ರೋಸೋಡೆಂಡ್ರಾನ್ ಡೊನ್ನೆಲ್-ಸ್ಮಿಥಿ (ರೋಸ್) ಮಿರಾಂಡಾ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಪ್ರೈಮಾವೆರಾ, ಗೋಲ್ಡ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ರೋಸೋಡೆಂಡ್ರಾನ್ ಡೊನ್ನೆಲ್-ಸ್ಮಿಥಿ (ರೋಸ್) ಮಿರಾಂಡಾ
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಮಧ್ಯ ಅಮೇರಿಕಾ, ಮೆಕ್ಸಿಕೋ

ಉಪಯೋಗಗಳು

ಇದನ್ನು ಉತ್ತಮವಾದ ಪೀಠೋಪಕರಣಗಳು, ಕಪಾಟುಗಳು, ಅಲಂಕಾರಿಕ ಹೊದಿಕೆಗಳು, ನೆಲಹಾಸು ಇತ್ಯಾದಿಗಳಿಗೆ ಬಳಸಲಾಗುತ್ತದೆ. ಮರವನ್ನು ಇಂಧನ ಮೂಲವಾಗಿಯೂ ಬಳಸಲಾಗುತ್ತದೆ.

ವಿವರಣೆ

7-13 ಮೀ ಎತ್ತರಕ್ಕೆ ಬೆಳೆಯುವ, ದೊಡ್ಡ ಪತನಶೀಲ ಮರವಾಗಿದೆ. ಕೆಲವೊಮ್ಮೆಇವು 35 ಮೀ. ಎತ್ತರದವರೆಗೂ ಬೆಳೆಯುತ್ತವೆ. ಎಲೆಗಳು ಸರಳವಾಗಿರುತ್ತವೆ, ಇವು 1 ಎಲೆಯನ್ನು ಅಥವಾ ಅಂಗೈ ರೀತಿ 3 ರಿಂದ 7 ಎಲೆಗಳನ್ನು ಹೊಂದಿರುತ್ತವೆ; ಚಿಗುರೆಲೆಗಳು ಆಯತಾಕಾರದದಿಂದ ಅಂಡಾಕಾರದಲ್ಲಿರುತ್ತವೆ, ಇವು ಪೊರೆಯಿಂದ ಕಾಗದದ ರೀತಿ ತೆಳ್ಳಗಾಗಿದ್ದು, ಮೃದುವಾದ ತುಪ್ಪಳದಿಂದ ಕೂಡಿದ, ಅಥವಾ ಹೊಳಪುಳ್ಳ ಕೆಳಭಾಗವು ಲೆಪಿಡೋಟ್‌ಗಳಿಂದ (ಸ್ಕರ್ಫಿ ರಕ್ಷಣೆಯ ಕೋಟ್) ಕೂಡಿರುತ್ತವೆ. ಎಲೆಯ ಬುಡ ಮೊಟಕುಗೊಂಡು, ತುದಿ ಚೂಪಾಗಿ ಕಿರಿದಾಗಿ ಉದ್ದವಾಗಿ, ಸಂಪೂರ್ಣ ಗರಗಸದಂತೆ ಹಲ್ಲುಳ್ಳ ಅಂಚನ್ನು ಹೊಂದಿರುತ್ತವೆ. ರೆಂಬೆಗಳ ತುದಿಯಲ್ಲಿ ಕವಲೊಡೆದ ಹೂಗೊಂಚಲನ್ನು ಹೊಂದಿರುತ್ತವೆ. ಹೂಗಳು ದ್ವಿಲಿಂಗಿಯಾಗಿದ್ದು, ಕೊಳವೆಯಾಕಾರದಲ್ಲಿರುತ್ತವೆ. ಇವು ಪ್ರಕಾಶಮಾನವಾದ ಹಳದಿ ಬಣ್ಣದಲ್ಲಿರುತ್ತವೆ, ಚದುರಿದ ಇವು ಸಣ್ಣ ಮೃದುವಾದ ಕೂದಲಿನಲ್ಲಿ ಮುಚ್ಚಿರುತ್ತವೆ. ಸರಳ, ಒಣ, ಮತ್ತು ಬೀಜವನ್ನು ಬಿಡುಗಡೆ ಮಾಡಲು ಬಿರಿಯುವ (ಕ್ಯಾಪ್ಸುಲ್) ಹಣ್ಣನ್ನು ಹೊಂದಿದ್ದು, ನೇರವಾಗಿ ಉದ್ದವಾಗಿರುತ್ತದೆ ಹಾಗೂ ಇವು ಸಂಪೂರ್ಣವಾಗಿ ಮೃದುವಾದ ತುಪ್ಪಳದಿಂದ ಮುಚ್ಚಿರುತ್ತವೆ. ಬೀಜಗಳು ಗಾಜಿನ ರೀತಿ ಕಾಣುವ ಪೊರೆಯ ರೆಕ್ಕೆಗಳಿಂದ ಆವೃತವಾಗಿರುತ್ತವೆ.