ಪ್ಲುಮೆರಿಯಾ ಒಬ್ಟುಸಾ ಎಲ್.

ಕನ್ನಡದ ಹೆಸರು :
ಸಾಮಾನ್ಯ ಹೆಸರು : ಟೆಂಪಲ್ ಟ್ರೀ
ಕುಟುಂಬದ ಹೆಸರು : ಅಪೊಸಿನೇಸಿ
ವೈಜ್ಞಾನಿಕ ಹೆಸರು : ಪ್ಲುಮೆರಿಯಾ ಒಬ್ಟುಸಾ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಮೆಕ್ಸಿಕೋ, ದಕ್ಷಿಣ ಅಮೇರಿಕಾ

ಉಪಯೋಗಗಳು

.ಸಾಮಾನ್ಯವಾಗಿ ಈ ಸಸ್ಯವನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ, ಮುಖ್ಯವಾಗಿ ಅದರ ಹೂವುಗಳಿಗಾಗಿಯೇ ಅದನ್ನು ಬೆಳೆಯಲಾಗುತ್ತದೆ. ಕಾಂಬೋಡಿಯಾದಲ್ಲಿ ಹೂವುಗಳನ್ನು ಕೊರಳಮಾಲೆ ಮಾಡಲು ಮತ್ತು ದೇವತೆಗಳಿಗೆ ಅರ್ಪಿಸಲು ಬಳಸಲಾಗುತ್ತದೆ. ಆ ದೇಶದಲ್ಲಿ ಬಳಸಲಾಗುವ ಸಾಂಪ್ರದಾಯಿಕ ಔಷಧದಲ್ಲಿ, ತೊಗಟೆಯ ಕಷಾಯವನ್ನು ವಿವಿಧ ಪ್ರಮಾಣದಲ್ಲಿ ವಿರೇಚಕವಾಗಿ ಅಥವಾ ದ್ರವಶೋಥ (ಎಡಿಮಾದ) ದ ಚಿಕಿತ್ಸೆಯಲ್ಲಿ ನೀಡಲಾಗುತ್ತದೆ.

ವಿವರಣೆ

6 ಮೀ ವರೆಗೆ ಎತ್ತರವಿರುವ, ಬಹುತೇಕ ಸದಾಹಸಿರಾಗಿರುವ ಸಣ್ಣಮರ. ಎಳೆಯ ಕೊಂಬೆಗಳು ನುಣ್ಣಗೆ ದುಂಡಾಗಿರುತ್ತವೆ. ಒಬೊವೇಟ್ ನಿಂದ ಒಬ್ಲಾಂಗ್ – ಒಬೊವೇಟ್ ರೀತಿಯಲ್ಲಿರುವ ಎಲೆಗಳು ಸರಳವಾಗಿರುತ್ತವೆ, ಚರ್ಮದಂತಿರುವ ಎಲೆಗಳು , ರೋಮರಹಿತವಾಗಿರುತ್ತವೆ, ಬುಡ ಸೂಕ್ಷ್ಮವಾಗಿ ಬೆಣೆಯಾಕಾರದಲ್ಲಿರುತ್ತದೆ, ಕೆಲವೊಮ್ಮೆ ಚೂಪು ಅಥವಾ ದುಂಡಾಗಿರುತ್ತದೆ, ತುದಿ ದುಂಡಾಗಿರುವುದರಿಂದ ಕಚ್ಚುಳ್ಳದ್ದಾಗಿರುತ್ತದೆ ಮತ್ತು ಅನೇಕ ಬಾರಿ ಚೂಪಾದ ಕುರುಚಲಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಸಂಯುಕ್ತ ಪುಷ್ಪ (ಸೈಮ್). ದ್ವಿಲಿಂಗಿ ಹೂವುಗಳು, ಪರಿಮಳಭರಿತವಾಗಿರುತ್ತವೆ, ಹೂವುಗಳು ಬಿಳಿಯಾಗಿದ್ದು, ಕಂಠದಭಾಗ ಹಳದಿಯಾಗಿರುತ್ತದೆ. ಹಣ್ಣು 10-22 ಸೆಂ.ಮೀ ಉದ್ದದ, ಹಲವಾರು ಬೀಜಗಳಿರುವ, ಒಂದುಕಡೆ ಮಾತ್ರ ತೆರೆದುಕೊಳ್ಳುವ ಫಲ (ಫಾಲಿಕಲ್).