ಪೆಟ್ರೊಕಾರ್ಪಸ್ ಮಾರ್ಸುಪಿಯಮ್ ರಾಕ್ಸ್ಬಿ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಮಲಬಾರ್ ಕಿನೋ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಪೆಟ್ರೊಕಾರ್ಪಸ್ ಮಾರ್ಸುಪಿಯಮ್ ರಾಕ್ಸ್ಬಿ
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಅಳಿವಿನ ಅಪಾಯದಲ್ಲಿದೆ
ಹೂಬಿಡುವ ಅವಧಿ: ಸೆಪ್ಟೆಂಬರ್ - ಅಕ್ಟೋಬರ್
ಹಣ್ಣಾಗುವ ಅವಧಿ: ಸೆಪ್ಟೆಂಬರ್ - ಅಕ್ಟೋಬರ್
ಮೂಲ: ಭಾರತ

ಉಪಯೋಗಗಳು

.ತೊಗಟೆಗೆ ಪೆಟ್ಟಾದಾಗ ಜಿನಿಗುವ ರಾಳ ಸ್ರಾವನಿರೋಧಕವಾಗಿದೆ. ದೀರ್ಘಕಾಲದ ಅತಿಸಾರ ಮತ್ತು ಗ್ಯಾಸ್ಟ್ರಿಕ್ ಸೋಂಕು ಮತ್ತು ಹೆಗ್ಗರುಳಿರಿತ (ಕೊಲೈಟಿಸ್‌) ದಿಂದ ಉಂಟಾಗುವ ಉಪದ್ರವಕ್ಕೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.ಇದರ ವಾಸನೆ ಅಹಿತಕರವಾಗಿದ್ದರೂ ಸಹ, ಇದು ಒಂದು ಉತ್ತಮ ವದನಕ್ಷಾಲಕ (ಮೌತ್ವಾಶ್) ಮತ್ತು ಗಂಡೂಕ್ಷ (ಗಾರ್ಗ್ಲ್) ವಾಗಿ ಕೆಲಸ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಹಲ್ಲುನೋವಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ ಮತ್ತು ಯೋನಿಯ ಒಸರುವಿಕೆಗೆ ಚಿಕಿತ್ಸೆ ನೀಡಲು ಇದನ್ನು ಮಾರ್ಜಕಧಾರ (ಡೌಚ್)ವಾಗಿ ಬಳಸಲಾಗುತ್ತದೆ. ಚರ್ಮದ ತೊಂದರೆಗಳ ಚಿಕಿತ್ಸೆಯಲ್ಲಿ ರಾಳವನ್ನು ತೊಂದರೆಯಿರುವ ಜಾಗದ ಮೇಲೆ ಹಚ್ಚಲಾಗುತ್ತದೆ.

ವಿವರಣೆ

30 ಮೀ ನಷ್ಟು ಎತ್ತರವಿರುವ, ಪತನಶೀಲ ಮರಗಳು, ತೊಗಟೆ 10-15 ಮಿಮೀ ಇದ್ದು, ಮೇಲ್ಮೈ ಬೂದು ಅಥವಾ ಬೂದು-ಕಪ್ಪು ಬಣ್ಣದಲ್ಲಿರುತ್ತದೆ, ಒರಟಾಗಿರುವ, ತೊಗಟೆಯಲ್ಲಿ ಆಳವಾದ ಉದ್ದನೆಯ ಸೀಳುಗಳಿರುತ್ತವೆ, ನಾರಿನಂತಿರುವ ತೊಗಟೆಯ ಸುಲಿದ ಚಕ್ಕೆಗಳು ಚಿಕ್ಕದಾಗಿದ್ದು, ಒಂದೇ ಸಮನಾಗಿರುವುದಿಲ್ಲ ; ಪ್ರಜ್ವಲವಾದ ಗುಲಾಬಿ ಬಣ್ಣದಲ್ಲಿರುತ್ತವೆ:ಮರದಿಂದ ಸ್ರವಿಸುವ ವಸ್ತು ಕೆಂಪು – ರಕ್ತದ ಬಣ್ಣದಲ್ಲಿರುತ್ತದೆ. ಅಸಮಗರಿರೂಪದ ಎಲೆಗಳು, ಆಲ್ಟರ್ನೇಟಾಗಿ ಜೋಡಿಸಲ್ಪಟ್ಟಿರುತ್ತವೆ, ಉಬ್ಬಿದ ಬುಡವಿರುತ್ತದೆ (ಪಲ್ವಿನೇಟ್), 5-7 ಚಿಗುರೆಲೆಗಳಿರುತ್ತವೆ,ಆಲ್ಟರ್ನೇಟಾಗಿ ಜೋಡಿಸಲ್ಪಟ್ಟಿರುತ್ತವೆ, ಎಲೆಯ ಹಾಳೆ (ಲ್ಯಾಮಿನಾ) ಎಲಿಪ್ಟಿಕ್ –ಒಬ್ಲಾಂಗ್ , ಒಬ್ಲಾಂಗ್ – ಒವೇಟ್ ಅಥವಾ ಆಯತಾಕಾರದಲ್ಲಿದ್ದು, ರೋಮರಹಿತವಾಗಿರುತ್ತದೆ, ಬುಡ ಮೊಂಡು ಅಥವಾ ಚೂಪಾಗಿರುತ್ತದೆ, ತುದಿ ಮೊಂಡು ಮತ್ತು ಕಚ್ಚುಳ್ಳದ್ದಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ತುದಿ ಅಥವಾ ಅಕ್ಷಾಕಂಕುಳಿನ ಒಂದು ಸಂಯುಕ್ತ ಪುಷ್ಪ (ಸೈಮ್). ದ್ವಿಲಿಂಗಿ ಹೂವುಗಳು, ಹಳದಿ ಬಣ್ಣದಲ್ಲಿರುತ್ತವೆ.ಹಣ್ಣು ಒಂದು ಬೀಜ ಕೋಶ (ಪಾಡ್), ಗೋಳಾಕಾರ – ಮೂತ್ರಪಿಂಡದಾಕಾರದಲ್ಲಿದ್ದು , ಅಗಲವಾದ ರೆಕ್ಕೆಗಳನ್ನು ಹೊಂದಿರುತ್ತದೆ; ಸ್ವಲ್ಪ ಮೂತ್ರಪಿಂಡದಾಕಾರದಲ್ಲಿರುವ ಒಂದು ಬೀಜವಿರುತ್ತದೆ.