ಟೆರೊಸ್ಪರ್ಮಮ್ ಅಸೆರಿಫೋಲಿಯಮ್ (ಎಲ್.) ವಿಲ್ಡ್.

ಕನ್ನಡದ ಹೆಸರು : Kanaka champaka ಕನಕ ಚಂಪಕ
ಸಾಮಾನ್ಯ ಹೆಸರು : ಬಾಯೂರ್ ಟ್ರೀ
ಕುಟುಂಬದ ಹೆಸರು : ಮಾಲ್ವೇಸೀ
ವೈಜ್ಞಾನಿಕ ಹೆಸರು : ಟೆರೊಸ್ಪರ್ಮಮ್ ಅಸೆರಿಫೋಲಿಯಮ್ (ಎಲ್.) ವಿಲ್ಡ್.
ಪ್ರಭೇದದ ಪ್ರಕಾರ: ಸ್ವದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಜನವರಿ - ಏಪ್ರಿಲ್
ಹಣ್ಣಾಗುವ ಅವಧಿ: ಜನವರಿ - ಏಪ್ರಿಲ್
ಮೂಲ: ಆಗ್ನೇಯ ಏಷ್ಯಾ

ಉಪಯೋಗಗಳು

ಇವುಗಳನ್ನು ಊಟದ ತಟ್ಟೆಗಳಾಗಿ ಬಳಸಬಹುದು, ಜೊತೆಗೆ ಸರಕುಗಳನ್ನು ಸುತ್ತುವ ಮೂಲಕ ಪ್ಯಾಕೇಜಿಂಗ್ ಮತ್ತು ಶೇಖರಣೆಗಾಗಿ ಬಳಸಬಹುದು. ಭಾರತದಲ್ಲಿ ಇವುಗಳನ್ನು ಊಟದ ತಟ್ಟೆಗಳು ಮತ್ತು ಸಾಂಬಾರಿನ ಬಟ್ಟಲುಗಳಾಗಿ ತಯಾರಿಸಲಾಗುತ್ತದೆ, ಕೆಲವು ಕೊಂಬೆಗಳೊಂದಿಗೆ ಒಟ್ಟಿಗೆ ಹೊಲಿಯಲಾಗುತ್ತದೆ. ಬರ್ಮಾದಲ್ಲಿ, ತಂಬಾಕನ್ನು ಒಣಗಿಸಲು ಸಹ ಬಳಸಲಾಗುತ್ತದೆ. ಎಲೆಗಳನ್ನು ಛಾವಣಿಗಳನ್ನು ಬಲಪಡಿಸುವ ಮತ್ತು ಸೋರಿಕೆಯನ್ನು ತಪ್ಪಿಸುವ ಕಚ್ಚಾ ಸಾಧನವಾಗಿಯೂ ಬಳಸಬಹುದು. ಎಲೆಗಳ ಕೂದಲುಳ್ಳ ಕೆಳ ಮೇಲ್ಮೈ ರಕ್ತಸ್ರಾವವನ್ನು ನಿಲ್ಲಿಸುತ್ತದೆ ಮತ್ತು ಬೆಂಕಿಯನ್ನು ಕಿಡಿಮಾಡುವ ಟಿಂಡರ್ (ದೂದಿ, ಕಿಡಿಯಿಂದ ಬೇಗ ಹೊತ್ತಿಕೊಳ್ಳುವ ಒಣವಸ್ತು) ಆಗಿ ಬಳಸಬಹುದು.

ವಿವರಣೆ

12 ರಿಂದ 15 ಮೀ ಎತ್ತರವಿರುವ ನಿತ್ಯಹರಿದ್ವರ್ಣ ಮರವಾಗಿದೆ; ತೊಗಟೆ ನಯವಾಗಿರುತ್ತದೆ, ಹಾಗೂ ಬೂದಿ ಬಣ್ಣದಲ್ಲಿರುತ್ತದೆ; ಕಿರುಕೊಂಬೆಗಳು ಕಬ್ಬಿಣ ತುಕ್ಕು ಹಿಡಿದ ರೀತಿ ಕಾಣುವ ಮೃದುವಾದ ತುಪ್ಪಳವನ್ನು ಹೊಂದಿರುತ್ತವೆ. ಎಲೆಗಳು ಬಹುರೂಪಿಯಾಗಿವೆ, ಅಂಡಾಕಾರದಿಂದ ಕಕ್ಷೀಯ ಅಥವಾ ಆಯತಾಕಾರ, ಹೃದಯದ ಆಕಾರದಲ್ಲಿರುತ್ತವೆ. ಎಲೆಯ ಅಡಿಯಲ್ಲಿ ದಟ್ಟವಾಗಿ ಬೂದು ಬಣ್ಣದ ಉಣ್ಣೆಯ ರೀತಿಯ ಕೂದಲಿನಿಂದ ಮುಚ್ಚಿರುತ್ತವೆ. ಕೆಲವೊಮ್ಮೆ ತಳವು ಗುರಾಣಿ ಆಕಾರದಲ್ಲಿರುತ್ತವೆ. ಸಂಪೂರ್ಣ ಅಥವಾ ಅಲೆಅಲೆಯಾದ ತುದಿಯನ್ನು ಹೊಂದಿದ್ದು ಅಂಚು ಒರಟಾಗಿ ಗರಗಸದ ಹಲ್ಲಿನ ರೀತಿ ಇರುತ್ತವೆ. ಪುಷ್ಪಮಂಜರಿ ಮರದ ಅಕ್ಷದಿಂದ ಬೆಳೆಯುವ ಅಥವಾ ಒಂಟಿಯಾಗಿ ಸಪಾಟಾದ-ಮೇಲ್ಭಾಗದ (ಸೈಮ್) ಹೂಗೊಂಚಲನ್ನು ಹೊಂದಿರುತ್ತವೆ. ಹೂವುಗಳು ಸಣ್ಣ ಮೃದುವಾದ ಕೂದಲಿನಿಂದ ಮುಚ್ಚಲ್ಪಟ್ಟಿವೆ, ಹೆಚ್ಚು ಪರಿಮಳಯುಕ್ತ ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತವೆ. ಉದ್ದವಾದ, ಮರದಂತಹ ಕಂದು ಬಣ್ಣವನ್ನುಹೊಂದಿದ ,ಸರಳ, ಒಣ, ಹಾಗೂ ಬೀಜವನ್ನು ಬಿಡುಗಡೆ ಮಾಡಲು ತೆರೆದುಕೊಳ್ಳುವ (ಕ್ಯಾಪ್ಸುಲ್) ಹಣ್ಣನ್ನು ಹೊಂದಿರುತ್ತವೆ. ಹಣ್ಣುಗಳು 5 ಭಾಗಗಳನ್ನು ಹೊಂದಿದ್ದು ಮೇಲ್ಮೈ ಉಬ್ಬಿನ ರಚನೆಯನ್ನು ಹೊಂದಿವೆ. ಬೀಜಗಳು ಓರೆಯಾಗಿ ಅಂಡಾಕಾರದಲ್ಲಿರುತ್ತವೆ, ದೊಡ್ಡ ಪೊರೆಯ ರೆಕ್ಕೆಯೊಂದಿಗೆ ಸಂಕುಚಿತವಾಗಿರುತ್ತವೆ.