ಪ್ಲುಮೆರಿಯಾ ರುಬ್ರಾ ಎಲ್.

ಕನ್ನಡದ ಹೆಸರು : ಕೆಂಪು ಕೊಲಬೆ
ಸಾಮಾನ್ಯ ಹೆಸರು : ರೆಡ್ ಫ್ರಾಂಗಿಪಾನಿ
ಕುಟುಂಬದ ಹೆಸರು : ಅಪೊಸಿನೇಸಿ
ವೈಜ್ಞಾನಿಕ ಹೆಸರು : ಪ್ಲುಮೆರಿಯಾ ರುಬ್ರಾ
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಮೇ ಮತ್ತು ಜುಲೈ - ಅಕ್ಟೋಬರ್
ಹಣ್ಣಾಗುವ ಅವಧಿ: -
ಮೂಲ: ಮೆಕ್ಸಿಕೋ, ಮಧ್ಯ ಅಮೇರಿಕಾ, ಕೊಲಂಬಿಯಾ

ಉಪಯೋಗಗಳು

ಸಸ್ಯವು ಆಂಟಿಫಂಗಲ್, ಆಂಟಿವೈರಲ್, ನೋವು ನಿವಾರಕ, ಸೆಟೆತ ನಿರೋಧಕ (ಆಂಟಿಸ್ಪಾಸ್ಮೊಡಿಕ್) ಮತ್ತು ಹೈಪೊಗ್ಲಿಸಿಮಿಕ್ ಎಂದು ತಿಳಿದು ಬಂದಿದೆ. ಸಸ್ಯವು ದೇಹದ ಉಸಿರಾಟ ಮತ್ತು ಪ್ರತಿರಕ್ಷಣಾ ಕಾರ್ಯಗಳ ಜೊತೆಗೆ ಜೀರ್ಣಕ್ರಿಯೆ ಮತ್ತು ವಿಸರ್ಜನೆಯನ್ನು ಉತ್ತಮಗೊಳಿಸುತ್ತದೆ ಎಂದು ತಿಳಿದುಬಂದಿದೆ. ಸಸ್ಯದ ರಸವನ್ನು ಅನುಲೋಮ (ಲ್ಯಾಕ್ಸೆಟೀವ್ )ವಾಗಿ ಬಳಸಲಾಗುತ್ತದೆ ಮತ್ತು ಹೊಟ್ಟೆ ಉಬ್ಬುರ ಮತ್ತು ಹೊಟ್ಟೆನೋವುಗಳಿಗೆ ಪರಿಹಾರ ನೀಡುತ್ತದೆ. ತೊಗಟೆಯಲ್ಲಿ ವಿರೇಚಕ ಗುಣವಿದೆ ಎಂದು ಹೇಳಲಾಗುತ್ತದೆ ಮತ್ತು ಇದನ್ನು ಲೈಂಗಿಕ ಹುಣ್ಣುಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಕರುಳಿನ ಚಲನೆ, ಮೂತ್ರದ ಹರಿವನ್ನು ಸುಧಾರಿಸಲು ಮತ್ತು ವಾಯು (ಗ್ಯಾಸ್) ಮತ್ತು ಕಫವನ್ನು ನಿಯಂತ್ರಿಸಲು, ಹೂವುಗಳನ್ನು ನೀರಿನಲ್ಲಿ ಅಥವಾ ರಸದಲ್ಲಿ ಕುದಿಸಿ ಪಚ್ಚಡಿ ( ಸಲಾಡ್) ತಯಾರಿಸಿ, ಸೇವಿಸಬಹುದು.ಹೂವುಗಳನ್ನು ಅಸ್ತಮಾ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ

ವಿವರಣೆ

2-8 ಮೀ ಎತ್ತರವಿರುವ,ಪತನಶೀಲ ಪೊದೆಸಸ್ಯ ಅಥವಾ ಸಣ್ಣ ಮರ. ತೊಗಟೆ ತೆಳುವಾಗಿದ್ದು, ಬೂದು ಬಣ್ಣದಲ್ಲಿರುತ್ತದೆ. ಒಬ್ಲಾಂಗ್ -ಲ್ಯಾನ್ಸಿಲೇಟ್‌ನಿಂದ ಒವೇಟ್ ಆಕಾರದಲ್ಲಿರುವ, ಎಲೆಗಳು ಸರಳವಾಗಿರುತ್ತವೆ. ರೋಮರಹಿತವಾಗಿದ್ದು , ಕೆಳಗೆ ಒತ್ತಾಗಿಲ್ಲದ ಮೃದುತುಪ್ಪಳವಿರುತ್ತದೆ, ಬುಡ ಚೂಪಾಗಿರುತ್ತದೆ, ತುದಿ ಮೊನಚಾಗಿದ್ದು ಕ್ರಮೇಣ ಸಪೂರವಾಗುತ್ತಾ ಚೂಪಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ಸಂಯುಕ್ತಪುಷ್ಪ (ಸೈಮ್). ಬಿಳಿ, ಹಳದಿ, ಗುಲಾಬಿ ಬಣ್ಣದ ಅಥವಾ ಈ ಬಣ್ಣಗಳು ಬೆರೆತ ದ್ವಿಲಿಂಗಿ ಹೂವುಗಳಿರುತ್ತವೆ. ಹಣ್ಣು 9-30 ಸೆಂ.ಮೀ ಉದ್ದದ ಕೋಶಕ (ಫಾಲಿಕಲ್).