್
ಮೂಲ: ಮೆಕ್ಸಿಕೋ

ಉಪಯೋಗಗಳು

ಗುಹ್ಯರೋಗದ ಹುಣ್ಣುಗಳಿಂದ ಆಗುವ ನೋವನ್ನು ನಿವಾರಿಸಲು ಎಲೆಗಳನ್ನು ಪ್ಲ್ಯಾಸ್ಟರ್ ಆಗಿ ಬಳಸಬಹುದು ಮತ್ತು ಸೆಳೆತವನ್ನು ಸಹ ನಿವಾರಿಸಬಹುದು.ಕೆಲವು ಉರಿಯೂತಗಳಿಂದ ಉಂಟಾಗುವ ಸ್ನಾಯುವಿನ ಊತಗಳಿಗೆ, ಎಲೆಗಳಿಂದ ಮಾಡಿದ ಮಿಶ್ರಣವನ್ನು (ಪೇಸ್ಟ್ ಅನ್ನು) ಆ ಜಾಗದ ಮೇಲೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಅತಿಸಾರ ಮತ್ತು ಭೇದಿಗಳಿಗೆ ಬೇರಿನ ತೊಗಟೆ ಉತ್ತಮ ಔಷಧವಾಗಿದೆ. ಕೆಮ್ಮಿದಾಗ ರಕ್ತ ಕಾಣಿಸಿಕೊಳ್ಳುವ (ಹಿಮೋಪ್ಟಿಸಿಸ್) ಸಮಸ್ಯೆ ಇದ್ದಾಗ ರಕ್ತದ ಹರಿವನ್ನು ನಿಲ್ಲಿಸಲು ಹಣ್ಣಿನ ತಿರುಳನ್ನು ಬಾಯಿಯ ಮೂಲಕ ಸೇವಿಸಲಾಗುತ್ತದೆ. ಎದೆಯಲ್ಲಿ ಕಫ ಕಟ್ಟಿದಾಗ ಬೀಜದ ರಸವನ್ನು ಮೂಗಿ ಮೂಲಕ ಎಳೆದುಕೊಳ್ಳಲಾಗುತ್ತದೆ ಮತ್ತು ಒಳಗಿನ ಹುಣ್ಣುಗಳಿಗೆ ಪುಡಿಮಾಡಿದ ಬೀಜದ ಪುಡಿಯನ್ನು ಸೇವಿಸಲಾಗುತ್ತದೆ.

ವಿವರಣೆ

10-15 ಮೀ ಎತ್ತರವಿರುವ ನಿತ್ಯಹರಿದ್ವರ್ಣ ಮರಗಳು. ಕೊಂಬೆಗಳು ಜೋತಾಡುತ್ತಿರುತ್ತವೆ; ಕಿರುಕೊಂಬೆಗಳು ಮುಳ್ಳಿನಂತಹ ಕಾವಿನೆಲೆಗಳನ್ನು ಹೊಂದಿರುತ್ತವೆ.. ಗರಿಯಂತಹ (ಪಿನ್ನೇಟ್)ಎಲೆಗಳು , ಆಲ್ಟರ್ನೇಟ್ ಆಗಿರುತ್ತವೆ, 1 ಜೋಡಿ ಉಪಪರ್ಣಗಳಿರುತ್ತವೆ; ಉಪಪರ್ಣಗಳು ಮತ್ತು ಚಿಗುರೆಲೆಗಳ ಸಂಧಿಯಲ್ಲಿ ಗ್ರಂಥಿಗಳಿರುತ್ತವೆ; ಪ್ರತಿ ಉಪಪರ್ಣಕ್ಕೆ 1 ಜೋಡಿಯಂತೆ, ಎಲಿಪ್ಟಿಕ್ ಅಥವಾ ಒಬೊವೇಟ್ – ಎಲಿಪ್ಟಿಕ್ ಆಕಾರದ, ತೊಟ್ಟಿಲ್ಲದ ಚಿಗುರೆಲೆಗಳಿರುತ್ತವೆ, ರೋಮರಹಿತವಾಗಿರುತ್ತವೆ, ಬುಡ ಸ್ವಲ್ಪ ಓರೆಯಾಗಿರುತ್ತದೆ, ತುದಿ ಮೊಂಡು ಅಥವಾ ಕಚ್ಚುಳ್ಳದ್ದಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿಗಳು ಜೋತಾಡುವ ರೀತಿಯಲ್ಲಿದ್ದು, ತುದಿಯ ಸಂಯುಕ್ತ ಪುಷ್ಪಗುಚ್ಛಗಳಾಗಿ ಒಟ್ಟಾಗಿರುತ್ತವೆ. ದ್ವಿಲಿಂಗಿ ಹೂವುಗಳು, ಹಸಿರು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು ಹಸಿರು ಅಥವಾ ಕೆಂಪು-ಕಂದು ಬಣ್ಣದ, )ಬಿಳಿಯಿಂದ ಗುಲಾಬಿ ಬಣ್ಣದ ತಿರುಳ ರಸಲೆ (ಅರಿಲ್) ಇರುವಂತಹ, ಗುಂಡಗೆ ಸುತ್ತಿಕೊಂಡಿರುವ ಒಂದು ಬೀಜಕೋಶ (ಪಾಡ್). ಗಾಢ ಕಂದು ಬಣ್ಣದ, ಬದಿಯಲ್ಲಿ ಬೇಳೆಗಳಿರುವಂತಹ (ಪ್ಲುರೋಗ್ರಾಮ್). ಅಂಡಾಕಾರ-ಎಲಿಪ್ಸಾಯ್ಡ್ ಆಕಾರದ, ಗಟ್ಟಿಯಾದ 5 -9 ಹೊಳೆಯುವ ಬೀಜಗಳಿರುತ್ತವೆ..