ಅನೋನಾ ಮುರಿಕಾಟಾ ಎಲ್.

ಕನ್ನಡದ ಹೆಸರು : ಮುಲ್ಲು ರಾಮ ಫಲ
ಸಾಮಾನ್ಯ ಹೆಸರು : Soursop, Graviolaಸೋರ್ಸಾಪ್, ಗ್ರಾವಿಯೋಲಾ
ಕುಟುಂಬದ ಹೆಸರು : ಅನೋನೇಸಿ
ವೈಜ್ಞಾನಿಕ ಹೆಸರು : ಅನೋನಾ ಮುರಿಕಾಟಾ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯ ಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಉಷ್ಣವಲಯದ ಅಮೇರಿಕಾ, ಕೆರಿಬಿಯನ್

ಉಪಯೋಗಗಳು

ತಿರುಳನ್ನು ಹಣ್ಣಿನ ಮಕರಂದ, ಸ್ಮೂಥಿಗಳು, ಹಣ್ಣಿನ ರಸ ಪಾನೀಯಗಳು, ಹಾಗೆಯೇ ಮಿಠಾಯಿಗಳು, ಪಾನಕಗಳು ಮತ್ತು ಐಸ್ ಕ್ರೀಮ್ ಸುವಾಸನೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಚಹಾವನ್ನು ತಯಾರಿಸಲು ಎಲೆಗಳನ್ನು ಸಾಮಾನ್ಯವಾಗಿ ಕುದಿಸಲಾಗುತ್ತದೆ. ಇದು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಉರಿಯೂತವನ್ನು ಗುಣಪಡಿಸುವ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಒಣಗಿದ ಎಲೆಗಳ ಪುಡಿ ಮತ್ತು ತಾಜಾ ಎಲೆಗಳ ರಸವು ಕ್ರಿಮಿಕೀಟಗಳನ್ನು ನಾಶಮಾಡಲು ಉಪಯುಕ್ತವಾಗಿದೆ. ಬೀಜಗಳಿಂದ ಮಾಡಿದ ಪುಡಿ ಅಥವಾ ಎಣ್ಣೆಯನ್ನು ಹೇನು ಮತ್ತು ತಿಗಣೆಗಳನ್ನು ಕೊಲ್ಲಲು ಬಳಸಲಾಗುತ್ತದೆ. ಎಲ್ಲಾ ಮರದ ಭಾಗಗಳು ಕೀಟನಾಶಕ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ಮೀನುಗಳನ್ನು ಕೊಲ್ಲಲು ಹಣ್ಣುಗಳನ್ನು ಬೇಟ್ ಆಗಿ ಬಳಸಬಹುದು..

ವಿವರಣೆ

.10 ಮೀ ಎತ್ತರವಿರುವ ಚಿಕ್ಕ ನಿತ್ಯಹರಿದ್ವರ್ಣ ಮರ. ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿರುತ್ತವೆ, ಒಬ್ಲಾಂಗ್ -ಒವೇಟ್, ಮೇಲೆ ಕಡು ಹಸಿರು ಮತ್ತು ಮೇಲೆ ರೋಮರಹಿತವಾಗಿರುತ್ತವೆ, ಕೆಳಗೆ ತೆಳು ಹಸಿರು ಮತ್ತು ಸ್ವಲ್ಪ ಮೃದುವಾಗಿರುತ್ತವೆ, ಬುಡ ಬೆಣೆಯಾಕಾರದಿಂದ ದುಂಡಾಗಿರುತ್ತದೆ, ತುದಿ ಅಕ್ಯೂಟ್ - ಒಬ್ಟ್ಯೂಸ್. ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿದ್ದು, 1 ರಿಂದ 2 ಹೂವುಗಳಿರುತ್ತವೆ. ದ್ವಿಲಿಂಗಿ ಹೂವಿನಲ್ಲಿ, ದಪ್ಪನಾದ, ಹಳದಿ ಬಣ್ಣದ, ಮೃದುವಾದ 6 ದಳಗಳಿರುತ್ತವೆ. ಹಣ್ಣು ಕಡು ಹಸಿರು, ಒವಾಯಿಂಡ್ , ಎಕಿನೇಟ್ ಆಗಿರುತ್ತದೆ, ತಿರುಳು ಬಿಳಿ, ರಸಭರಿತ ಮತ್ತು ಪರಿಮಳಯುಕ್ತವಾಗಿರುತ್ತದೆ. ಬೀಜಗಳು ಕಂದು ಬಣ್ಣದ್ದಾಗಿರುತ್ತವೆ.