ಅಫಾನಮಿಕ್ಸಿಸ್ ಪಾಲಿಸ್ಟಾಚ್ಯಾ (ವಾಲ್.) ಆರ್.ಪಾರ್ಕರ್

ಕನ್ನಡದ ಹೆಸರು : ಮುಖ್ಯಮುತ್ತಗೆ, ಮುಳ್ಳುಮುತ್ತಗ
ಸಾಮಾನ್ಯ ಹೆಸರು : ಪಿತ್ರಾಜ ಮರ
ಕುಟುಂಬದ ಹೆಸರು : ಮೆಲಿಯೇಸಿ
ವೈಜ್ಞಾನಿಕ ಹೆಸರು : ಅಫಾನಮಿಕ್ಸಿಸ್ ಪಾಲಿಸ್ಟಾಚ್ಯಾ (ವಾಲ್.) ಆರ್.ಪಾರ್ಕರ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಭಾರತೀಯ ಉಪಖಂಡ

ಉಪಯೋಗಗಳು

ತೊಗಟೆಯನ್ನು ಗುಲ್ಮ, ಪಿತ್ತಜನಕಾಂಗದ ಕಾಯಿಲೆಗಳು, ಗೆಡ್ಡೆ ಮತ್ತು ಕಿಬ್ಬೊಟ್ಟೆಯ ಸಮಸ್ಯೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಬೀಜದ ಎಣ್ಣೆಯನ್ನು ಸಂಧಿವಾತದ ಚಿಕಿತ್ಸೆಗೆ ಬಳಸಲಾಗುತ್ತದೆ. .

ವಿವರಣೆ

20-30 ಮೀ ಎತ್ತರದ ನಿತ್ಯಹರಿದ್ವರ್ಣ ಮರ . ಭಿನ್ನಪತ್ರ ಎಲೆಗಳು, ಇಂಪಾರಿಪಿನೇಟ್, ಆಲ್ಟರ್ನೇಟ್ , ಪುಲ್ವಿನೇಟ್, ಒಬ್ಲಾಂಗ್ –ಎಲಿಪ್ಟಿಕ್, ಎಳೆಯದಾದಾಗ ಪೊರೆಯಂತಿದ್ದು, ನಂತರ ಚರ್ಮದಂತೆ ಒರಟಾಗುತ್ತವೆ, ಬುಡ ಓರೆಯಾಗಿದ್ದು, ತುದಿ ಅಕ್ಯೂಟ್ ಅಥವಾ ಅಕ್ಯುಮಿನೇಟ್ ಆಗಿದ್ದು, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಪ್ಯಾನಿಕಲ್ ಗಳು. ಹೂವು 6-7 ಮಿ ವ್ಯಾಸದ ಬಿಳಿಯಾದ ಪಾಲಿಗ್ಯಾಮಸ್ ಹೂವು. ಹಣ್ಣು ಒಂದೇ ಬೀಜದ ಕಿತ್ತಳೆ-ಕೆಂಪು ಬಣ್ಣದ ಉಪಗೋಳಾಕಾರದ ಕ್ಯಾಪ್ಸುಲ್.