ಮೊನೂನ್ ಲಾಂಗಿಫೋಲಿಯಮ್ (ಸೋನ್.) ಬಿ. ಕ್ಸು & ಆರ್.ಎಂ.ಕೆ. ಸೌಂಡರ್ಸ್

ಕನ್ನಡದ ಹೆಸರು : ಉಬ್ಬಿನ ಮರ, ಕಂಬದ ಮರ
ಸಾಮಾನ್ಯ ಹೆಸರು : ಫಾಲ್ಸ್ ಅಶೋಕ
ಕುಟುಂಬದ ಹೆಸರು : ಅನ್ನೊನೇಸಿ
ವೈಜ್ಞಾನಿಕ ಹೆಸರು : ಮೊನೂನ್ ಲಾಂಗಿಫೋಲಿಯಮ್ (ಸೋನ್.) ಬಿ. ಕ್ಸು & ಆರ್.ಎಂ.ಕೆ. ಸೌಂಡರ್ಸ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಮೇ
ಹಣ್ಣಾಗುವ ಅವಧಿ: ಜುಲೈ- ಸೆಪ್ಟೆಂಬರ್
ಮೂಲ: ಭಾರತ ಮತ್ತು ಶ್ರೀಲಂಕಾ

ಉಪಯೋಗಗಳು

ಚಂದ ಕಾಣಲು ಹಬ್ಬ ಹರಿದಿನಗಳಲ್ಲಿ ಎಲೆಗಳನ್ನು ಅಲಂಕಾರಕ್ಕಾಗಿ ಬಳಸುತ್ತಾರೆ. ಭಾರತದಲ್ಲಿರುವ ಉದ್ಯಾನವನಗಳಲ್ಲಿ ಈ ಮರವೇ ಒಂದು ಕೇಂದ್ರಬಿಂದುವಾಗಿದೆ. ಮರವನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಬಹುದು ಮತ್ತು ಬೇಕೆನಿಸಿದ ಗಾತ್ರದಲ್ಲಿ ಬೆಳೆಸಬಹುದು. ನೇರವಾದ, ಹಗುರವಾದ ಮತ್ತು ಬಾಗಿದರೂ ಮುರಿಯದಂತಹ, ನಮ್ಯವಾದ ಕಾಂಡಗಳನ್ನು ನೌಕಾಯಾನ ಹಡಗುಗಳ ಪಟದ ಕಂಬಗಳ (ಮಾಸ್ಟ್ ಗಳ) ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು. ಇದರ ಮರವನ್ನು ಹೆಚ್ಚಾಗಿ ಪೆನ್ಸಿಲ್‌ಗಳು, ಪೆಟ್ಟಿಗೆಗಳು, ಬೆಂಕಿಕಡ್ಡಿಗಳು ಮುಂತಾದ ಸಣ್ಣ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಬೀಜದ ಎಣ್ಣೆಯಲ್ಲಿ ಇತರ ಕ್ರಿಯಾಶಕ್ತಿಗಳಲ್ಲದೆ, ಆಂಟಿ-ಆಕ್ಸಿಡೆಂಟ್, ಆಂಟಿ-ಲಿಪೊಆಕ್ಸಿಜೆನೇಸ್ ಮತ್ತು ಆಂಟಿಮೈಕ್ರೊಬಿಯಲ್ (ವಿವಿಧ ಸೂಕ್ಷ್ಮಜೀವಿಗಳ ತಳಿಗಳ ವಿರುದ್ಧ) ಗುಣಗಳನ್ನು ಹೊಂದಿದೆ ಎಂದು ದೃಢವಾಗಿದೆ.

ವಿವರಣೆ

.20 ಮೀ ನಷ್ಟು ಎತ್ತರವಿರುವ ನಿತ್ಯಹರಿದ್ವರ್ಣ ಮರಗಳು; ನುಣ್ಣಗಿರುವ ಕೊಂಬೆಗಳ ಮೇಲೆ ಪಟ್ಟಿಗಳಿರುತ್ತವೆ, ಚಿಕ್ಕದಾಗಿದ್ದಾಗ ಸ್ವಲ್ಪ ಮೃತುಪ್ಪಳವಿರುತ್ತದೆ, ಶೀಘ್ರದಲ್ಲೇ ಬೆಳೆದ ಮೆಲೆ ರೋಮರಹಿತವಾಗಿರುತ್ತವೆ. ಸರಳವಾದ ಎಲೆಗಳು, ಆಲ್ಟರ್ನೇಟಾಗಿ ಜೋಡಿಸಲ್ಪಟ್ಟಿರುತ್ತವೆ, ಒವೇಟ್ –ಒಬ್ಲಾಂಗ್ ನಿಂದ ಒವೇಟ್ –ಲ್ಯಾನ್ಸಿಲೇಟ್ ಆಕಾರದ ಎಲೆಗಳು, ಗಟ್ಟಿ ಪೊರೆಯಂತಿದ್ದು ತೆಳುವಾದ ಚರ್ಮದಂತಾಗುತ್ತವೆ, ರೋಮರಹಿತವಾಗುತ್ತವೆ, ಅಬಾಕ್ಸಿಯಲಿ ತಿಳಿ ಬಣ್ಣದಲ್ಲಿದ್ದು, ಅಡಾಕ್ಸಿಯಾಲಿ ಹೊಳೆವ ಗಾಢ ಹಸಿರು ಬಣ್ಣದಲ್ಲಿರುತ್ತವೆ, ಬುಡ ಬೆಣೆಯಾಕಾರ,ಮೊಂಡು ಅಥವಾ ದುಂಡಗಿರುತ್ತದೆ, ತುದಿ ಕ್ರಮೇಣ ಚೂಪಾಗುತ್ತದೆ, ಅಂಚು ಅಲೆಯಂತಿರುತ್ತದೆ. ಹೂವಿನ ಜೊಂಪೆ (ರೇಸ್‌ಮೋಸ್) ಅಥವಾ ಹೂಕೊಡೆಯಂತಿರುವ (ಅಂಬೆಲ್ಲಿಫಾರ್ಮ್), ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿದ್ದು, ಆಕರ್ಷಕವಾಗಿರುತ್ತವೆ ಮತ್ತು ಸ್ವಲ್ಪ ಲೋಲಾಕಿನಂತೆ ನೇತಾಡುತ್ತಿರುತ್ತವೆ, ದ್ವಿಲಿಂಗಿ ಹೂವುಗಳು, ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು, ಗೋಳಾಕಾರ ಅಥವಾ ದೀರ್ಘವೃತ್ತದಾಕಾರದಲ್ಲಿರುವ ಒಂದು ಬೆರ್ರಿ. ಬೀಜ ತೆಳು ಕಂದು ಬಣ್ಣದಲ್ಲಿರುತ್ತದೆ, ಅಂಡಾಕಾರದಲ್ಲಿರುವ, ಸಾಮಾನ್ಯವಾಗಿ ಸಾಮಾನ್ಯವಾಗಿ ಒಂದು ಕೊರಕಲು ಇರುತ್ತದೆ.