ಪುತ್ರಂಜಿವ ರಾಕ್ಸ್‌ಬರ್ಗಿ ವಾಲ್.

ಕನ್ನಡದ ಹೆಸರು : Amani putranjiva ಅಮಾನಿ ಪುತ್ರಂಜಿವ
ಸಾಮಾನ್ಯ ಹೆಸರು : ಪುತ್ರಂಜೀವ
ಕುಟುಂಬದ ಹೆಸರು : ಪುತ್ರಂಜಿವೇಸೀ
ವೈಜ್ಞಾನಿಕ ಹೆಸರು : ಪುತ್ರಂಜಿವ ರಾಕ್ಸ್‌ಬರ್ಗಿ ವಾಲ್.
ಪ್ರಭೇದದ ಪ್ರಕಾರ: ಸ್ವದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ - ಆಗಸ್ಟ್
ಹಣ್ಣಾಗುವ ಅವಧಿ: ಮಾರ್ಚ್ - ಆಗಸ್ಟ್
ಮೂಲ: ಆಗ್ನೇಯ ಏಷ್ಯಾ, ಭಾರತೀಯ ಉಪಖಂಡ, ದಕ್ಷಿಣ ಚೀನಾ

ಉಪಯೋಗಗಳು

ಎಲೆಗಳು ಮತ್ತು ಹಣ್ಣುಗಳ ಕಷಾಯವನ್ನು ಯಕೃತ್ತಿನ ಸಮಸ್ಯೆಗಳು, ಶೀತಗಳು, ಜ್ವರಗಳು ಮತ್ತು ಸಂಧಿವಾತವನ್ನು ಗುಣಪಡಿಸಲು ಬಳಸಲಾಗುತ್ತದೆ.

ವಿವರಣೆ

20 ಮೀ ಎತ್ತರದವರೆಗೆ ಬೆಳೆಯುವ, ನಿತ್ಯಹರಿದ್ವರ್ಣ ಮರಗಳಾಗಿವೆ. ತೊಗಟೆಯು ಗಾಢ ಬೂದು ಬಣ್ಣವನ್ನು ಹೊಂದಿದ್ದು, ಎಳೆಯದಿದ್ದಾಗ ನಸುಬಿಳಿ ಬಣ್ಣವನ್ನು ಹೊಂದಿರುವ ಜೊತೆಗೆ ಸಮತಲವಾದ ಲೆಂಟಿಸೆಲ್‌ (ವಾತಾವರಣ ಮತ್ತು ಆಂತರಿಕ ಅಂಗಾಂಶಗಳ ನಡುವೆ ಗಾಳಿಯ ವಿನಿಮಯವನ್ನು ಅನುಮತಿಸುವ ಮರದ ಸಸ್ಯದ ಕಾಂಡದಲ್ಲಿ ಅನೇಕ ಎತ್ತರದ ರಂಧ್ರಗಳಲ್ಲಿ ಒಂದು) ಹೊಂದಿರುತ್ತವೆ. ರೆಂಬೆಗಳು ಸಾಮಾನ್ಯವಾಗಿ ನೇತಾಡುತ್ತಿರುತ್ತವೆ; ಕಿರುಕೊಂಬೆಗಳು ದುಂಡಾಗಿ, ಕಂದು ಅಥವಾ ಕಪ್ಪು ಬಣ್ಣವನ್ನು ಹೊಂದಿರುತ್ತವೆ, ಅಗಲವು ಬಹಳ ಕಿರಿದಾಗಿದ್ದು, ಮೃದುತುಪ್ಪಳದಿಂದ ಕೂಡಿರುತ್ತದೆ. ಎಲೆಗಳು ಸರಳ, ಪರ್ಯಾಯ, ಅಂಡಾಕಾರದದಿಂದ ಆಯತಾಕಾರದಲ್ಲಿದ್ದು, ರೋಮರಹಿತವಾಗಿ, ಕಡು ಹಸಿರು ಬಣ್ಣವನ್ನು ಹೊಂದಿರುತ್ತವೆ. ಮತ್ತು ಇವು ಹೊಳೆಯುವ, ಚರ್ಮದ ವಿನ್ಯಾಸವನ್ನು ಹೊಂದಿರುತ್ತವೆ. ಇವು ಬಾಗಿದ ತಳ, ಸ್ವಲ್ಪ ಕಿರಿದಾಗಿ ಮೊನಚಾದ, ಮತ್ತು ಚೂಪಾದ ಅಥವಾ ಮೊಂಡಾಗಿ ಒರಟು ಒರಟಾಗಿ ಕಚ್ಚು ಮಾಡಿದಂತಹ ಎಲೆಯ ತುದಿಯನ್ನು ಹೊಂದಿರುತ್ತವೆ. ಹಾಗೂ ಗರಗಸದ ಹಲ್ಲಿನ ರೀತಿಯ ಅಂಚನ್ನು ಹೊಂದಿರುತ್ತವೆ. ಗಂಡು ಹೂಗೊಂಚಲುಗಳು ಅಕ್ಷಾಕಂಕುಳಿನಲ್ಲಿ ಕವಲೊಡೆದ, ಅನಿರ್ದಿಷ್ಟ ಹೂಗೊಂಚಲಾಗಿದ್ದು, ರೇಸಿಮ್ ಅನ್ನು ಹೋಲುತ್ತದೆ ಆದರೆ ಇವು ಕಾಂಡವಿಲ್ಲದೆ ನೇರವಾಗಿ ಜೋಡಿಸಲ್ಪಟ್ಟಿರುತ್ತವೆ, ಹೆಣ್ಣು ಹೂವುಗಳು ಪ್ರತ್ಯೇಕವಾಗಿ ಒಂಟಿಯಾಗಿರುತ್ತದೆ. ಹೂವುಗಳು ಏಕಲಿಂಗಿ ಆಗಿವೆ, ಚಿಕ್ಕದಾಗಿರುತ್ತವೆ, ಹಳದಿ ಬಣ್ಣದಲ್ಲಿರುತ್ತವೆ; ಹಣ್ಣು ಒಂದು ಡ್ರೂಪ್ (ತೆಳುವಾದ ಚರ್ಮವನ್ನು ಹೊಂದಿರುವ ತಿರುಳಿರುವ ಹಣ್ಣು), ಅಂಡಾಕಾರದಿಂದ-ದೀರ್ಘವೃತ್ತಾಭ ಆಕಾರದಲ್ಲಿದ್ದು, ಬಿಳಿ ಬಣ್ಣದ ಮೃದುವಾದ ಕೂದಲಿನಿಂದ ಮುಚ್ಚಿರುತ್ತದೆ; 6 ರಿಂದ 25 ಮಿಮೀ ಉದ್ದದ ಪೆಡಿಸೆಲ್ (ಪೆಡಿಸೆಲ್ ಒಂದು ಕಾಂಡವಾಗಿದ್ದು ಅದು ಹೂಗೊಂಚಲುಗಳಿಗೆ ಒಂದೇ ಹೂವನ್ನು ಜೋಡಿಸುತ್ತದೆ) ಹೊಂದಿರುತ್ತವೆ.