ಪ್ಟೆರೋಸಿಂಬಿಯಮ್ ಟಿಂಕ್ಟೋರಿಯಮ್ (ಬ್ಲಾಂಕೊ) ಮೆರ್ರ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ವಿಂಗ್ಡ್ ಬೂಟ್ ಟ್ರೀ
ಕುಟುಂಬದ ಹೆಸರು : ಮಾಲ್ವೇಸೀ
ವೈಜ್ಞಾನಿಕ ಹೆಸರು : ಪ್ಟೆರೋಸಿಂಬಿಯಮ್ ಟಿಂಕ್ಟೋರಿಯಮ್ (ಬ್ಲಾಂಕೊ) ಮೆರ್ರ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಜನವರಿ - ಮೇ
ಹಣ್ಣಾಗುವ ಅವಧಿ: ಜನವರಿ - ಮೇ
ಮೂಲ: ಪೆರು

ಉಪಯೋಗಗಳು

ತೊಗಟೆಯಿಂದ ತೆಗೆದ ನಾರಿನಿಂದ ಹಗ್ಗವನ್ನು ತಯಾರಿಸಲಾಗುತ್ತದೆ. ಹತ್ತಿ ಬಟ್ಟೆಯ ಕಪ್ಪು ಬಣ್ಣವನ್ನು ಹೆಚ್ಚಿಸಲು ತೊಗಟೆಯನ್ನು ಬಳಸಲಾಗುತ್ತದೆ.

ವಿವರಣೆ

.20 ಮೀ ಎತ್ತರವಿರುವ, ಪತನಶೀಲ ಮರಗಳು, ಬೂದು-ಕಂದು ಬಣ್ಣದ ತೊಗಟೆಯಿರುತ್ತದೆ. ಸರಳವಾದ ಎಲೆಗಳು ಆಲ್ಟರ್ನೇಟ್ ಆಗಿ ಜೋಡಿಸಲ್ಪಟ್ಟಿರುತ್ತವೆ, ಅಂಡಾಕಾರ ಅಥವಾ ಅಂಡಾಕಾರದ-ಆಯತಾಕಾರದಲ್ಲಿದ್ದು, ಚರ್ಮದಂತಿರುವ ಎಲೆಗಳು ಮೇಲೆ ರೋಮರಹಿತವಾಗಿರುತ್ತವೆ, ಕೆಳಗೆ ಮೃದುತುಪ್ಪಳವಿರುತ್ತದೆ, ಬುಡ ಹೃದಯದಾಕಾರದಲ್ಲಿರುತ್ತದೆ (ಕಾರ್ಡೇಟ್), ತುದಿ ಚೂಪಾದ ಅಥವಾ ಕ್ರಮೇಣವಾಗಿ ಚೂಪಾಗುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ತುದಿಯ ಹೂಕೊಡೆಯಂತಿರುವ ಹೂಗೊಂಚಲು. ಹಳದಿಬಣ್ಣದ ಪಾಲಿಗ್ಯಾಮಸ್ ಹೂವುಗಳಿರುತ್ತವೆ. ಹಣ್ಣು, ಬುಡದಲ್ಲಿ ಚೀಲದಂತಹ ಡುಬ್ಬವಿರುವ, ದೋಣಿಯ ಆಕಾರದ ಒಂದು ಕೋಶಕ, ಪೊರೆಯಿದ್ದು, ರೋಮರಹಿತವಾಗಿರುತ್ತವೆ, 2-ಹಾಲೆಗಳಿರುತ್ತವೆ, ಕೆಳಗಿನದು ಅಗಲವಾಗಿ, ದುಂಡಗಿರುತ್ತದೆ, ಮೇಲಿನದು ಉದ್ದವಾಗಿದ್ದು ಮೊಂಡಾಗಿರುತ್ತದೆ, ರೋಮರಹಿತವಾಗಿರುತ್ತದೆ, ಮಾಗುವ ಮುಂಚೆಯೇ ಬಿರಿಯುತ್ತದೆ.; ತಳದಲ್ಲಿ , 1 ಸೆಂ.ಮೀ ಉದ್ದದ, ಅಂಡಾಭ ದಿಂದ ಅಂಡಾಕಾರದಲ್ಲಿರುವ, 1 ಬೀಜವಿರುತ್ತದೆ.